ಲಂಡನ್: ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು, ಗ್ರಾಹಕರು ಒಂದಕ್ಕಿಂತ ಹೆಚ್ಚು ಆನ್‍ಲೈನ್ ಖಾತೆಗಳನ್ನು ಹೊಂದಿರುತ್ತಾರೆ. ಆನ್‍ಲೈನ್ ಖಾತೆ ಓಪನ್ ಮಾಡಲು ಬಳಕೆದಾರರು ಯೂಸರ್ಸ್ ನೇಮ್ ಮತ್ತು ಪಾಸ್‍ವರ್ಡ್ ಹಾಕಲೇಬೇಕು. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಬಳಕೆದಾರರು ಪಾಸ್‍ವರ್ಡ್ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಬಹುತೇಕರು ಎಲ್ಲ ಖಾತೆಗಳಿಗೆ ಒಂದೇ ಪಾಸ್‍ವರ್ಡ್ ಬಳಸುತ್ತಾರೆ. ಈ ರೀತಿ ಪಾಸ್‍ವರ್ಡ್ ಗಳಿಂದ ಖಾತೆಗಳು ಹ್ಯಾಕ್ ಆಗುತ್ತವೆ.
ಇಂಗ್ಲೆಂಡ್‍ನ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸೆಂಟರ್ (ಎನ್‍ಸಿಎಸ್‍ಸಿ) ಪಾಸ್‍ವರ್ಡ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹೊರಹಾಕಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಆನ್‍ಲೈನ್ ಬಳಕೆದಾರರು ತಮ್ಮ ಖಾತೆಗೆ ‘123456’ ಪಾಸ್‍ವರ್ಡ್ ಬಳಸುತ್ತಾರೆ. ಎರಡನೇ ಸ್ಥಾನದಲ್ಲಿ ‘123456789’ qwerty, 111111 ಮತ್ತು password ಪಾಸ್‍ವರ್ಡ್ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಎಸ್‍ಸಿಎಸ್‍ಸಿ ಸಂಶೋಧನೆ ಪ್ರಕಾರ, 123456 ಪಾಸ್‍ವರ್ಡ್ ಜಗತ್ತಿನಾದ್ಯಂತ ಸುಮಾರು 2.3 ಕೋಟಿ ಬಳಕೆದಾರರು ಬಳಸುತ್ತಿದ್ದಾರೆ.
Advertisement
Advertisement
ಸಾಮಾನ್ಯ ಪಾಸ್‍ವರ್ಡ್ ಬದಲಾಗಿ Ashley, Michael, Daniel, Jessica ಮತ್ತು Charlie ಈ ಹೆಸರುಗಳನ್ನು ಬಳಸಲಾಗುತ್ತಿದೆ. ಈ ರೀತಿಯ ಸರಳ ಪಾಸ್‍ವರ್ಡ್ ಬಳಕೆ ಮಾಡುವದರಿಂದ ಹ್ಯಾಕರ್ಸ್ ಗೆ ಖಾತೆಗಳನ್ನು ಹ್ಯಾಕ್ ಮಾಡೋದು ಸುಲಭ ಎಂದು ಹೇಳಲಾಗುತ್ತಿದೆ. ಈ ರೀತಿಯ ಕಾಮನ್ ಪಾಸ್‍ವರ್ಡ್ ಖಾತೆಗಳು ಸುರಕ್ಷಿತವಲ್ಲ. ಹಾಗಾಗಿ ಬಳಕೆದಾರರು ಹ್ಯಾಕ್ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಎನ್‍ಸಿಎಸ್‍ಸಿ ಸೂಚಿಸಿದೆ.
Advertisement
ಆನ್‍ಲೈನ್ ಬಳಕೆದಾರರು ಈ ರೀತಿಯ ಕಾಮನ್ ಪಾಸ್‍ವರ್ಡ್ ಬಳಕೆಯಿಂದ ತಮ್ಮ ಖಾತೆಗಳನ್ನು ಹ್ಯಾಕ್ ಮಾಡಲು ಎರಡನೇ ವ್ಯಕ್ತಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಹ್ಯಾಕರ್ಸ್ ಗಳಿಂದ ಖಾತೆಗಳನ್ನು ರಕ್ಷಿಸಿಕೊಳ್ಳಲು ಕಠಿಣ ಪಾಸ್‍ವರ್ಡ್ ಬಳಕೆ ಮಾಡಬೇಕು ಎಂದು ಎನ್‍ಸಿಎಸ್‍ಸಿ ಟೆಕ್ನಿಕಲ್ ಡೈರೆಕ್ಟರ್ ಡಾ. ಇಯಾನ್ ಲೇವಿ ಸಲಹೆ ನೀಡಿದ್ದಾರೆ.