ರಾಯಚೂರು: ಕಲಬುರಗಿಯಲ್ಲಿ (Kalaburagi) ಸಚಿವ ಸಂಪುಟ ಸಭೆ ಮಾಡಿ ಕಾಂಗ್ರೆಸ್‌ನವರು (Congress) ಕೇವಲ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಲೇವಡಿ ಮಾಡಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಜಾನೆ ಖಾಲಿಯಾಗಿದೆ ಎಲ್ಲಿಂದ ತಂದು ಅನುದಾನ ಕೊಡುತ್ತಾರೆ ಗೊತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ (Kalyana Karnataka) 5 ಸಾವಿರ ಕೋಟಿ ರೂ. ಕೊಡುತ್ತೇನೆ ಅಂತಿದ್ದಾರೆ. ಅದು ಕೊಡುವುದಿದ್ದರು ಪರವಾಗಿಲ್ಲ, ಕಲಬುರಗಿಯಲ್ಲಿನ 5 ಸಾವಿರ ಗುಂಡಿಗಳನ್ನಾದರೂ ಮುಚ್ಚಲಿ. ಈ ಸರ್ಕಾರ ಅಭಿವೃದ್ಧಿ ಪರವಾಗಿಲ್ಲ, ಅವರನ್ನ ಗೇಲಿ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಾಗಮಂಗಲ ಪ್ರಕರಣ; ಶೋಭಾ ಕರಂದ್ಲಾಜೆ, ಆರ್ ಅಶೋಕ್ ವಿರುದ್ಧ FIR
Advertisement
Advertisement
ನಾಗಮಂಗಲ ಗಲಭೆ (Nagamangala Violence) ಪ್ರಕರಣ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಬೆಂಕಿ ಹಚ್ಚುತ್ತಿರುವುದು ಕಾಂಗ್ರೆಸ್. ಅದನ್ನು ಆರಿಸುವ ಕೆಲಸ ನಮಗಿದೆ. ನಾಗಮಂಗಲಕ್ಕೆ ನಾನು ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ಬಂದಿದ್ದೇನೆ. ಹಿಂದೂಗಳನ್ನ ಟಾರ್ಗೆಟ್ ಮಾಡಿ ಅವರ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳದವರು ಭಾಗಿಯಾಗಿದ್ದಾರೆ. ನಾಗಮಂಗಲದಲ್ಲಿ ಅವರಿಗೆ ಏನ್ ಕೆಲಸ ಎಂದು ಪ್ರಶ್ನಿಸಿದರು. ಎಸ್‌ಡಿಪಿಐ, ಪಿಎಫ್‌ಐ ನಿಷೇಧಿತ ಸಂಘಟನೆಯವರು ಅಲ್ಲಿದ್ದಾರೆ. ವ್ಯವಸ್ಥಿತವಾಗಿ ಅವರು ಇದನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಆರೋಪಿಸಿದರು. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್ – ಪೇಜರ್ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ
Advertisement
ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಭೂಮಿ ಪಡೆದಿರುವ ಬಗ್ಗೆ ಆರೋಪಿಸಿ ಮಾತನಾಡಿ, ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಸುಮಾರು 70-80 ಎಕರೆ ಭೂಮಿ ಅವರ ಕುಟುಂಬಕ್ಕೆ ತೆಗೆದುಕೊಂಡಿದ್ದಾರೆ ಅನ್ನೋದಿದೆ. ಎರಡು ಎಕರೆ, ಒಂದು ಎಕರೆ, ಅರ್ಧ ಎಕರೆ, ದಲಿತ ಸಮುದಾಯ, ಹಿಂದುಳಿದ ಸಮುದಾಯದವರು ಮಾಡಿಕೊಂಡಿದ್ದಾರೆ ಅವುಗಳನ್ನೆಲ್ಲಾ ಎತ್ತಂಗಡಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇವರೇ ಇವರ ಕುಟುಂಬಕ್ಕೆ ಅರಣ್ಯ ಭೂಮಿಯನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಒಂದು ವಾರದೊಳಗೆ ಸಿಎಂ ಅಧಿಕೃತ ನಿವಾಸ ತ್ಯಜಿಸಲಿದ್ದಾರೆ ಕೇಜ್ರಿವಾಲ್
Advertisement
ಇಡೀ ರಾಜ್ಯದಲ್ಲಿ ಇವರು ಅರಣ್ಯ ಭೂಮಿಗಳನ್ನ ಲೂಟಿ ಮಾಡುತ್ತಿದ್ದಾರೆ. ಆದರೆ ಸಣ್ಣಪುಟ್ಟವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ನಾವು ಕೂಲಂಕಷವಾಗಿ ಪರಿಶೀಲನೆ ಮಾಡಿ ದಾಖಲಾತಿಗಳೊಂದಿಗೆ ಸದನದಲ್ಲಿ ಅವರ ವಿರುದ್ಧವಾಗಿ ವಿಚಾರಗಳನ್ನ ಮಂಡಿಸುತ್ತೇವೆ. ಒತ್ತುವರಿ ಮಾಡಿಕೊಳ್ಳಲಿಕ್ಕೆ ಅವರ ಸ್ವಂತ ಜಮೀನುಗಳಲ್ಲಾ, ಸರಕಾರಿ ಜಮೀನುಗಳನ್ನ ಎಲ್ಲೇ ಒತ್ತುವರಿ ಮಾಡಿದರೂ ನಮ್ಮ ಸರ್ಕಾರ ಬಂದರೆ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?