– ಸುವರ್ಣ ಸೌಧದಲ್ಲೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು
– ಪೊಲೀಸರಿಗೆ ನಿರಂತರ ಫೋನ್ ಬರುತ್ತಿತ್ತು
– ಎಫ್‌ಐಆರ್ ಕಾಪಿ ಕೊಡಿ ಅಂದರೂ ನೀಡಲಿಲ್ಲ
ಬೆಂಗಳೂರು: ಯಾರದ್ದೋ ಸೂಚನೆ ಮೇರೆಗೆ ನನ್ನ ಹತ್ಯೆ ಮಾಡಲು ಗದ್ದೆ, ಕಲ್ಲಿನ ಕ್ವಾರಿ, ಗಲ್ಲಿ ರಸ್ತೆಗಳಲ್ಲಿ ಪೊಲೀಸರು ಸುತ್ತಾಡಿಸಿದ್ದಾರೆ ಎಂದು ಸಿಟಿ ರವಿ (CT Ravi) ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ಸೌಧದ ಒಳಗಡೆಯೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಷ್ಟೊಂದು ಭದ್ರತೆ ಇರುವ ಜಾಗದಲ್ಲಿ ನನ್ನ ಮೇಲೆಗೆ ಹಲ್ಲೆಗೆ ಯತ್ನ ನಡೆದಿತ್ತು. ಈ ಕಾರಣಕ್ಕೆ ಗುಂಪಿನಿನಿಂದ ಹತ್ಯೆ ಮಾಡಿಸಲೆಂದೇ ನನ್ನನ್ನು ಗಲ್ಲಿ, ಗದ್ದೆಯಲ್ಲಿ ಸುತ್ತಾಡಿಸಿದ್ದಾರೆ ಎಂದು ಸಿಟಿ ರವಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Advertisement
ಸಿಟಿ ರವಿ ಹೇಳಿದ್ದೇನು?
ಪರಿಷತ್‌ನಲ್ಲಿ ಅಂಬೇಡ್ಕರ್ ವಿಚಾರದ ಬಗ್ಗೆ ಚರ್ಚೆ ಜೋರಾದ ಕಾರಣ ಕಲಾಪ ಮುಂದೂಡಿಕೆ ಆಯ್ತು. ನಂತರ ನಾನು ಪಶ್ಚಿಮ ದ್ವಾರಕ್ಕೆ ಬಂದು ಕಾಂಗ್ರೆಸ್ ಯಾವ ರೀತಿ ಅಂಬೇಡ್ಕರ್‌ಗೆ ಅವಮಾನ ಮಾಡಿದೆ ಎಂದು ಹೇಳಿಕೆ ನೀಡಲು ಮುಂದಾಗಿದ್ದೆ. ಈ ವೇಳೆ ಮಾಧ್ಯಮಗಳು ನಿಮ್ಮ ಮೇಲೆ ಈ ರೀತಿಯ ಆರೋಪ ಬಂದಿದೆ ಎಂದು ಹೇಳಿದರು.
Advertisement
Advertisement
ನಾನು ಲಕ್ಷ್ಮಿ ಅವರು ಎದುರಿಗೆ ಸಿಕ್ಕಾಗ ಏನ್ ಲಕ್ಷ್ಮಕ್ಕ ಎಂದು ಮಾತನಾಡುತ್ತೇನೆ. ಅವರು ಏನಂದರು, ನಾನು ಏನಂದೆ ಎಂದು ಮಾತನಾಡುವುದಿಲ್ಲ. ಎಲ್ಲವೂ ಅಂತರಾತ್ಮ ಪರಮಾತ್ಮನಿಗೆ ಬಿಟ್ಟಿದ್ದು. ಮಧ್ಯಾಹ್ನ ಊಟ ಮುಗಿಸಿ ಬರುವಾದ ಪಶ್ಚಿಮ ದ್ವಾರದಲ್ಲಿ ನನ್ನ ಮೇಲೆ ದಾಳಿ ನಡೆಯಿತು. ಆಗ ಮಾರ್ಷಲ್ ಗಳು ಪೊಲೀಸರು ಅವರನ್ನು ದೂರ ತಳ್ಳಿ ನಮ್ಮನ್ನು ಒಳಗಡೆ ಕರೆದುಕೊಂಡು ಹೋದರು. ನಂತರ ನನ್ನ ಮೇಲೆ ಪುಂಖಾನುಪುಂಖವಾಗಿ ಮಾತನಾಡಿದ ವಿಚಾರ ಗೊತ್ತಾಯಿತು.
