ತುಮಕೂರು: ಈ 5 ಗ್ಯಾರಂಟಿಗಳು (Guarantee) ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಸ್ವತಃ ತಿಪಟೂರು ಕಾಂಗ್ರೆಸ್ (Congress) ಶಾಸಕ ಕೆ ಷಡಕ್ಷರಿ (K Shadakshari) ಬೇಸರ ವ್ಯಕ್ತಪಡಿಸಿದ್ದಾರೆ.
ತಿಪಟೂರಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಿಪಟೂರು ಜಿಲ್ಲೆ ಮಾಡಬೇಕು ಎಂಬ ಹೋರಾಟ ನನ್ನದು. ಆದರೆ ಮುಂದಿನ ಬಜೆಟ್ ವರೆಗೆ ಸರ್ಕಾರದ ಬಳಿ ಹಣ ಇಲ್ಲ. ಈ 5 ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಬೇಸರಿಸಿದರು. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ
ನಾನು ಮುಖ್ಯಮಂತ್ರಿಗಳ ಬಳಿ ತಿಪಟೂರು ಜಿಲ್ಲೆ ಮಾಡುವ ಬೇಡಿಕೆ ಇಟ್ಟಿದ್ದೆ. ಆದರೆ ಮುಖ್ಯಮಂತ್ರಿಗಳು ಅದನ್ನು ಒಪ್ಪಿಕೊಂಡಿಲ್ಲ. ಹೊಸದಾಗಿ ಮಾಡಿದ ಜಿಲ್ಲೆಗಳಿಗೆ ಕುರ್ಚಿ, ಮೇಜು ಕೊಡೋದಕ್ಕೆನೇ ದುಡ್ಡಿಲ್ಲ. ಇನ್ನೂ ಹೊಸ ಜಿಲ್ಲೆ ಮಾಡೋಕಾಗುತ್ತಾ? ಎಂದು ನನ್ನನ್ನು ಸುಮ್ಮನಿರಿಸಿದ್ದಾರೆ. ಎಲ್ಲದಕ್ಕೂ ಈ 5 ಗ್ಯಾರಂಟಿಗಳೇ ಕಾರಣ ಎಂದು ವೇದಿಕೆ ಮೇಲೆ ಶಾಸಕ ಷಡಕ್ಷರಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆಗೆ ಆದೇಶ
Web Stories