ಬಜೆಟ್ ಆದ ಮೇಲೆ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆ: ಅಶೋಕ್ ಭವಿಷ್ಯ

Public TV
1 Min Read
R Ashok 1

ಬೆಂಗಳೂರು: ಈ ವರ್ಷದ ಬಜೆಟ್ ಆದ ಮೇಲೆ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ (Congress) ಶಾಸಕಾಂಗ ಸಭೆ ನಡೆಯುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಕುರ್ಚಿ ಕಿತ್ತಾಟಕ್ಕೆ ಸುರ್ಜೇವಾಲ ತೇಪೆ ಹಚ್ಚೋಕೆ ಬಂದಿದ್ದಾರೆ. ಅವರು ಬಂದು ಹೋದ್ರು ಇದು ಸರಿ ಹೋಗೊಲ್ಲ. ಪವರ್ ಶೇರಿಂಗ್ ಬಗ್ಗೆ ಸ್ಪಷ್ಟತೆ ಆಗುವವರೆಗೂ ಈ ಗಲಾಟೆ ನಿಲ್ಲೋದಿಲ್ಲ. ಪವರ್ ಶೇರಿಂಗ್ ಸತ್ಯನಾ ಇಲ್ಲವಾ ಎಂದು ಡಿಕೆಶಿ (D.K Shivakumar) ಹೇಳಬೇಕು. ಅಲ್ಲಿಯವರೆಗೂ ಈ ಗೊಂದಲ ಮುಗಿಯೊಲ್ಲ. ಪವರ್ ಶೇರಿಂಗ್ ಸತ್ಯ ಗೊತ್ತಾಗೋವರೆಗೂ ಕಾಂಗ್ರೆಸ್ ನಲ್ಲಿ ಕುರ್ಚಿ ಕಾದಾಟ ಮುಂದುವರೆಯಲಿದೆ ಎಂದಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಮುಗಿದ ಮೇಲೆ ಪ್ರೆಸ್ ಮೀಟ್ ನಲ್ಲಿ ಡಿನ್ನರ್ ಮೀಟ್ ಮಾಡಬೇಡಿ. ಸಿಎಂ ವಿರುದ್ಧ ಮಾತಾಡಬೇಡಿ ಎಂದು ಹೇಳ್ತಾರೆ. ಅದಾದ ಎರಡು ದಿನ ಆದ ಮೇಲೆ ಕುರ್ಚಿ ಫೈಟ್ ಮತ್ತೆ ಶುರುವಾಗುತ್ತೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಬಜೆಟ್ ಆದ ಮೇಲೆ ಈ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Share This Article