Advertisement
ಅಶೋಕ್ ಅವರನ್ನು ಭೇಟಿ ಮಾಡಿ ವಾಪಸ್ ಬರುವಾಗ ಮೂರ್ನಾಲ್ಕು ಜನ ಹಲ್ಲೆ ಮಾಡಲು ಬಂದರು. ನಿನ್ನ ಕೊಲೆ ಮಾಡುತ್ತೇವೆ, ನಿನ್ನ ಹೆಣ ಚಿಕ್ಕಮಗಳೂರಿಗೆ ಕಳುಹಿಸುತ್ತೇವೆ ಎಂದು ಕೂಗಾಡಿದರು. ಮಾರ್ಷಲ್ ಗಳು ಅವರನ್ನು ಗೇಟಿನ ಆಚೆ ಹಾಕಿದರು. ಆಗಲೂ ಗೇಟ್‌ಗೆ ಒದೆಯುತ್ತಿದ್ದರು. ನಾನು ಅಲ್ಲೇ ಧರಣಿ ಕೂತೆ, ನಂತರ ಸಭಾಪತಿ ಭೇಟಿಗೆ ಬುಲಾವ್ ಬಂತು ಹೋದೆ.
ಸಭಾಪತಿಗೂ ಪಶ್ಚಿಮ ದ್ವಾರದ ಹಲ್ಲೆ, ಮೊಗಸಾಲೆಯಲ್ಲಿ ಹಲ್ಲೆ ನಡೆದ ದೂರು ಕೊಡಲಾಯ್ತು. ಆಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ಕೊಟ್ಟಿರೋದಾಗಿ ಸಭಾಪತಿ ಹೇಳಿದರು. ನಾನೂ ಏನಾಯ್ತು ಅಂತ ಲಿಖಿತ ಸಮಜಾಯಿಷಿ ಕೊಟ್ಟೆ. ಕಲಾಪದ ಆರಂಭವಾಗಿ ಸ್ಪೀಕರ್ ರೂಲಿಂಗ್ ಹೇಳಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.
ನಂತರ ಲಕ್ಷ್ಮಿ ಹೆಬ್ಬಾಳ್ಕರ್, ಚನ್ನರಾಜ್, ನಜೀರ್ ಅಹಮದ್ ಅವರೆಲ್ಲ ನನ್ನ ಏಕವಚನದಲ್ಲಿ ನಿಂದಿಸಿದರು. ಕತೆ ಮುಗಿಸುವುದಾಗಿ ಬೆದರಿಕೆ ಹಾಕಿದರು. ನಂತರ ನಾನು ಸಭಾಪತಿ ಕೊಠಡಿಗೆ ಹೋಗಿ ಅಲ್ಲಿ ಏನಾಯ್ತು ಅಂತ ಹೇಳಿ ನಾವಲ್ಲರೂ ಲಿಖಿತ ದೂರು ನೀಡಿದೆವು. ಸಭಾಪತಿಯವರು ಎಡಿಜಿಪಿಯವರನ್ನು ಕರೆದು ಸಿಟಿ ರವಿ ಅವರನ್ನು ಯಾವುದೇ ತೊಂದರೆ ಆಗದೇ ಮನೆಗೆ ತಲುಪಿಸಬೇಕು ಮತ್ತು ಹಲ್ಲೆಗೆ ಮುಂದಾಗಿದ್ದವರ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇದಕ್ಕೆ ಎಡಿಜಿಪಿ ಕೆಲವರನ್ನು ವಶಕ್ಕೆ ಪಡೆದಿದ್ದೇವೆ ಅವರ ಮೇಲೆ ಕ್ರಮ ಆಗುತ್ತದೆ ಎಂದರು.
