ವಿಜಯಪುರ: ಚಿಲ್ಲರೆ ಜನರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ ಎಂದು ಮುಸ್ಲಿಂ ಮುಖಂಡ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀಕ್ಷ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಯತ್ನಾಳ್‍ಗೆ ಚಡ್ಡಿ ಬಿಚ್ಚಿ ಹೊಡಿತ್ತೀನಿ ಎಂದ ಮುಸ್ಲಿಂ ಮುಖಂಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ, ಪೊಲೀಸ್ ಇಲಾಖೆ ಇದೆಲ್ಲವನ್ನ ಗಮನಿಸುತ್ತೆ. ಚಿಲ್ಲರೆ ಜನರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತೆ. ಅದೇನು ಮಾತನಾಡಿದ್ದಾನೆ ನಾನು ಪೂರ್ತಿ ನೋಡಿಲ್ಲ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!
ಧಾರವಾಡಕ್ಕೆ ಬರಲಿ ನೋಡ್ತೀನಿ ಎಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂಥವರು ಬಹಳ ಜನ ಆಗಿದ್ದಾರೆ. ಹಿಂದೆ ಒಬ್ಬರು ಹೊನ್ನಳ್ಳಿಗೆ ಬಂದ್ರೆ ನೋಡ್ತೀನಿ ಅಂದ್ರು. ಇಂಥ ಬಹಳ ಮಂದಿಯನ್ನ ನಾನು ನೋಡಿದ್ದೀನಿ. ಹಿಜಬ್ ವಿವಾದದ ಬಳಿಕ ಯಾವ ಬೆದರಿಕೆ ಕರೆಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿಗೆ ಬಹುಮಾನ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಇದನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ, ಯಾವ ದೇಶವಿರೋಧಿ ಸಂಘಟನೆ ಇದೆ ಎಂಬುದನ್ನು ತನಿಖೆ ನಡೆಸಬೇಕು. ಬಹುಮಾನ ಘೋಷಣೆಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕಾನೂನು ಪ್ರಕಾರ ಶಿಕ್ಷೆ ಕೊಡಬೇಕು. ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಗೃಹ ಸಚಿವರು ಕಠಿಣ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘ಸಮಗ್ರ ಕೃಷಿ ಪದ್ಧತಿ’: ಬಿ.ಸಿ.ಪಾಟೀಲ್
ಇಮ್ರಾನ್ ಪಾಷಾ 1 ಲಕ್ಷ ಚೆಕ್ ಕೊಟ್ಟ ವಿಚಾರ, ಇದನ್ನ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಎಲ್ಲ ದೇಶ ವಿರೋಧಿ ಹುಳುಗಳು ಈಗ ಹೊರಗೆ ಬೀಳ್ತಿವೆ. ಫಿನಾಯಿಲ್ ಹಾಕಿದಾಗ ಹುಳು ಹೊರ ಬೀಳುವಂತೆ ಎಲ್ಲ ಹೊರ ಬೀಳ್ತೀವೆ. ದೇಶದ್ರೋಹಿ ಕ್ರಿಮಿ-ಕೀಟಗಳು ಹೊರ ಬೀಳ್ತಿವೆ. ಸರ್ಕಾರ ಇವರ ಮೇಲೆ ನಿಗಾ ಇಡಬೇಕು ಎಂದು ಎಚ್ಚರಿಸಿದರು.