– ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮೋದಿ ಬಗ್ಗೆ ಹೆಮ್ಮೆ ಪಡ್ತಾರೆ ಎಂದ ಕೇಂದ್ರ ಸಚಿವ
ನವದೆಹಲಿ: 2008ರ ಮುಂಬೈ ದಾಳಿಯ ಉಗ್ರ ತಹವ್ವೂರ್ ರಾಣಾನನ್ನ (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗುತ್ತಿದೆ. ಆದ್ರೆ ಈ ವಿಷಯದಲ್ಲೂ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಜಟಾಪಟಿ ನಡೆದಿದೆ. ಮುಂಬೈ ದಾಳಿಯ ಉಗ್ರರನ್ನು ಬಂಧಿಸುವ ವಿಚಾರದಲ್ಲಿ ಅಂದಿನ ಯುಪಿಎ ಸರ್ಕಾರದ ನಡೆಯನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ತೀವ್ರವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡರು. ಆದ್ರೆ ಭಾಗಿಯಾಗಿರುವವರನ್ನು ಶಿಕ್ಷಿಸಲು ಹಿಂದಿನ ಯುಪಿಎ ಸರ್ಕಾರ (UPA Government) ಏನೂ ಮಾಡಲಿಲ್ಲ. ಸೆರೆ ಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್‌ಗೆ (Ajmal Kasab) ಬಿರಿಯಾನಿ ತಿನ್ನಿಸುವ ಕೆಲಸ ಮಾಡಿತ್ತು, ಇದನ್ನ ದೇಶದ ಜನ ಮರೆತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಣಾನಿಗೆ ಬಿರಿಯಾನಿ ಕೊಡಬೇಡಿ: ಮುಂಬೈ ದಾಳಿಯಲ್ಲಿ ಜನರ ರಕ್ಷಣೆಗೆ ನೆರವಾಗಿದ್ದ ಚಹಾ ಮಾರಾಟಗಾರ ಒತ್ತಾಯ
ಮುಂದುವರಿದು.. ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ನ್ಯಾಯ ದೊರಕಿಸಿಕೊಡುವ ಸಂಕಲ್ಪವನ್ನು ನರೇಂದ್ರ ಮೋದಿ ಅಂದೇ ಮಾಡಿದ್ದರು. ಅಂದು ಮೋದಿ ಮಾಡಿದ ಸಂಕಲ್ಪವನ್ನು ಈಡೇರಿಸಿದ್ದಾರೆ. ಇಂದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮೋದಿ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಶ್ಲಾಘಿಸಿದ್ದಾರೆ.
ಇದೇ ವೇಳೆ ಶಿವಸೇನೆ (ಉದ್ಧವ್ ಠಾಕ್ರೆ ಬಣ) ವಿರುದ್ಧವೂ ಕಿಡಿ ಕಾರಿದ ಸಚಿವರು, ಸಂಜಯ್ ರಾವತ್ ಅವರು, ಮುಸ್ಲಿಂ ವ್ಯಕ್ತಿ ಎಂತಹ ದೊಡ್ಡ ಅಪರಾಧದಲ್ಲಿ ತೊಡಗಿಸಿಕೊಂಡಿದ್ದರೂ ಸಮರ್ಥಿಸಿಕೊಳ್ಳುತ್ತಾರೆ. ಏಕೆಂದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆಯು ಕಾಂಗ್ರೆಸ್‌ಗಿಂತ ಹೆಚ್ಚಿನ ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ. ಪ್ರಧಾನಿ ಮೋದಿಯವರಂತೆ ಧನಾತ್ಮಕ ಚಿಂತನೆ ಹೊಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ
ಮುಂಬೈ ದಾಳಿ ಬಳಿಕ ಸೆರೆ ಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು 2012ರಲ್ಲಿ ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ಬಾಂಬ್ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು