Connect with us

ಬೆಂಗ್ಳೂರು ಮಕ್ಕಳು ದಾರಿ ತಪ್ಪೋದಕ್ಕೆ ಈ 2 ಅಂಶ ಕಾರಣ- ಚೈಲ್ಡ್ ರೈಟ್ಸ್ ಸಂಸ್ಥೆಯ ಸಮೀಕ್ಷೆ

ಬೆಂಗ್ಳೂರು ಮಕ್ಕಳು ದಾರಿ ತಪ್ಪೋದಕ್ಕೆ ಈ 2 ಅಂಶ ಕಾರಣ- ಚೈಲ್ಡ್ ರೈಟ್ಸ್ ಸಂಸ್ಥೆಯ ಸಮೀಕ್ಷೆ

ಬೆಂಗಳೂರು: ಚಿತ್ರರಂಗದ ವಿರುದ್ಧ ಚೈಲ್ಡ್ ರೈಟ್ಸ್ ಸಂಸ್ಥೆ ಇದೀಗ ಸಮರ ಸಾರಿದೆ. ಬೆಂಗಳೂರು ಮಕ್ಕಳು ಪೋಲಿಯಾಗೋಕೆ ಧಾರಾವಾಹಿ ಹಾಗೂ ಸಿನಿಮಾಗಳು ಕಾರಣ ಎಂದು ಚೈಲ್ಡ್ ರೈಟ್ಸ್ ಸಮೀಕ್ಷೆಯಲ್ಲಿ ವರದಿಯಾಗಿದೆ.

ಬೆಂಗಳೂರಿನ ಶೇಕಡಾ ಎಂಬತ್ತರಷ್ಟು ಅಂದ್ರೆ 10 ಜನ ಮಕ್ಕಳಲ್ಲಿ 8 ಮಕ್ಕಳು ಪಾರ್ನ್ ವೀಡಿಯೋ ನೋಡೋ ಚಟಕ್ಕೆ ಬಿದ್ದಿದ್ದಾರೆ. 9 ವರ್ಷದಿಂದ 18 ವರ್ಷದ ಮಕ್ಕಳಿಗೆ ಈ ವಿಚಿತ್ರ ಖಯಾಲಿ ಶುರುವಾಗಿದೆ. ಮಕ್ಕಳಿಗೆ ಕೌನ್ಸೆಲಿಂಗ್ ಮಾಡೋ ಸಂದರ್ಭದಲ್ಲಿ ಅವರೇ ಬಿಚ್ಚಿಟ್ಟಿರೋ ಸತ್ಯ ಇದು. ಸೆಕ್ಸ್ ವೀಡಿಯೋ ನೋಡೋ ಆಡಿಕ್ಷನ್ ಬಗ್ಗೆ ಚೈಲ್ಡ್ ರೈಟ್ಸ್ ಸಂಸ್ಥೆಗೆ ತಿಂಗಳಿಗೆ ನೂರಾರು ಕರೆಗಳು ಪೋಷಕರಿಂದಲೇ ಬರುತ್ತಿದೆ. ಇದಕ್ಕೆಲ್ಲಾ ಕಾರಣ ಐಟಂ ಸಾಂಗ್ ಹಾಗೂ ಧಾರಾವಾಹಿಗಳು ಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

ಈಗ ಬೇರೆ ಫ್ರೀ ಇಂಟರ್ನೆಟ್ ಹಾವಳಿ ಮಕ್ಕಳನ್ನು ಸೆಕ್ಸ್ ವೀಡಿಯೋ ನೋಡೋಕೆ ಪ್ರಚೋದನೆ ಕೊಡುತ್ತಿವೆ. ಇದರಿಂದ ಹೊರಬರಲಾರದೆ ಖಿನ್ನತೆ, ಆತ್ಮಹತ್ಯೆ, ಓದೋದಕ್ಕೂ ಸಾಧ್ಯವಾಗದೇ ಮಕ್ಕಳು ಒದ್ದಾಡ್ತಿದ್ದಾರೆ ಎಂದು ಚೈಲ್ಡ್ ರೈಟ್ಸ್ ಸಮೀಕ್ಷೆ ಹೇಳುತ್ತದೆ.

ಚೈಲ್ಡ್ ರೈಟ್ಸ್ ಸಂಸ್ಥೆ ಈಗಾಗ್ಲೇ ಐಟಂ ಸಾಂಗ್ ಹಾಗೂ ಕೆಲವು ಧಾರಾವಾಹಿಗಳ ಬಗ್ಗೆ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೂ ಪತ್ರ ಬರೆದಿದೆ. ಸಮೀಕ್ಷೆಯ ವರದಿ ಕುರಿತು ಶಿಕ್ಷಣ ಇಲಾಖೆಗೂ ಮಾಹಿತಿ ನೀಡಿದೆ.

ಪೋಷಕರು ಇನ್ನು ತಮ್ಮ ಮಕ್ಕಳ ಮೇಲೆ ನಿಗಾ ಇಟ್ಟು ಇಂತಹ ಚಟಗಳಿಗೆ ಮಕ್ಕಳು ದಾಸರಾಗದಂತೆ ನೋಡಿಕೊಳ್ಳಬೇಕಾಗಿದೆ.

 

Advertisement
Advertisement