ಫರಿದಾಬಾದ್: ದೇಶದಾದ್ಯಂತ ಜಾರಿಗೊಳಿಸಲಾಗಿರುವ ಜಿಎಸ್‍ಟಿ ತೆರಿಗೆಯ ಶ್ರೇಣಿಯನ್ನು ಇಳಿಕೆಯ ಸಾಧ್ಯತೆಗಳ ಕುರಿತು ಕೇಂದ್ರ ಹಣಕಾಸು ಸಚಿವ ಆರುಣ್ ಜೇಟ್ಲಿ ಸುಳಿವು ನೀಡಿದ್ದಾರೆ.
ಭಾನುವಾರ ನ್ಯಾಷನಲ್ ಕಸ್ಟಮ್ಸ್ ಅಕಾಡೆಮಿ ಆಯೋಜಿಸಿದ್ದ ಪರೋಕ್ಷ ತೆರಿಗೆ ಪಾವತಿದರರ ಸಮಾರಂಭವನ್ನು ಉದ್ದೇಶಿ ಮಾತಾನಾಡಿದ ಅವರು ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಮೂರು ತಿಂಗಳಷ್ಟೇ ಕಳೆದಿದೆ, ನಾವು ಸಣ್ಣ ಪ್ರಮಾಣದ ತೆರಿಗೆದಾರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಅವಶ್ಯಕತೆಯನ್ನು ತಿಳಿದಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆಯಾದ ಬಳಿಕ ತೆರಿಗೆ ಪ್ರಮಾಣವನ್ನು ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದರು.
Advertisement
ಪ್ರಸ್ತುತ ತೆರಿಗೆ ಶ್ರೇಣಿಯೂ ಈಗ ಶೇ.0, ಶೇ.5, ಶೇ.12, ಶೇ.18, ಶೇ. 28ರವರೆಗೆ ಐದು ಶ್ರೇಣಿಗಳಲ್ಲಿ ಹಂಚಿಕೆಯಾಗಿದೆ. ತೆರಿಗೆ ಪ್ರಮಾಣ ಸಂಗ್ರಹ ನಿರ್ದಿಷ್ಟ ಮಟ್ಟದ ಹಂತವನ್ನು ತಲುಪಿದ ನಂತರ ಈ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದರು. ಈ ಕುರಿತು ಸೆಪ್ಟೆಂಬರ್ 2ರಂದು ಮಾತನಾಡಿದ್ದ ಹಣಕಾಸು ಸಚಿವರು ಜಿಎಸ್‍ಟಿ ಜಾರಿಗೆಯಿಂದ ಪರೋಕ್ಷ ತೆರಿಗೆ ಪ್ರಮಾಣ ಕಡಿಮೆಯಾಗಬಹುದು ಎಂದು ತಿಳಿಸಿದ್ದರು.
Advertisement
ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಸರಕು ಮೇಲಿನ ತರಿಗೆಯನ್ನು ಕಡಿಮೆ ಮಾಡುವುದು ಸರ್ಕಾರದ ಆರ್ಥಿಕ ನೀತಿಯ ಒಂದು ಭಾಗವಾಗಿದೆ. ನಮ್ಮಲ್ಲಿ ತೆರಿಗೆ ಪಾವತಿ ಬದ್ಧತೆ ಪ್ರಮಾಣ ಕಡಿಮೆ ಇದೆ. ಅಭಿವೃದ್ಧಿ ಬಯಸುವ ಜನರು, ಸಂಪನ್ಮೂಲ ಸಂಗ್ರಹಿಸಲು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.
Advertisement
ಒಂದು ದೇಶ ಮತ್ತು ಒಂದು ತೆರಿಗೆ ವ್ಯವಸ್ಥೆ ಎಂಬುವುದು ಜಿಎಸ್‍ಟಿ ಜಾರಿ ಮೂಲ ಉದ್ದೇಶವಾಗಿದೆ. ಒಕ್ಕೂಟ ವ್ಯವಸ್ಥೆಯ ಬಲವರ್ಧನೆಗೆ ಇಂತಹ ನೀತಿಗಳ ಅಗತ್ಯವಿದೆ. ಪ್ರಸ್ತುತ ಜಾರಿಯಾಗಿರುವ ಜಿಎಸ್‍ಟಿ ವ್ಯವಸ್ಥೆಗೂ ಅದರ ಮೂಲ ಉದ್ದೇಶಗಳಿಗೂ ಭಾರೀ ಭಿನ್ನತೆ ಇದ್ದು, ಇದನ್ನು ಸರಳಿಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
Advertisement
ಆದಾಯ ಸಂಗ್ರಹ ಎಂಬುವುದು ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಮೂಲ ಆಧಾರವಾಗಿದೆ. ತೆರಿಗೆಯನ್ನು ಪಾವತಿಲು ಹಿಂದೇಟು ಹಾಕುವ ಜನರ ಬಳಿಯಿಂದ ಬಲವಂತವಾಗಿ ತೆರಿಗೆಯನ್ನು ವಸೂಲಿ ಮಾಡುವ ಬದಲು, ತೆರಿಗೆ ಪಾವತಿಸಲು ಅರ್ಹರಾದವರಿಂದ ತೆರಿಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿ ಎಂದು ತೆರಿಗೆ ಅಧಿಕಾರಿಗಳಿಗೆ ಸಲಹೆ ನೀಡಿದರು. ತೆರಿಗೆ ಪಾವತಿಯನ್ನು ತಪ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.