ಸಂಜೆ 6:20ಕ್ಕೆ ನಾವು ಧರಣಿಗೆ ಕುಳಿತೆವು. ಈ ವೇಳೆ ಉಳಿದರನ್ನು ಚದುರಿಸಿ ನನ್ನನ್ನು ಪ್ರತ್ಯೇಕವಾಗಿ ಎತ್ತಿಕೊಂಡು ಹೋದರು. ಹಿರೇಬಾಗೇವಾಡಿಗೆ ಮೊದಲು ಕರೆದುಕೊಂಡು ಹೋದರು. ನಂತರ ನನ್ನ ಖಾನಾಪುರಕ್ಕೆ ಕರೆದುಕೊಂಡು ಹೋದರು.
ಯಾಕೆ ನನ್ನನ್ನು ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸದರೆ ಅವರು ಉತ್ತರ ನೀಡುತ್ತಿರಲಿಲ್ಲ. ಎಫ್‌ಐಆರ್ ಕಾಪಿ ಕೊಡಿ ಎಂದರೂ ಕೊಡುತ್ತಿರಲಿಲ್ಲ. ಒಬ್ಬೊಬ್ಬರೆ ಹೋಗಿ ಪೊಲೀಸರು ಯಾರ ಜೊತೆಗೂ ಮಾತನಾಡುತ್ತಿದ್ದರು. ವಕೀಲರನ್ನು ಒಳಗಡೆ ಬಿಡಲಿಲ್ಲ. ನಂತರ ಅಶೋಕ್ ಅವರು ಬಂದರು ಆಗ ವಕೀಲರನ್ನು ಒಳಗಡೆ ಬಿಟ್ಟರು. ಸ್ವಲ್ಪ ಹೊತ್ತಾದ ಬಳಿಕ ಅಶೋಕ್ ಅವರನ್ನು ಹೊರಗೆ ಕಳಿಸಿ ಮತ್ತೆ ನನ್ನನ್ನು ಏಕಾಂಗಿಯಾಗಿ ಮಾಡಿದರು. ಆಗ ನಾನು ಮತ್ತೆ ಧರಣಿ ಕುಳಿತೆ.
ಈ ಸಂದದರ್ಭದಲ್ಲಿ ನನ್ನ ಬೇರೆ ಕಡೆ ಕರೆದುಕೊಂಡು ಹೋಗುವುದಾಗಿ ಹೇಳಿದರು. ನಾನು ಬರಲಿಲ, ಆಗ ನನ್ನ ಎತ್ತಿಕೊಂಡು ಪೊಲೀಸ್ ವಾಹನಕ್ಕೆ ಹಾಕಿದರು. ಈ ವೇಳೆ ತಲೆಗೆ ಗಾಯ ಆಯ್ತು. ಕಿತ್ತೂರು ಒಳಗೆ ಕರೆದೊಯ್ದರು. ನನ್ನ ಪಿಎ ಗಾಡಿಗಳು, ಮಾಧ್ಯಮ ಗಾಡಿಗಳಿಗೆ ಅಡ್ಡಿ ಪಡಿಸಿದರು. ಬೆಳಗಾವಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು. ದಾರಿ ಮಧ್ಯೆ ಆಗ ನನಗೆ ಧಾರವಾಡ ಹೈಕೋರ್ಟ್ ಕಾಣಿಸಿತು. ನಾನು ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಹೇಳಿ ಗಾಡಿ ನಿಲ್ಲಿಸಲು ಹೇಳಿದೆ. ಆದರೂ ಪೊಲೀಸರು ಗಾಡಿ ನಿಲ್ಲಿಸಲಿಲ್ಲ.
