ವಿಜಯಪುರ: ಉಡುಪಿಯಲ್ಲಿ (Udupi) ಸುಲ್ತಾನಪುರ ಎಂದು ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದ್ದಾರೆ. ಇದು ಖಂಡನೀಯ ಎಂದು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಶಾಂಕ ಆಪ್‌ನಲ್ಲಿ ಹಿಂದೂ ಹಳ್ಳಿ ಸುಲ್ತಾನಪುರ ಎಂದು ಕಾಣಿಸುತ್ತಿದೆ. ಸಿದ್ದರಾಮಯ್ಯ (CM Siddaramaiah) ಸರ್ಕಾರ ಏನು ಮಾಡುವುದಕ್ಕೆ ಹೊರಟಿದೆಯೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಪಟಾಕಿ ನಿಷೇಧ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ: ದೆಹಲಿ ಸರ್ಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್
Advertisement
Advertisement
1974ರ ವಕ್ಫ್ ನೋಟಿಫಿಕೇಶನ್ ರದ್ದಾಗಬೇಕು. ಇದಕ್ಕಾಗಿ ಬಿಜೆಪಿ ಸುಮ್ಮನಿರಲ್ಲ, ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲಿ ನೋಡಿದರೂ ವಕ್ಫ್ ಆಸ್ತಿ ಎಂದೇ ಆಗಿ ಬಿಟ್ಟಿದೆ. ವಕ್ಫ್ ಆಸ್ತಿ (Waqf Board) ವಿವಾದ ಇದು ಕಾಂಗ್ರೆಸ್ ನಡೆಸುತ್ತಿರುವ ಲ್ಯಾಂಡ್ ಟೆರರಿಸಂ, ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
ಹಿಂದೂ ದೇವಾಲಯಗಳು, ಮಠಗಳು, ರೈತ ಜಮೀನು ಒಂದು ಉಳಿದಿಲ್ಲ. ಇದರ ವಿರುದ್ಧ ವಿಜಯಪುರದಿಂದಲೇ ನಾನು ವಕ್ಫ್ ಹೋರಾಟ ಪ್ರಾರಂಭಿಸುತ್ತಿದ್ದೇನೆ. ಇಂದು ರೈತರೊಂದಿಗೆ ಹೋರಾಟದಲ್ಲಿ ಭಾಗಿಯಾಗುತ್ತೇನೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಅವಧಿಯ ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿವಾದ ಮತ್ತೆ ಮುನ್ನೆಲೆಗೆ – ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಯುವತಿ ಅರೆಸ್ಟ್