ಮುಂಬೈ: ನಾನು ಸಂದರ್ಶನ ಕೊಡಲು ಶುರು ಮಾಡಿದರೆ ಭೂಕಂಪವಾಗುತ್ತೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರಿಗೆ ಎಚ್ಚರಿಕೆ ನೀಡಿದರು.
ಮಾಲೆಗಾಂವ್‍ನಲ್ಲಿ ನಡೆದ ರ‍್ಯಾಲಿಯಲ್ಲಿ ಶಿಂಧೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಸಂದರ್ಶನ ಕೊಡಲು ಶುರು ಮಾಡಿದರೆ ಭೂಕಂಪ ಆಗುತ್ತೆ. ಕೆಲವು ಜನರಂತೆ, ನಾನು ಪ್ರತಿ ವರ್ಷ ರಜೆಗಾಗಿ ವಿದೇಶ ಪ್ರವಾಸ ಮಾಡಲಿಲ್ಲ. ಶಿವಸೇನೆ ಮತ್ತು ಅದರ ಬೆಳವಣಿಗೆ ಮಾತ್ರ ನನ್ನ ಮನಸ್ಸಿನಲ್ಲಿತ್ತು ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಪತ್ರಾ ಚಾವ್ಲ್ ಭೂ ಹಗರಣ: ಸಂಜಯ್ ರಾವತ್ ನಿವಾಸದ ಮೇಲೆ ಇಡಿ ದಾಳಿ
Advertisement
Advertisement
ಬಾಳಾಸಾಹೇಬ್ ಠಾಕ್ರೆ ಪರಂಪರೆ ಬೆಂಬಲಿಸಿ ಮಾತನಾಡಿದ ಅವರು, ಕೇವಲ ಮುಖ್ಯಮಂತ್ರಿಯಾಗಲು ಬಾಳಾಸಾಹೇಬರ ವಿಚಾರಧಾರೆಯೊಂದಿಗೆ ರಾಜಿ ಮಾಡಿಕೊಳ್ಳುವವರನ್ನು ಏನೆಂದು ಕರೆಯುತ್ತೀರಿ? ಎಂದು ಉದ್ಧವ್ ಠಾಕ್ರೆ ಹೆಸರು ಹೇಳದೆ ಆಕ್ರೋಶ ಹೊರಹಾಕಿದರು.
Advertisement
ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿತು. ಆದರೆ ಕಾಂಗ್ರೆಸ್ ಮತ್ತು ಎನ್‍ಸಿಪಿಯೊಂದಿಗೆ ಸರ್ಕಾರವನ್ನು ಹೇಗೆ ರಚಿಸಿತು ಎಂದು ಪ್ರಶ್ನಿಸಿ, ಇದು ದ್ರೋಹವಲ್ಲವೇ? ಎಂದು ಕಿಡಿಕಾರಿದರು.
Advertisement
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ 288 ಸ್ಥಾನಗಳ ಪೈಕಿ 200 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭದ್ರತಾ ಪಡೆಗಳ ಎನ್‍ಕೌಂಟರ್‌ನಲ್ಲಿ ಎಲ್‍ಇಟಿ ಉಗ್ರ ಬಲಿ
ಶಿಂಧೆ ಮತ್ತು ಇತರ ಶಿವಸೇನೆ ಶಾಸಕರು ಕಾಂಗ್ರೆಸ್ ಮತ್ತು ಎನ್‍ಸಿಪಿಯೊಂದಿಗಿನ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದ ನಂತರ ಜೂನ್‍ನಲ್ಲಿ ಠಾಕ್ರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.