ನಾನು ಗಾಡಿಯಿಂದ ಇಳಿಯಲು ಪ್ರಯತ್ನ ಪಟ್ಟೆ, ಬಲವಾಗಿ ಹಿಡಿದರು. ಈ ವೇಳೆ ಪತ್ನಿಗೆ ಲೈವ್ ಲೋಕೇಶನ್ ಕಳುಹಿಸಿದೆ. ಕಬ್ಬಿನ ಗದ್ದೆಯೊಂದಕ್ಕೆ ಕರ್ಕೊಂಡು ಹೋದರು. ಆ ಜಾಗಕ್ಕೆ ಮಾಧ್ಯಮಗಳು ಬಂದಿದ್ದನ್ನು ನೋಡಿ ಪೊಲೀಸರು ಈ ನನ್ನ ಮಕ್ಳು ಇಲ್ಲಿಗೆ ಹೇಗೆ ಬಂದ್ರು ಎಂದು ಮಾತನಾಡಿಕೊಂಡ್ರು. ಆಗ ನನಗೆ ಗಾಬರಿಯಾಗಿ ನನ್ನ ಏನೋ ಮಾಡಲು ಕರ್ಕೊಂಡು ಹೋಗ್ತಿದ್ದರೆ ಅಂದುಕೊಡೆ.
ರಾಮದುರ್ಗದಲ್ಲಿ ಲೋಕಲ್ ನರ್ಸ್ ಮೂಲಕ ಬ್ಯಾಂಡೇಜ್ ಕಟ್ಟಿದರು. ಹಳ್ಳಿ ರಸ್ತೆ, ಕಾಡಿನ ರಸ್ತೆ, ಗದ್ದೆಗೆಲ್ಲ ಕರ್ಕೊಂಡು ಹೋದ್ರು. ಅಲ್ಲಿ ಒಮ್ಮೆ ಮಾಧ್ಯಮ ವಾಹನಕ್ಕೆ ಗುದ್ದಿಸಿದ್ರು. ಸ್ಟೋನ್ ಕ್ರಷರ್ ಒಂದಕ್ಕೆ ಕರ್ಕೊಂಡು ಹೋದರು. ನಾನು ಕಿರಿಚಿದೆ, ಸುದೈವ ಅಲ್ಲಿಗೂ ಮಾಧ್ಯಮದವ್ರು ಬಂದಿದ್ದರು. ನಾನು ಮತ್ತೆ ಚೀರಾಡಿದೆ. ನನ್ನ ಹತ್ಯೆ ಮಾಡಲು ಕರೆದುಕೊಂಡು ಬಂದಿದ್ದೀರಾ ಎಂದು ಕೇಳಿದೆ.
ಮತ್ತೆ ಮಾಧ್ಯಮದವ್ರನ್ನು ತಡೆದು ಒಂದೇ ಗಾಡಿಯಲ್ಲಿ ಕರ್ಕೊಂಡು ಹೋದರು. ಎಲ್ಲೆಲ್ಲೋ ನಿಗೂಢ ಜಾಗಳಿಗೆ ಕರ್ಕೊಂಡು ಹೋಗುತ್ತಿದ್ದರು. ನನ್ನ ಕಚೇರಿಯಿಂದ ಮಾಡುತ್ತಿದ್ದ ಟ್ವೀಟ್‌ಗೆ ನಾನು ಮಾಡುತ್ತೇನೆ ಎಂದುಕೊಂಡು ಭಾವಿಸಿದ್ದರು. ನನ್ನ ಕಬ್ಬಿನ ಗದ್ದೆಗೆ ಕರ್ಕೊಂಡು ಹೋಗಿದ್ದು ಯಾರ ಮೂಲಕವೂ ಹೊಡೆಸಲು ಇರಬೇಕು. ನನ್ನ ಕೊಲೆ ಮಾಡುವ ಸಂಚು ಅವರಿಗೆ ಇತ್ತು. ಕೋರ್ಟ್‌ಗೆ ಹೋದಾಗ ಎಲ್ಲ ವಿವರವನ್ನು ಜಡ್ಜ್ ಮುಂದೆ ಹೇಳಿದೆ. ಕೇಶವಪ್ರಸಾದ್, ಮಾಧ್ಯಮ, ಕಾರ್ಯಕರ್ತರು ಬರದಿದ್ದರೆ ಏನಾಗ್ತಿದ್ನೋ ಎಂದು ಹೇಳಿದರು.