ಚಿಕ್ಕಮಗಳೂರು: ಎಲ್ಲ ದರ ಏರಿಸಿಯಾಗಿದೆ. ಗಾಳಿಯೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಇವರು ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ ಎಂದು ಸಿ.ಟಿ.ರವಿ (CT Ravi) ಲೇವಡಿ ಮಾಡಿದ್ದಾರೆ.
`ಯಾರು ಏನೇ ಹೇಳಿದರೂ ನೀರಿನ ಕಂದಾಯ ಜಾಸ್ತಿ ಮಾಡೇ ಮಾಡ್ತೀವಿ’ ಎನ್ನುವ ಡಿಸಿಎಂ ಡಿಕೆಶಿ (DK Shivakumar) ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ದರ ಏರಿಸಿ ಆಗಿದೆ. ಗಾಳಿ ಏಕೆ ಬಿಟ್ಟಿದ್ದೀರಾ ಅದನ್ನೂ ಏರಿಸಿಬಿಡಿ. ಗಾಳಿಗೊಂದಕ್ಕೆ ಟ್ಯಾಕ್ಸ್ ಹಾಕಿದ್ರೆ ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ. ಔರಂಗಜೇಬ್ ಜೇಜಿಯಾ ತಲೆದಂಡ ಹಾಕಿದ್ನಂತೆ, ಇವ್ರು ಅವ್ರಪ್ಪ ಅಂತ ತೋರ್ಸಕ್ಕೆ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಿಮ್ಮೊಂದಿಗೆ ನಾವಿದ್ದೇವೆ.. ಸಿಎಂಗೆ ಶಾಸಕರ ಬಲ; ರಾಷ್ಟ್ರಪತಿಗಳ ಮುಂದೆ 135 ಶಾಸಕರಿಂದ ಪೆರೇಡ್‌ಗೆ ಸಂಪುಟ ನಿರ್ಧಾರ
ಡಿಕೆಶಿಯವರೇ ಜನವಿರೋಧಿ ಆಡಳಿತಕ್ಕೆ ಆಯಸ್ಸು ಕಮ್ಮಿ. ಲಿಕ್ಕರ್, ಸ್ಟಾಂಪ್ ಡ್ಯೂಟಿ, ಕರೆಂಟ್, ನೀರು ಹೀಗೆ ಎಲ್ಲಾ ಜಾಸ್ತಿ ಮಾಡಿದ್ದಾರೆ. ಮುಂದಿನ ಬಾರಿ ಜನ ಬುದ್ಧಿ ಕಲಿಸುವುದಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಒಂದೆಡೆ ಗ್ಯಾರಂಟಿ ಕೊಟ್ಟು ಮತ್ತೊಂದೆಡೆ ಎಲ್ಲರ ಜೇಬಿಗೂ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಕಳ್ಳರು ಅಟೆನ್ಷನ್ ಡ್ರಾ ಮಾಡುತ್ತಾ 5 ರೂ. ಬೀಳಿಸಿ 500 ರೂ. ಹೊಡಿಯುತ್ತಾರೆ. ಈಗ ಕಾಂಗ್ರೆಸ್ ಸರ್ಕಾರ ಅದನ್ನೇ ಮಾಡುತ್ತಿದೆ. ಜನರಿಗೆ 2,000 ರೂ. ಕೊಟ್ಟು 20 ಸಾವಿರ ರೂ. ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Madikeri| ನಿಯಂತ್ರಣ ತಪ್ಪಿ ಕಾರು ಅಪಘಾತ – ಚಾಲಕ ಸಾವು
