ಕೀವ್: ಭಾರತ ಸರ್ಕಾರ ಭಾರತೀಯರನ್ನು ಉಕ್ರೇನ್ ನಿಂದ ಬೇರೆಕಡೆ ಸ್ಥಳಾಂತರಿಸಲು ಆದೇಶವನ್ನು ಹೊರಡಿಸಿದೆ. ಈ ಪರಿಣಾಮ ಭಾರತೀಯರು ರೈಲ್ವೆ ನಿಲ್ದಾಣಕ್ಕೆ ಬಂದ್ದಿದರು ಏನು ಪ್ರಯೋಜನವಾಗಿಲ್ಲ.
Advertisement
ಉಕ್ರೇನ್‍ನ ಅತಿದೊಡ್ಡ ಕೀವ್ ನಗರವನ್ನು ತಕ್ಷಣವೇ ತೊರೆಯುವಂತೆ ಭಾರತ ಸರ್ಕಾರವು ತನ್ನ ನಾಗರಿಕರಿಗೆ ತುರ್ತು ಆಲ್-ಕ್ಯಾಪ್ಸ್ ಮನವಿಯನ್ನು ಹೊರಡಿಸಿದೆ. ಈ ಹಿನ್ನೆಲೆ ರೈಲು ನಿಲ್ದಾಣಕ್ಕೆ ಭಾರತೀಯ ವಿದ್ಯಾರ್ಥಿಗಳು ಬಂದಿದ್ದಾರೆ. ಆದರೆ ಭಾರೀ ಶೆಲ್ ದಾಳಿಯ ಕಾರಣ ರೈಲುಗಳಲ್ಲಿ ಹೊರಡಲು ಅನುಮತಿಸಲಾಗಿಲ್ಲ. ಇದರಿಂದ ಹತಾಶರಾದ ವಿದ್ಯಾರ್ಥಿಗಳು ವೀಡಿಯೋವೊಂದನ್ನು ಮಾಡಿ ತಮ್ಮ ದುಃಖವನ್ನು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ
Advertisement
Advertisement
ಕೀವ್ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ಭಾರತೀಯರು ರೈಲಿಗಾಗಿ ಕಾಯುತ್ತಿದ್ದರೂ, ಭಾರೀ ಶೆಲ್ ದಾಳಿಯ ಕಾರಣ ರೈಲುಗಳಲ್ಲಿ ಹೊರಡಲು ಅನುಮತಿಸಲಾಗಿಲ್ಲ. ಈ ಹಿನ್ನೆಲೆ ಭಾರತೀಯ ವಿದ್ಯಾರ್ಥಿ ಪ್ರಗುನ್, ಇದೀಗ ನಾವು ಇರುವ ಕಡೆ ಶೆಲ್ ಹೊಡೆಯಲಾಗುತ್ತಿದೆ. ಕೆಲವೊಂದು ಶೆಲ್ ನಮ್ಮ ತಲೆ ಮೇಲೆ ಹೋಗುತ್ತಿದೆ. ಇದು ತುಂಬಾ ಕೆಟ್ಟ ಪರಿಸ್ಥಿತಿ. ನಮ್ಮ ಹತ್ತಿರದಲ್ಲಿ ಯಾವುದೇ ಬಂಕರ್ ಇಲ್ಲ. ನಮ್ಮ ಮುಂದೆ ರೈಲು ಇದ್ದರೂ ಅದನ್ನು ಹತ್ತುವ ಅವಕಾಶವನ್ನು ಇಲ್ಲಿನ ಜನರು ನೀಡುತ್ತಿಲ್ಲ. ಉಕ್ರೇನಿಯನ್ ಜನರಿಗೆ ಮಾತ್ರ ಒಂದು ಮತ್ತು ಎರಡನೇ ಗೇಟ್‍ಗಳನ್ನು ತೆರೆಯಲಾಗಿದೆ. ನಮಗೆ ಬಂದೂಕು, ಬುಲೆಟ್‍ಗಳಿವೆ, ಆದರೆ ರೈಲುಗಳಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
2nd Advisory to Indian Students in Kharkiv
2 March 2022.@MEAIndia @PIB_India @DDNewslive @DDNational pic.twitter.com/yOgQ8m25xh
— India in Ukraine (@IndiainUkraine) March 2, 2022
ಸಾಕಷ್ಟು ಅಪಾಯಗಳನ್ನು ಎದುರಿಸಿ ಇಲ್ಲಿಗೆ ನಾವು ತಲುಪಿದ್ದೇವೆ. 1,000 ಕ್ಕೂ ಹೆಚ್ಚು ಭಾರತೀಯರು ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ನಾವು ರೈಲುಗಳಿಗಾಗಿ ಕಾಯುತ್ತಿದ್ದೇವೆ. ಉಕ್ರೇನಿಯನ್ ಗಾರ್ಡ್‍ಗಳು ಗುಂಡು ಹಾರಿಸುತ್ತಿದ್ದಾರೆ. ಅವರು ನಮ್ಮನ್ನು ಒದೆಯುತ್ತಿದ್ದಾರೆ. ಅವರು ನಮ್ಮನ್ನು ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ. ನಾನು ಭಾರತ ಸರ್ಕಾರಕ್ಕೆ ಒಂದು ವಿಷಯ ಹೇಳಲು ಬಯಸುತ್ತೇನೆ. ಇಲ್ಲಿ ನಮಗೆ ಏನಾದರೂ ತೊಂದರೆಯಾದರೆ ದಯವಿಟ್ಟು ನಮ್ಮ ಕುಟುಂಬವನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಸುರಕ್ಷಿತವಾಗಿ ಬಂದ ಕೊಡಗಿನ ಮೊದಲ ವಿದ್ಯಾರ್ಥಿನಿ – ನಿಟ್ಟುಸಿರು ಬಿಟ್ಟ ಪೋಷಕರು
ಇನ್ನೋರ್ವ ವಿದ್ಯಾರ್ಥಿ, ಮೂರು ಗಂಟೆಗಳ ಕಾಲ ನಿಲ್ದಾಣದಲ್ಲಿ ಕಾಯುತ್ತಿದ್ದರೂ, ರೈಲುಗಳನ್ನು ಪ್ರವೇಶಿಸಲು ನಮಗೆ ಅನುಮತಿಸಲಾಗುತ್ತಿಲ್ಲ ಎಂದು ದುಃಖವನ್ನು ತೋಡಿಕೊಂಡಿದ್ದಾರೆ.