ಭಾರತದ ಈ ಮೂರು ರಾಜ್ಯಗಳು ನಮ್ಮವು – ಬಾಂಗ್ಲಾ ಸರ್ಕಾರದ ಸಲಹೆಗಾರನ ಹೊಸ ಕ್ಯಾತೆ

Public TV
1 Min Read
Mahfuz Alam

-ಇಂತಹ ಹೇಳಿಕೆ ನೀಡುವಾಗ ಎಚ್ಚರವಿರಲಿ ಎಂದು ಭಾರತ ವಾರ್ನಿಂಗ್

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳು ಬಾಂಗ್ಲಾದ ಭಾಗಗಳು ಎಂದು ಹೇಳಿಕೆ ನೀಡುವ ಮೂಲಕ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆಪ್ತ ಮಹ್ಫುಜ್ ಆಲಂ (Mahfuz Alam) ವಿವಾದವನ್ನು ಹುಟ್ಟುಹಾಕಿದ್ದಾರೆ.

ಈ ಮೂರು ರಾಜ್ಯಗಳು ನಮ್ಮವು ಎಂದು ಹೇಳಿಕೆ ನೀಡಿರುವುದರ ಜೊತೆಗೆ ಬಾಂಗ್ಲಾದ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ದಂಗೆಗೆ ಭಾರತ ಮಾನ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.ಇದನ್ನೂ ಓದಿ: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ – ಇಂದಿನಿಂದ ಮೋದಿ ಕುವೈತ್‌ ಪ್ರವಾಸ

ಇದಕ್ಕೆ ಕಿಡಿಕಾರಿರುವ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ಸಾರ್ವಜನಿಕವಾಗಿ ಇಂತಹ ಹೇಳಿಕೆ ಕೊಡುವಾಗ ಎಚ್ಚರ ಇರಲಿ ಎಂದು ಗುಡುಗಿದ್ದಾರೆ.

3 ದೇಗುಲಗಳ ಮೇಲೆ ದಾಳಿ, 8 ವಿಗ್ರಹ ಧ್ವಂಸ:
2 ದಿನಗಳಲ್ಲಿ ಬಾಂಗ್ಲಾದೇಶದ 3 ಹಿಂದೂ ದೇವಾಲಯಗಳಲ್ಲಿನ 8 ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಇದರ ಬೆನ್ನಲ್ಲೇ ದಾಳಿಕೋರ ಜಲಾಲುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಮೆನ್‌ಸಿಂಗ್‌ನ ಹಲುಘಾಟ್ ಉಪಜಿಲ್ಲೆಯಲ್ಲಿ ಡಿ.20 ಮತ್ತು 21 ರಂದು 2 ದೇವಾಲಯಗಳ 3 ವಿಗ್ರಹ ಧ್ವಂಸಗೊಳಿಸಲಾಗಿದೆ. ಡಿ.20ರಂದು ಬೆಳಿಗ್ಗೆ ಹಲುಘಾಟ್‌ನ ಬೋಂಡರ್ ಪಾರಾ ದೇಗುಲದ 2 ವಿಗ್ರಹ ಧ್ವಂಸಮಾಡಿದ್ದಾರೆ. ಡಿ.21 ರಂದು ಮುಂಜಾನೆ ಹಲುಘಾಟ್‌ನ ಬೀಳ್‌ದೊರಾನಲ್ಲಿರುವ ಪೋಲಾಷ್ ಕಂಡ ಕಾಳಿ ದೇವಸ್ಥಾನದಲ್ಲಿ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ.ಇದನ್ನೂ ಓದಿ:3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ

Share This Article