ಮುಡಾ ಹಗರಣದಲ್ಲಿ ದಾಖಲೆಗೆ ವೈಟ್ನರ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಡಾ ಹಗರಣದ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಪ್ರಯತ್ನ ಮಾಡಿದ್ದೇವೆ. ಎಲ್ಲಾ ಗೊತ್ತಿದ್ದ ಸಿಎಂ ಸಿದ್ದರಾಮಯ್ಯ ಅದಕ್ಕೆ ಅವಕಾಶ ನೀಡದೆ ನಿರ್ಬಂಧಿಸಿ ಪಲಾಯನ ಮಾಡಿದರು. ನಮಗೆ ಪ್ರಶ್ನೆ ಕೇಳಲು, ಅವರಿಗೆ ಉತ್ತರಿಸಲು ಅದಕ್ಕಿಂತ ದೊಡ್ಡ ವೇದಿಕೆ ಇರಲಿಲ್ಲ. ಅವರು ದಾಖಲೆ ಮೂಲಕ ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಎಲ್ಲಾ ಸತ್ಯ ಹೊರಬರುತ್ತದೆ ಎಂದು ನಮಗೆ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಸಾಲುಗಟ್ಟಿ ನಿಂತಿರುವ ವಾಹನಗಳು
40 ವರ್ಷದ ಸಾವರ್ಜನಿಕ ಜೀವನದಲ್ಲಿ ಸಿಎಂ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುವುದು ಕೇಳಿದ್ದೇವೆ. ಆರ್.ಟಿ.ಐ. ನಲ್ಲಿ 50 ಲೋಕಾಯುಕ್ತ ಕೇಸ್ ವಿಚಾರಣೆ ಆಗದೇ ಬಾಕಿ ಇದೆಯಂತೆ. ವಿಚಾರಣೆ ಆದರೆ ಸ್ವಚ್ಛವಾಗಿ ಬಣ್ಣ ಕಪ್ಪು ಎನ್ನುವುದು ಗೊತ್ತಾಗುತ್ತದೆ. ಯಾವ ವಾಷಿಂಗ್ ಪೌಡರ್‌ನಿಂದಲೂ ತೊಳೆಯಲಾಗದ ಕಪ್ಪಿದ್ದರೂ ಇರಬಹುದು. ಎಲ್ಲವೂ ತನಿಖೆಯಾದ ಮೇಲೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?
ಕುಮಾರಸ್ವಾಮಿ ಬಂಧನ ಚರ್ಚೆಯ ವಿಚಾರ ತಿಳಿಸಿದ ಅವರು, ಎಕಾಏಕಿ ಬಂಧಿಸಲು ಪುಗ್ಸಟ್ಟೆ ಪುನಗಲ್ಲಲ್ಲ. ಕುಮಾರಸ್ವಾಮಿ ಯಾವತ್ತು ನಾನು ಸಂವಿಧಾನಕ್ಕಿಂತ ಮೇಲು ಎಂದು ಹೇಳಿಲಿಲ್ಲ. 2013ರಿಂದ 18ರವರೆಗೆ ಇವರೇ ಅಧಿಕಾರದಲ್ಲಿದ್ದರೂ 2007ರ ಪ್ರಕರಣದಲ್ಲಿ ಯಾಕೆ ಸುಮ್ಮನಿದ್ದರು. 2019ರಲ್ಲಿ ಕಾಂಗ್ರೆಸ್ ಬೆಂಬಲದಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗೆಲ್ಲಾ ಕುಮಾರಸ್ವಾಮಿ ಒಳ್ಳೆಯವರು, ಈಗ ಬಿಜೆಪಿ ಜೊತೆ ಬಂದ ಮೇಲೆ ವಿಲನ್ನಾ? ಡಿಕೆಶಿ ಜೋಡೆತ್ತು, ಅಣ್ತಮ್ಮ, ಜನುಮ-ಜನುಮದ ಬಂಧ ಅಂತಿದ್ದರು. ಈಗ ಮಾಡುತ್ತಿರುವುದು ನೋಡಿದರೆ ರಾಜಕೀಯ ದುರುದ್ದೇಶ ಎಂದು ಎಂಥವರಿಗೂ ಗೊತ್ತಾಗುತ್ತದೆ ಎಂದು ಸಿಡಿದೆದ್ದರು. ಇದನ್ನೂ ಓದಿ: ಲೋಕಾಯುಕ್ತ, ಸಿಬಿಐಗಿಂತ ಜಾಸ್ತಿ ಹಿಂಸೆ ಕೊಡ್ತಿದೆ – ಡಿಕೆಶಿ