ಪ್ರಚೋದನೆ ಮಾಡಿ ಈ ಸ್ಥಿತಿಗೆ ತಂದಿದ್ದಾರೆ, ಒಳ್ಳೆತನ ಅವರನ್ನು ಕಾಪಾಡುತ್ತೆ: ದರ್ಶನ್ ಬಾವ ಮಂಜುನಾಥ್

Public TV
1 Min Read
Manjunath Darshan Brother In Law

ಕಾರವಾರ: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಪೊಲೀಸರ ತನಿಖೆ ಎದುರಿಸುತ್ತಿದ್ದು, ದರ್ಶನ್ ಸಹೋದರಿ ದಿವ್ಯ ಅವರ ಪತಿ ಮಂಜುನಾಥ್ (Manjunath) ಮೊದಲ ಬಾರಿಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ.

ಅವರನ್ನು ಪ್ರವೋಕ್ ಮಾಡಿ ಈ ಸ್ಥಿತಿಗೆ ತಂದಿದ್ದಾರೆ. ಅವರ ಗುಣ ಈ ರೀತಿಯಾಗಿಲ್ಲ. ಅವರು ಖುಷಿಯಾಗಿ ಓಡಾಡಿಕೊಂಡಿದ್ದರು. ಅವರಿಗೆ ಕಿರಿ ಕಿರಿಯಾಗುವಂತೆ ಮಾಡಿದಾಗ ಈ ರೀತಿ ಆ್ಯಕ್ಷನ್ ತೆಗೆದುಕೊಳ್ಳುವ ಹಾಗೆ ಮಾಡಿ ಸಮಸ್ಯೆ ಆಗುತ್ತಿದೆ. ಅವರ ಒಳ್ಳೆತನ ಅವರನ್ನು ಕಾಪಾಡುತ್ತದೆ ಎಂದು ನೋವು ತೋಡಿಕೊಂಡರು. ಇದನ್ನೂ ಓದಿ: ಫ್ಯಾನ್ಸ್ ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? – ದರ್ಶನ್ ಕೃತ್ಯ ಖಂಡಿಸಿದ ರಮ್ಯಾ

darshan

ಅವರ ಬೇಸಿಕ್ ಗುಣ ಅದಲ್ಲ. ಖುಷಿಯಾಗಿ ಜಾಲಿಯಾಗಿ ಇರುವವರು ಅವರು. ಪ್ರಾಣಿ-ಪಕ್ಷಿ ಅಂದುಕೊಂಡು ಚೆನ್ನಾಗಿದ್ದರು. ಕೋರ್ಟ್ ಎಲ್ಲಾ ತೀರ್ಮಾನ ಮಾಡುತ್ತೆ. ಅವರ ಲೈಫ್ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ನೋಡೋರು ಬೇರೆ ಥರ ತಿಳಿದುಕೊಂಡಿದ್ದಾರೆ. ಜನರೆಲ್ಲಾ ಶಾಂತರಾಗಿರಬೇಕು. ಒಳ್ಳೆಯ ತೀರ್ಮಾನ ಬಂದು ಸರಿ ಹೋಗುತ್ತದೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಅಭಿಮಾನಿಗಳು ಸಂತೋಷವಾಗಿರಬೇಕು. ಡಿ ಬಾಸ್ ಮತ್ತೆ ಬರುತ್ತಾರೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಖುಷಿಯಾಗಿ ಇರಬೇಕು ಎಂದರು. ಇದನ್ನೂ ಓದಿ: ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

ಅವರು ಹೊರಗೆ ಬಂದ ಮೇಲೆ ಮತ್ತೆ ಸಿನಿಮಾ ಮಾಡಿಕೊಂಡು ಇರಬೇಕು. ಜನರಿಗೆ ಸಹಾಯ ಮಾಡಿಕೊಂಡು ಖುಷಿಯಾಗಿ ಇರಬೇಕು. ಅವರು ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಎಲ್ಲಾ ಒಳ್ಳೆಯದಾಗಿ ಹೊರಬರುವ ನಿರೀಕ್ಷೆ ಇದೆ. ಅವರ ಒಳ್ಳೆತನ ಅವರನ್ನು ಕಾಪಾಡುತ್ತೆ ಎಂದು ಹೇಳಿದರು. ಇದನ್ನೂ ಓದಿ: G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?

Share This Article