ತಮಿಳಿನ ಮಾರಿ-2 ಚಿತ್ರದ ರೌಡಿ ಬೇಬಿ ಹಾಡು ಸೃಷ್ಟಿಸಿರುವ ಸಂಚಲನವೇನು ಸಣ್ಣ ಮಟ್ಟದ್ದಲ್ಲ. ರಾಜ್ಯ ಭಾಷೆಗಳ ಗಡಿರೇಖೆ ಮೀರಿಕೊಂಡು ಈ ಹಾಡು ಎಲ್ಲ ಪ್ರೇಕ್ಷಕರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆ ಮಟ್ಟದ ವೀಕ್ಷಣೆಗೂ ಈ ಹಾಡು ಭಾಜನವಾಗಿದೆ. ಇದೀಗ ಕನ್ನಡದಲ್ಲಿಯೂ ಅದೇ ಧಾಟಿಯದ್ದೊಂದು ಹಾಡು ತಯಾರಾಗಿ ನಿಂತಿದೆ. ಇಂದು ಮೇ 14ರ ಮಂಗಳವಾರ ರುಸ್ತುಂ ಚಿತ್ರದ ಪೊಲೀಸ್ ಬೇಬಿ ಎಂಬ ಹಾಡು ಬಿಡುಗಡೆಯಾಗಲಿದೆ.
Advertisement
ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರ ಬಿಂದು. ಯಾಕೆಂದರೆ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿಯೇ ಮೈಲಿಗಲ್ಲಾಗುವಂಥಾ ಹೂರಣ ಹೊಂದಿದೆಯೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಸೂಪರ್ ಕಾಪ್ ಆಗಿ ಅಬ್ಬರಿಸಿರೋ ಶಿವಣ್ಣನ ಫೋಟೋಗಳು ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ.
Advertisement
ಇನ್ನೇನು ಬಿಡುಗಡೆಗೆ ಅಣಿಗೊಳ್ಳುತ್ತಿರುವ ಈ ಚಿತ್ರದ ವಿಶೇಷವಾದ ಹಾಡೊಂದನ್ನು ಸಿದ್ಧಗೊಳಿಸಲಾಗಿದೆ. ಪೊಲೀಸ್ ಬೇಬಿ ಎಂಬ ಈ ಹಾಡು ತಮಿಳಿನ ರೌಡಿ ಬೇಬಿ ಸಾಂಗಿನ ಧಾಟಿಯಲ್ಲಿಯೇ ಇರಲಿದೆಯಂತೆ. ತಮಿಳಿನಲ್ಲಿ ರೌಡಿ ಬೇಬಿ ಹಾಡು ಸಾಹಿತ್ಯ, ಟಪ್ಪಾಂಗುಚ್ಚಿ ಶೈಲಿಯ ಸಂಗೀತ ಮತ್ತು ಎಂಥವರನ್ನೂ ಎದ್ದು ಕುಣಿಯುವಂತೆ ಮಾಡುವಂಥಾ ಕೊರಿಯೋಗ್ರಫಿ ಮೂಲಕವೇ ಪ್ರಸಿದ್ಧಿ ಪಡೆದಿತ್ತು.
Advertisement
Advertisement
ರುಸ್ತುಂ ಚಿತ್ರದ ರೌಡಿ ಬೇಬಿ ಹಾಡನ್ನೂ ಕೂಡಾ ಇಂಥಾದ್ದೇ ಸಮ್ಮೋಹಕ ಶೈಲಿಯಲ್ಲಿ ರೂಪಿಸಲಾಗಿದೆಯಂತೆ. ಹೇಳಿಕೇಳಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡೋದರಲ್ಲಿ ಎತ್ತಿದ ಕೈ. ಅವರಿಲ್ಲಿ ಯುವಕರೂ ನಾಚುವಂಥಾ ಸ್ಟೆಪ್ಸ್ ಹಾಕಿದ್ದಾರಂತೆ. ಇವರಿಗೆ ಶ್ರದ್ಧಾ ಶ್ರೀನಾಥ್ ಕೂಡಾ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇಂದೇ ಪ್ರೇಕ್ಷಕರನ್ನು ತಲುಪಲಿದೆ.