ರೋಮ್: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದ ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಶಕ್ತಿ ಇರುವುದಿಲ್ಲ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ.
ಇಟಲಿಯಲ್ಲಿ ಸೋಂಕಿಗೆ ತುತ್ತಾದ ರೋಗಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ. ನಾನು 2-3 ವಾರದ ಹಿಂದೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದೆ. ಆದರೆ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನನಗೆ ಸೋಂಕು ತಗುಲಿದ್ದಾಗ ಯಾವುದೇ ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಶಕ್ತಿ ನನಗಿರಲಿಲ್ಲ. ನಗರದಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂದು ತಿಳಿದಾಗ ನಾನು ಮನೆಯನ್ನು ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಿದ್ದೆ. ಆಗ ನನಗೆ ಫಿನಾಯಿಲ್ ವಾಸನೆ ಗ್ರಹಿಸುವ ಸಾಧ್ಯವಾಗಿರಲಿಲ್ಲ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಬಳಸುವಾಗಲೂ ಅದರ ವಾಸನೆ ನನಗೆ ಬರುತ್ತಿರಲಿಲ್ಲ. ಯಾವುದೇ ಅಡುಗೆಯ ರುಚಿ ಕೂಡ ತಿಳಿಯುತ್ತಿರಲಿಲ್ಲ. ಬಳಿಕ ನಾನು ಪರೀಕ್ಷೆ ಮಾಡಿಸಿದಾಗ ಕೊರೊನಾ ತಗುಲಿರುವುದು ದೃಢಪಟ್ಟಿತ್ತು ಎಂದು ಸೋಂಕಿನಿಂದ ಗುಣಪಟ್ಟ ಮಹಿಳೆ ತಿಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.
Advertisement
Advertisement
ಇಟಲಿಯಲ್ಲಿ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಾಗ ನಿರ್ಲಕ್ಷಿಸಲಾಯ್ತು. ಈ ಸೋಂಕಿನ ಲಕ್ಷಣಗಳೇನು? ರೋಗಿಗಳಿಗೆ ಸೋಂಕು ತಗುಲಿದಾಗ ಅವರ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಎಂದು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ ಇಟಲಿಯಲ್ಲಿ ಕೊರೊನಾ ವ್ಯಾಪಾಕವಾಗಿ ಹರಡುತ್ತಿದೆ.
Advertisement
Advertisement
ಇತ್ತ ಜರ್ಮನಿ ಮೂಲದ ವೈರಾಲಸ್ಟಿಲ್ ಹೆಂಡ್ರಿಕ್ ಸ್ಟ್ರೀಕ್ ಕೊರೊನಾ ಬಗ್ಗೆ ಸಂಶೋಧನೆ ಮಾಡುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದರು. ಜರ್ಮನಿಯಲ್ಲಿ ಸೋಂಕು ಹರಡಿದಾಗ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದ ಸೋಂಕಿತ ರೋಗಿಗಳು ರಕ್ತದ ಸ್ಯಾಂಪಲ್‍ಗಳನ್ನು ಪ್ರತಿ ದಿನ ಸಂಗ್ರಹಿಸಿ, ಸಂಶೋಧನಗೆ ಬಳಸಿಕೊಳ್ಳುವ ಅವಕಾಶ ಸ್ಟ್ರೀಕ್ ತಂಡಕ್ಕೆ ಸಿಕ್ಕಿತು.
ಈ ಬಗ್ಗೆ ಸ್ಟ್ರೀಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಹಾನ್ಸ್‌ಬರ್ಗ್ ನಲ್ಲಿ ಸೋಂಕು ತಗುಲಿದ್ದ ಪ್ರತಿಯೊಬ್ಬ ರೋಗಿಯ ಮನೆಗೆ ನಮ್ಮ ತಂಡವರು ಭೇಟಿ ಕೊಟ್ಟು ಮಾಹಿತಿ ಕಲೆಹಾಕಿದರು. ಸೋಂಕನಿಂದ ಬಳಲಿ ಗುಣಮುಖರಾದವರ ಬಳಿ ಕೂಡ ಸೋಂಕಿನ ರೋಗ ಲಕ್ಷಣಗಳೇನು? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡೆವು. ನಾವು ಮಾಹಿತಿ ಕಲೆಹಾಕಿದ ಶೇ. 75ರಷ್ಟು ಪ್ರಕರಣಗಳಲ್ಲಿ ರೋಗಿಗಳು ವಾಸನೆ ಗ್ರಹಿಸುವ ಹಾಗೂ ರುಚಿ ಗುರುತಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಈ ರೋಗ ಲಕ್ಷಣ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸೋಂಕು ತಗುಲಿದ ಕೆಲ ಸಮಯದ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಮಿಲನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಪಕ ಮಿಸ್ಸಿಮೊ ಗಲ್ಲಿ ಅವರು ಕೂಡ ಕೊರೊನಾ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಕೊರೊನಾ ಸೋಂಕಿತ ಬಹುತೇಕ ರೋಗಿಗಳಲ್ಲಿ ವಾಸನೆಯನ್ನು ಹಾಗೂ ರುಚಿಯನ್ನು ಗುರುತಿಸುವ ಶಕ್ತಿ ಇರುವುದಿಲ್ಲ. ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಈ ಲಕ್ಷಣದ ಬಗ್ಗೆ ನಿಖರವಾಗಿ ತಿಳಿಯುವುದಿಲ್ಲ. ಇದೊಂದು ಕೊರೊನಾ ಸೊಂಕಿನ ಅಸಾಮಾನ್ಯ ಲಕ್ಷಣ ಎಂದು ತಿಳಿಸಿದ್ದಾರೆ.
ಸದ್ಯ ಈ ಲಕ್ಷಣಗಳು ಕೊರೊನಾ ಸೋಂಕಿನ ಲಕ್ಷಣವೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲ ವೈರಸ್‍ಗಳು ದೇಹಕ್ಕೆ ಸೇರಿದರೆ ಸೋಂಕಿತ ವ್ಯಕ್ತಿಯ ಮೂಗಿನಲ್ಲಿರುವ ಕೋಶಗಳು ಹಾಗೂ ಕೋಶ ಗ್ರಾಹಕಗಳನ್ನು ನಾಶಮಾಡುತ್ತದೆ. ಕೆಲ ವೈರಸ್‍ಗಳು ಸಂವೇದನಾ ನರಗಳ ಮೂಲಕ ಮೆದುಳನ್ನು ಪ್ರವೇಶಿಸಿ ಹಾನಿ ಮಾಡುತ್ತದೆ. ಇನ್ನೂ ಕೆಲ ವೈರಸ್‍ಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇರಾನ್‍ನಲ್ಲಿ ವರದಿಯಾದ ಒಂದು ಕೊರೊನಾ ಸೋಂಕಿತ ಪ್ರಕರಣದಲ್ಲಿ ರೋಗಿ ವಾಸನೆ ಗೃಹಿಸುವ ಶಕ್ತಿ ಜೊತೆಗೆ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿದೆ.