ಬೆಳಗಾವಿ: ಹಾಲಿನ ಪ್ರೋತ್ಸಾಹ ಧನ (Incentive) ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್ (Venkatesh) ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪ ಶೂನ್ಯ ವೇಳೆಯಲ್ಲಿ ಜೆಡಿಎಸ್ ಮಂಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಸದ್ಯಕ್ಕೆ ಹಾಲಿನ ಪ್ರೊತ್ಸಾಹ ಧನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಹಾಲಿನ ಪ್ರೊತ್ಸಾಹ ಧನ ಹೆಚ್ಚಳ ಮಾಡುವ ಬಗ್ಗೆ ಹೇಳಿದ್ದೇವೆ. ನಮಗೆ ಇನ್ನು ಸಮಯ ಇದೆ. ಹೀಗಾಗಿ ಮುಂದೆ ಹೆಚ್ಚಳದ ಬಗ್ಗೆ ನೋಡುತ್ತೇವೆ ಎಂದರು. ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ – ಕವಲಗಾ ಪಿಡಿಒ ಅಮಾನತು
Advertisement
Advertisement
ಹಾಲಿನ ಪ್ರೊತ್ಸಾಹ ಧನ ನಮ್ಮ ಸರ್ಕಾರದ ಅವಧಿಯದ್ದು ಬಾಕಿ ಇಲ್ಲ.ನಮ್ಮ ಸರ್ಕಾರದಲ್ಲಿ 2023-24ನೇ ಸಾಲಿನಲ್ಲಿ 1,300 ಕೋಟಿ ರೂ. ಪ್ರೊತ್ಸಾಹ ಧನ ಘೋಷಣೆ ಮಾಡಿದ್ದೇವೆ. ಈಗಾಗಲೇ 1,245 ಕೋಟಿ ರೂ. ಬಿಡುಗಡೆ ಆಗಿದೆ.ಬಾಕಿ ಹಣ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
Advertisement
700 ಕೋಟಿ ರೂ. ಬಾಕಿ ಇರುವುದು ಬಿಜೆಪಿ ಅವಧಿಯದ್ದು. ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ. ಸಿಎಂ ಅವರಿಗೆ ಬಾಕಿ ಹಣ ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಬಿಜೆಪಿ ಅವಧಿಯಲ್ಲಿ ಬಾಕಿ ಇದ್ದ ಹಾಲಿನ ಪ್ರೊತ್ಸಾಹ ಧನವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
Advertisement