ಮೈಸೂರು: ಸಿದ್ದರಾಮಯ್ಯ (Siddaramaiah), ಕುಮಾರಸ್ವಾಮಿಯವರು (Kumaraswamy) ಸಿಎಂ ಆಗಿದ್ದಾಗ ಮೈಸೂರಿಗೆ (Mysuru) ಯಾವುದಾದರೂ ಮದುವೆ, ಬೀಗರ ಊಟಕ್ಕೆ ಬರುತ್ತಿದ್ದರು. ಆದರೆ ಈಗ ಸಿಎಂ ಬಸವರಾಜ ಬೊಮ್ಮಾಯಿಯವರು (Basavaraj Bommai) ಮೈಸೂರಿಗೆ ಬರುತ್ತಿರುವುದು ಅಭಿವೃದ್ಧಿ ಕೆಲಸಕ್ಕೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ 4 ವರ್ಷದಿಂದ ಮೈಸೂರಿಗೆ ಬರ್ತಾ ಇದ್ರು. ಕುಮಾರಸ್ವಾಮಿ ಅವರು ಕೂಡಾ ಸಿಎಂ ಆಗಿದ್ದಾಗ ಮೈಸೂರಿಗೆ ಬರ್ತಾ ಇದ್ರು. ಕಳೆದ 1 ವರ್ಷದಿಂದ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿಗೆ ಬರುತ್ತಿದ್ದಾರೆ. ಬೊಮ್ಮಾಯಿ ಸಾಹೇಬರು ಬರುತ್ತಿರುವುದು ಅಭಿವೃದ್ಧಿ ಕೆಲಸಕ್ಕೆ. ಆದರೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಬರೀ ಬಾಡೂಟ, ಬೀಗರ ಊಟಕ್ಕೆ ಮಾತ್ರವೇ ಬರುತ್ತಿದ್ದರು ಎಂದು ಟಾಂಗ್ ನೀಡಿದರು.
Advertisement
Advertisement
ಬೊಮ್ಮಾಯಿಯವರು ಉತ್ತರ ಕರ್ನಾಟಕದವರಾಗಿದ್ದು, ನಮ್ಮ ಕಡೆ ಗಮನ ಕೊಡಲ್ಲ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅವರು ಸಿಎಂ ಆಗಿ ಈ ಭಾಗಕ್ಕೂ ಅಪಾರವಾದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ ಮೈಸೂರಿನವರೇ ಏನೂ ಮಾಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ವಿಶೇಷ ಅಧಿವೇಶನ ನಡೆಸಲು ಕೊನೆಗೂ ಒಪ್ಪಿಗೆ ನೀಡಿದ ಪಂಜಾಬ್ ಗವರ್ನರ್
Advertisement
ಬಸವರಾಜ ಬೊಮ್ಮಾಯಿಯವರು ಪುನೀತ್ ನಮನದಿಂದ ದಸರಾವನ್ನು ಪ್ರಾರಂಭ ಮಾಡೋಣ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಪತ್ನಿಯೇ ಯುವ ದಸರಾ ಉದ್ಘಾಟನೆ ಮಾಡಲಿದ್ದಾರೆ. ಅವರು 2 ದಿನಗಳ ಕಾಲ ಪುನೀತ್ ಅವರ ಪಾರ್ಥೀವ ಶರೀರದ ಜೊತೆ ಇದ್ರು. 2 ದಿನ ಇದ್ದ ಪಾರ್ಥೀವ ಶರೀರಕ್ಕೆ ಬೊಮ್ಮಯಿ ಅವರು ಮುತ್ತನ್ನು ಕೊಟ್ಟಿದ್ರು ಎಂದು ತಿಳಿಸಿದರು.
Advertisement
ನಮ್ಮ ಸಿಎಂ ನಿಜವಾದ ಭೂತಾಯಿಯ ಮಗ. ಅವರು ಸಿಎಂ ಆಗಿರುವ ವೇಳೆ ಉತ್ತಮ ಮಳೆ, ಬೆಳೆ ಆಗಿದೆ. ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿಯವರೇ ಸಿಎಂ ಆಗಬೇಕು ಎಂದು ಆಶಿಸಿದರು. ಇದನ್ನೂ ಓದಿ: ಎಸ್.ಎಂ ಕೃಷ್ಣ ಚೇತರಿಸಿಕೊಳ್ಳುತ್ತಿದ್ದು, ಗಾಬರಿ ಬೇಡ: ಬಸವರಾಜ್ ಬೊಮ್ಮಾಯಿ