ಮುಂಬೈ: ಪರಿ ಸಿನಿಮಾದಲ್ಲಿ ಅನುಷ್ಕಾಗೆ ಮಾಡಿದ ಮೇಕಪ್ ನಿಜಕ್ಕೂ ಎಷ್ಟು ಅದ್ಭುತವಾಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. ಇದೀಗ ಅನುಷ್ಕಾ ಸೆಟ್‍ನಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳು ವೈರಲ್ ಆಗಿವೆ.
ಬ್ರಿಟನ್ ಮೂಲದ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಪರಿ ಚಿತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್‍ನಲ್ಲಿ ಬರುವ ಹಾರರ್ ಚಿತ್ರಗಳಲ್ಲಿ ಮುಖ್ಯವಾಗಿ ಕಾಣುವುದು ಅಲ್ಲಿಯ ಕಲಾವಿದರ ಮೇಕಪ್. ಅವರು ಎಷ್ಟು ಚೆನ್ನಾಗಿ(ಭಯಂಕರವಾಗಿ) ಕಾಣಿಸುತ್ತಾರೋ ಅದೇ ರೀತಿ ಅವರ ಪಾತ್ರಗಳು ಸಹ ವಿಭಿನ್ನ ಮತ್ತು ಆಕರ್ಷಕವಾಗಿ ಕಾಣಿಸುತ್ತದೆ. ಇದೇ ರೀತಿಯ ಹೊಸ ಪ್ರಯತ್ನವನ್ನ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ತಮ್ಮ ಪರಿ ಚಿತ್ರದಲ್ಲಿ ಮಾಡಿದ್ದಾರೆ.
ಚಿತ್ರದ ಕಥೆಯಲ್ಲಿ ಬರುವ ರುಖ್ಸಾನ ಮತ್ತು ಕಾಲಾಪೋರಿ ಪಾತ್ರಗಳು ವೀಕ್ಷಕರ ಎದೆ ಬಡಿತ ಹೆಚ್ಚಿಸಿದ್ದು, ಇವರ ಪಾತ್ರಕ್ಕೆ ತಕ್ಕಂತೆ ಬ್ರಿಟಿಷ್ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಅದ್ಭುತವಾಗಿ ಮೇಕಪ್ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಕಾಲಾಪೋರಿ ಪಾತ್ರಕ್ಕೆ ಪ್ರೋಸ್ಥೆಟಿಕ್ಸ್ (ಕೃತಕ ಚರ್ಮ ಮತ್ತು ಅಂಗಗಳು) ಬಳಸಿದ್ದು, ಇದರಿಂದ ಕಾಲಾಪೋರಿ ಪಾತ್ರಕ್ಕೆ ಜೀವ ಬಂದಿದೆ.
ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗೆಡೆ ಮಾಡಿದ್ದು, ಇದು ಮುಖವಾಡ ಅಲ್ಲ, ನೈಜ ಮತ್ತು ಸತ್ಯ. ಕೇವಲ ಮುಖವಾಡ ಧರಿಸಿರುವವರಿಗೆ ಮಾತ್ರ ಇದು ಮುಖವಾಡದ ರೀತಿ ಕಾಣಿಸುತ್ತದೆ ಎಂದು ವಿಡಿಯೋ ಕೊನೆಯಲ್ಲಿ ಹೇಳಲಾಗಿದೆ.
ಚಿತ್ರತಂಡದ ಜೊತೆ ತಮ್ಮ ಅನುಭವನ್ನು ಹಂಚಿಕೊಂಡ ಕ್ಲೂವರ್ ವೂಟನ್, ಅನುಷ್ಕಾ ಶರ್ಮಾ ಅವರನ್ನು ನಾನು ರಣಬೀರ್ ಸೆಟ್ ನಲ್ಲಿ ಭೇಟಿ ಮಾಡಿದ್ದೆ. ನನ್ನ ಕೆಲಸವನ್ನ ಮೆಚ್ಚಿದ ಅವರು ಪರಿ ಚಿತ್ರದ ನಿದೇರ್ಶಕರ ನಂಬರ್ ಕೊಟ್ಟರು ಎಂದರು. ಅನುಷ್ಕಾ ಅವರಿಗೆ ಮೇಕಪ್ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತೆ. ಮೇಕಪ್‍ಗೂ ಮೊದಲು ಅವರು ಯಾವುದೇ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಅಂತ ನೋಡಬೇಕಿತ್ತು. ಈ ಚಿತ್ರದಲ್ಲಿ ಅವರು ನೈಜವಾಗಿ ಕಾಣಿಸಿದ್ದು, ಅವರ ಸ್ಕಿನ್ ಸುಕೋಮಲವಾಗಿದೆ ಎಂದು ಹೇಳಿದರು.
https://www.instagram.com/p/BfvZQJKgnkr/?hl=en&taken-by=anushkasharma
https://www.instagram.com/p/BfkgVrggwuT/?hl=en&taken-by=anushkasharma