ಬೆಂಗಳೂರು: ಚಿಕನ್ ರೋಲ್ (Chicken Roll) ಕೊಡಲಿಲ್ಲ ಅಂತಾ ಮೂವರು ಕಿಡಿಗೇಡಿಗಳು ಹೋಟೆಲ್ (Hotel) ಹುಡುಗರಿದ್ದ ರೂಮಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ನಿನ್ನೆ ತಡರಾತ್ರಿ ಇಲ್ಲಿನ ಹನುಮಂತನಗರ ಪೊಲೀಸ್ ಠಾಣಾ (Hanumantanagar Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಡರಾತ್ರಿ ಚಿಕನ್ ರೋಲ್ ಕೇಳ್ಕೊಂಡು ಹನುಮಂತನಗರದ ಕುಮಾರ್ ಹೋಟೆಲ್‌ಗೆ ಮೂವರು ಯುವಕರು ಬಂದಿದ್ದಾರೆ. ಹೋಟೆಲ್ ಸಿಬ್ಬಂದಿ ಇಲ್ಲ ಎಂದಿದ್ದಕ್ಕೆ ಯುವಕರ ನಡುವೆ ಮಾತಿನ ಚಕಮಕಿ ಆಗಿ ಗಲಾಟೆಗೆ ನಡೆದಿದೆ. ಇದನ್ನೂ ಓದಿ: ಹಾಸನದಲ್ಲಿ 13ರ ಬಾಲಕಿ ಗರ್ಭಿಣಿ – ಅತ್ಯಾಚಾರ ಎಸಗಿದ್ದ ಮೂವರು ಅರೆಸ್ಟ್
ಗಲಾಟೆಯಲ್ಲಿ ಹೋಟೆಲ್ ಸಿಬ್ಬಂದಿ ಯುವಕರಿಗೆ ತದುಕಿ ಕಳಿಸಿದ್ದಾರೆ. ಏಟು ತಿಂದು ಸುಮ್ಮನಾಗದ ಗ್ರಾಹಕ ದೇವರಾಜ್, ಗಣೇಶ್ ಹಾಗೂ ದೇವೇಗೌಡ ನೇರ ಪೆಟ್ರೋಲ್‌ಬಂಕ್‌ಗೆ ತೆರಳಿ 8 ಲೀಟರ್ ಪೆಟ್ರೋಲ್ ಖರೀದಿಸಿದ್ದಾರೆ. ಅಲ್ಲಿಂದ ಸೀದಾ ಕುಮಾರ್ ಹೋಟೆಲ್ ಪಕ್ಕದಲ್ಲೇ ಇರೋ ಹೋಟೆಲ್ ಸಿಬ್ಬಂದಿಯ ರೂಂ ಕಡೆ ಹೋಗಿದ್ದಾರೆ. ಮನೆಯ ಬಾಗಿಲು, ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ರೂಮ್‌ನಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನಾವು ಬಾಬರ್ ಅಜಮ್‍ಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇವೆ – ಪಾಕ್ ಅಭಿಮಾನಿಗಳಿಂದ ಕೊಹ್ಲಿಗೆ ಸಂದೇಶ
ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ದೇವರಾಜ್ ಹಾಗೂ ಗಣೇಶ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.