– ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂತ್ರಸ್ತನ ಸ್ಫೋಟಕ ಹೇಳಿಕೆ
ಮುಂಬೈ: ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಪ್ರವಾಸಿಗನೊಬ್ಬ, ಭಯೋತ್ಪಾದಕರ ದಾಳಿ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ದಾಳಿ ವೇಳೆ ಮುಂಬೈ ಮೂಲದ ಸುಬೋಧ್ ಪಾಟೀಲ್‌ಗೂ ಗುಂಡು ತಗುಲಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚೇತರಿಸಿಕೊಂಡು ಮನೆಗೆ ವಾಪಸ್ ಆಗಿರುವ ಸುಬೋಧ್, ಪಹಲ್ಗಾಮ್ ದಾಳಿ ಭೀಕರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ
ಎಲ್ಲ ಹಿಂದೂ ಪ್ರವಾಸಿಗರು ಸಾಲಿನಲ್ಲಿ ನಿಲ್ಲುವಂತೆ ಕೇಳಲಾಯಿತು. ಎಷ್ಟೇ ಕರುಣೆಯಿಂದ ಮನವಿ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಇದನ್ನು ವಿರೋಧಿಸಲು ಪ್ರಯತ್ನಿಸಿದವರಿಗೆ ಗುಂಡಿ ಹಾರಿಸಲಾಯಿತು. ಘಟನೆಯಲ್ಲಿ ನನ್ನ ಕುತ್ತಿಗೆಗೂ ಗುಂಡು ಬಿತ್ತು ಎಂದು ಸುಬೋಧ್ ಹೇಳಿಕೊಂಡಿದ್ದಾರೆ.
ಕುತ್ತಿಗೆಗೆ ಗುಂಡು ತಗುಲಿದ ನಂತರ ನಾನು ಪ್ರಜ್ಞೆ ತಪ್ಪಿದ್ದೆ. ನನಗೆ ಪ್ರಜ್ಞೆ ಬಂದಾಗ, ನನ್ನ ಸುತ್ತಲೂ ಅನೇಕ ಮೃತದೇಹಗಳು ಬಿದ್ದಿದ್ದವು. ಕುದುರೆ ಮೇಲೆ ಸವಾರಿ ಮಾಡಿಸುವ ಕೆಲವರು ಕುಡಿಯಲು ನೀರು ಕೊಟ್ಟರು. ಭಯ ಪಡಬೇಡಿ ಎಂದು ಧೈರ್ಯ ತುಂಬಿ, ಅಲ್ಲಿಂದ ಆಸ್ಪತ್ರೆಗೆ ಸಾಗಿಸಿದರು. ಎಲ್ಲವೂ ಐದು ನಿಮಿಷದಲ್ಲಿ ಆಯ್ತು, ನಾನು ಆ ಐದು ನಿಮಿಷ ಮರೆಯಲಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಭಯೋತ್ಪಾದಕ ಸಂಪರ್ಕಗಳು ರಹಸ್ಯವೇನಲ್ಲ: ಬಿಲಾವಲ್ ಭುಟ್ಟೋ
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಈಚೆಗೆ ದಾಳಿ ನಡೆಸಿದ್ದರು. ಗುಂಡಿನ ದಾಳಿ 26 ಪ್ರವಾಸಿಗರು ಬಲಿಯಾಗಿದ್ದರು. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು.