ಇಸ್ಲಾಮಾಬಾದ್: 2016ರ ಟಿ20 ವಿಶ್ವಕಪ್ (World Cup) ಬಳಿಕ ಭಾರತಕ್ಕೆ ಪಾಕ್ ತಂಡ ಈ ವರ್ಷ ಕಾಲಿಡುತ್ತಿದೆ. ಈ ಮೂಲಕ ಸಾಂಪ್ರದಾಯಿಕ ಎದುರಾಳಿಗಳ ಹಣಾಹಣಿ ಅಕ್ಟೋಬರ್ 15ರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಕ್ಷಿಯಾಗಲಿದೆ.
ಈ ನಡುವೆ 2011ರ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಘಟನೆಯೊಂದು ಮತ್ತೆ ಚರ್ಚೆಗೆ ಒಳಗಾಗಿದೆ. ಭಾರತದೊಂದಿಗೆ (Team India) ಆಡಿದ್ದ ಪಾಕಿಸ್ತಾನವು ಸೆಮಿಫೈನಲ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡದ ವಿರುದ್ಧ ಸೋತಿತ್ತು. ಪಂದ್ಯದ ವೇಳೆ ನಾಟಕೀಯ ಮತ್ತು ವಿವಾದದ ಒಂದು ಪ್ರಸಂಗ ನಡೆದಿತ್ತು. ಸಚಿನ್ ತೆಂಡೂಲ್ಕರ್ ಅವರ ಎಲ್‍ಬಿಡಬ್ಲ್ಯೂ (LBW) ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇದನ್ನೂ ಓದಿ: ಕ್ಯಾಚ್ ವಿವಾದ; ಮತ್ತೆ ಮೋಸದಾಟ ಆಡಲು ಪ್ರಯತ್ನಿಸಿತಾ ಆಸೀಸ್? – ಅಭಿಮಾನಿಗಳು ಕೆಂಡ
Advertisement
Advertisement
ಪಂದ್ಯದ 11 ನೇ ಓವರ್‌ನಲ್ಲಿ ತೆಂಡೂಲ್ಕರ್ (Sachin Tendulkar) ಎಲ್‍ಬಿಡಬ್ಲ್ಯೂ ವಿಚಾರ ಬಹಳ ಚರ್ಚೆಗೆ ಕಾರಣವಾಗಿತ್ತು. ಪಂದ್ಯದ ಬಳಿಕ ಬೌಲರ್ ಅಜ್ಮಲ್ ನಿರ್ಧಾರದ ವಿರುದ್ಧ ಬಲವಾದ ಟೀಕೆ ವ್ಯಕ್ತವಾಗಿತ್ತು.
Advertisement
ಈಗ ಮತ್ತೆ ಅಜ್ಮಲ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಸಚಿನ್ ರಿವ್ಯೂ ತೆಗೆದುಕೊಂಡರು. ಆದರೆ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ನಾನು ಮತ್ತು ಅಂಪೈರ್ ಇಬ್ಬರೂ ಔಟ್ ಎಂದು ತಿಳಿದಿದ್ದೆವು ಎಂದಿದ್ದಾರೆ.
Advertisement
ತೆಂಡೂಲ್ಕರ್ ಅಂತಿಮವಾಗಿ ಪಂದ್ಯದಲ್ಲಿ 115 ಎಸೆತಗಳಲ್ಲಿ 85 ರನ್ ಗಳಿಸಿದರು. ಅಂತಿಮವಾಗಿ ಭಾರತ ಪಾಕ್ ವಿರುದ್ಧ 29 ರನ್‍ಗಳ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು. ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್ ಇಬ್ಬರಲ್ಲಿ ಯಾರು ಶ್ರೇಷ್ಠ? – ಭಜ್ಜಿ ಪ್ರಶ್ನೆಗೆ ಶಾಕಿಂಗ್ ಉತ್ತರ ಕೊಟ್ಟ ಅಖ್ತರ್
Web Stories