ಹುಬ್ಬಳ್ಳಿ: ಒಂದು ವೇಳೆ ಇಲ್ಲಿ ಇರತಕ್ಕಂತಹ ಪೊಲೀಸರು ಇರದೇ ಇದ್ದಿದ್ದರೆ ನಮ್ಮ ಕೈಯಲ್ಲಿ ಧ್ವಜಗಳ ಬದಲು ತಲ್ವಾರ್ ಇರುತ್ತಿತ್ತು ಎಂದು ಆರ್‍ಎಸ್‍ಎಸ್ ಮುಖಂಡ ರಘುನಂದನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಸಭೆಯಲ್ಲಿ ರಘುನಂದನ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈಗ ನಮ್ಮ ಕೈಯಲ್ಲಿ ಕಲ್ಲುಗಳು ಇದ್ದಿದ್ದರೆ ಇಲ್ಲಿರುವ ಯಾವ ಬಿಲ್ಡಿಂಗ್ ಗಳು ಮತ್ತು ಗ್ಲಾಸ್ ಗಳು ಇರುತ್ತಿರಲಿಲ್ಲ. ಇದೂವರೆಗೂ ನಾವುಗಳು ಯಾಕೆ ಕಲ್ಲುಗಳನ್ನು ಕೈಗೆ ಎತ್ತುಕೊಂಡಿಲ್ಲ ಅಂದ್ರೆ, ನಮಗೆ ಪೊಲೀಸರ ಲಾಠಿಯ ಮೇಲೆ ನಂಬಿಕೆಯಿದೆ ಎಂದರು.
Advertisement
Advertisement
ಯಾವತ್ತೂ ಪೊಲೀಸರು ಯೋಗ್ಯವಾಗಿ ನಡೆದುಕೊಂಡರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ. ಪೊಲೀಸರ ಕೈಯಲ್ಲಿರುವ ಲಾಠಿ ಹಾಗೂ ಅವರ ಮನಸ್ಸಿನಲ್ಲಿ ಒಂದು ದೇಶ ಭಕ್ತಿಯಿದೆ ಎಂಬ ಏನೋ ಒಂದು ನಂಬಿಕೆಯಿದೆ. ನಮಗಿರುವ ಆ ನಂಬಿಕೆಯನ್ನು ಪೊಲೀಸರು ಹುಸಿ ಮಾಡಬಾರದು. ಒಂದು ವೇಳೆ ಆ ನಂಬಿಕೆ ಹುಸಿಯಾದರೆ ಇಲ್ಲಿ ಯಾವ ಪೊಲೀಸರು ಮತ್ತು ದೇಶ ವಿರೋಧಿಗಳು ಉಳಿಯಲ್ಲ ಎಂದು ಬಹಿರಂಗ ಸಭೆಯಲ್ಲಿ ಆರ್‍ಎಸ್‍ಎಸ್ ಮುಖಂಡ ರಘುನಂದನ್ ಕಿಡಿಕಾರಿದ್ದಾರೆ.
Advertisement
ಇವತ್ತಿನವರೆಗೂ ಹಿಂದೂ ಸಮಾಜ ಸಭ್ಯ ಸಮಾಜವಾಗಿ ಉಳಿದುಕೊಂಡು ಬಂದಿದೆ. ನಾವು ಎಂದೂ ಪೊಲೀಸರನ್ನು ಎದುರು ಹಾಕಿಕೊಂಡು ಬಂದಿಲ್ಲ. ಯಾಕೆಂದ್ರೆ ಅವರು ದೇಶ ಭಕ್ತರು ಎಂಬ ನಂಬಿಕೆಯಿದೆ. ಅವರು ಕಾನೂನು ಪಾಲಕರು, ದೇಶ ಭಕ್ತರಾಗಿದ್ದಾರೆ. ಇಂದು ನನಗೆ ಅನುಮಾನ ಬರುತ್ತಿದ್ದು ಪೊಲೀಸರೆಲ್ಲಾ ಕಾಂಗ್ರೆಸ್ ಸರ್ಕಾರದ ಪಾಲಕರಾಗಿದ್ದಾರೆ ಅಂತಾ ಅನ್ನಿಸುತ್ತಿದೆ. ಇದು ಖಂಡಿತವಾಗಿಯೂ ಪೊಲೀಸರ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಬಗ್ಗೆ ಪೊಲೀಸರೆಲ್ಲಾ ಯೋಚಿಸಬೇಕು. ಹೀಗೆ ಯಾವುದೇ ಒಂದು ಸರ್ಕಾರದ ಹಿಂಬಾಲಕರಾದ್ರೆ ಮುಂದೊಂದು ದಿನ ಯಾರು ನಿಮ್ಮನ್ನು ನಂಬುವುದಿಲ್ಲ ಮತ್ತು ಮರ್ಯಾದೆಯನ್ನು ಕೊಡಲ್ಲ ಅಂತಾ ರಘುನಂದನ್ ಎಂದು ಹೇಳಿದರು.
Advertisement
https://youtu.be/e0X91Tn5HiQ