ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರದ ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರೂ ಸೇರಿದಂತೆ ಸುಮಾರು 300 ಅಕ್ರಮ ವಲಸಿಗರ ಗುಂಪನ್ನು ಪನಾಮದ (Panama) ಡೇರಿಯನ್ ಅರಣ್ಯ ಪ್ರದೇಶದ ಹೋಟೆಲ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಭಾರತ ರಾಯಭಾರ ಕಚೇರಿ ಪನಾಮ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.
Panamanian authorities have informed us that a group of Indians have reached Panama from US
They are safe and secure at a
Hotel with all essential facilities
Embassy team has obtained consular access
We are working closely with the host Government to ensure their wellbeing pic.twitter.com/fdFT82YVhS
— India in Panama, Nicaragua, Costa Rica (@IndiainPanama) February 20, 2025
Advertisement
ಹೌದು. ಮುಖ್ಯವಾಗಿ ಭಾರತ (India), ನೇಪಾಳ, ಶ್ರೀಲಂಕಾ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಬಂದ ವಲಸಿಗರು ಅಲ್ಲಿ ಬಂಧಿಯಾಗಿದ್ದಾರೆ. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಭಾರತದ ರಾಯಭಾರ ಕಚೇರಿ (Indian Embassy) ಪನಾಮದಲ್ಲಿನ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿದೆ. ಈ ಕುರಿತ ಮಾಹಿತಿಯನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದೆ.
Advertisement
Advertisement
ಭಾರತೀಯರ ಗುಂಪು ಅಮೆರಿಕದಿಂದ ಪನಾಮ ತಲುಪಿದೆ ಅಂತ ಪನಾಮ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೋಟೆಲ್‌ನಲ್ಲಿ ಸುರಕ್ಷಿತವಾಗಿದ್ದಾರೆ. ಅವರ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ನಾವು ಅಲ್ಲಿನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪನಾಮ ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಅಕ್ರಮ ವಲಸಿಗರ ಕೈಗೆ, ಕಾಲಿಗೆ ಸರಪಳಿ ಹಾಕಿ ದೇಶದಿಂದ ಹೊರದಬ್ಬುತ್ತಿದೆ ಅಮೆರಿಕ -ವಿಡಿಯೋ ನೋಡಿ
Advertisement
ಏನಾಗಿತ್ತು?
ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರು ಸೇರಿದಂತೆ ಸುಮಾರು 300 ಅಕ್ರಮ ವಲಸಿಗರ ಗುಂಪನ್ನು ಪನಾಮದ ಡೇರಿಯನ್ ಅರಣ್ಯ ಪ್ರದೇಶದ ಹೋಟೆಲ್‌ನಲ್ಲಿ ಬಂಧಿಸಲಾಗಿದೆ. ಮುಖ್ಯವಾಗಿ ಭಾರತ, ನೇಪಾಳ, ಶ್ರೀಲಂಕಾ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಬಂದ ವಲಸಿಗರು ಅಲ್ಲಿ ಬಂಧಿಯಾಗಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
ವಲಸಿಗರನ್ನು ಬಂಧಿಸಿಟ್ಟಿರುವ ಹೋಟೆಲ್‌ನಿಂದ ಹೊರಹೋಗಲು ಅನುಮತಿಸುತ್ತಿಲ್ಲ. ಆದರೆ, ಪನಾಮ ಸರ್ಕಾರವು ಅಂತಾರಾಷ್ಟ್ರೀಯ ಅಧಿಕಾರಿಗಳ ಮೂಲಕ ತಮ್ಮ ದೇಶಗಳಿಗೆ ಮರಳಲು ವ್ಯವಸ್ಥೆ ಮಾಡಲು ಕಾಯುತ್ತಿದೆ. ಯುಎಸ್ ಮತ್ತು ಪನಾಮ ನಡುವಿನ ಒಪ್ಪಂದದ ಪ್ರಕಾರ, ಅಕ್ರಮ ವಲಸಿಗರು ವೈದ್ಯಕೀಯ ಚಿಕಿತ್ಸೆ ಮತ್ತು ಆಹಾರವನ್ನು ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದರಲ್ಲಿ ಆಶ್ರಯ ಪಡೆಯುತ್ತಿದ್ದ ಕೆಲವರು ಹೋಟೆಲ್ ಒಳಗಿನಿಂದ ಗಾಜಿನ ಗೋಡೆಗಳ ಮೇಲೆ ʻಸಹಾಯʼ ಮಾಡುವಂತೆ ಬರೆದು ಪ್ಲೇಟ್‌ಕಾರ್ಡ್ ಪ್ರದರ್ಶಿಸುತ್ತಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಪನಾಮ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ. ಆದ್ರೆ ವರದಿಗಳ ಹೊರತಾಗಿಯೂ ಪನಾಮ ಅಕ್ರಮವಾಗಿ ಬಂಧನದಲ್ಲಿರಿಸಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದೆ. ಇದನ್ನೂ ಓದಿ: ಅವರು ಯಾರನ್ನಾದರೂ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು: ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪದ ಬಗ್ಗೆ ಟ್ರಂಪ್ ಸುಳಿವು
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪನಾಮದ ಭದ್ರತಾ ಸಚಿವ ಫ್ರಾಂಕ್ ಅಬ್ರೆಗೊ, ಪನಾಮ ಮತ್ತು ಅಮೆರಿಕ ನಡುವಿನ ವಲಸೆ ಒಪ್ಪಂದದ ಭಾಗವಾಗಿ ಯುಎಸ್‌ನಿಂದ ಬಂದ ಅಕ್ರಮ ವಲಸಿಗರು ಹೋಟೆಲ್‌ನಲ್ಲಿ ವೈದ್ಯಕೀಯ ಆರೈಕೆ ಮತ್ತು ಆಹಾರ ಸೌಲಭ್ಯದೊಂದಿಗೆ ಆಶ್ರಯ ಪಡೆಯುತ್ತಿದ್ದಾರೆ. ಅವರನ್ನು ತಮ್ಮ ಮೂಲ ದೇಶಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಡೆಯುವಾಗ ಯಾರನ್ನೂ ಹೊರಗೆ ಬಿಡಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್ ಮಾಡಲು ಅನ್ನಿ ನೈಟ್ ತಯಾರಿ