ಬೆಂಗಳೂರು: ಇಡೀ ದೇಶದಲ್ಲಿ ವೋಟ್ ಚೋರಿ ಆಗಿದೆ. ಚುನಾವಣೆ ಆಯೋಗದಿಂದ ನಮಗೆ ನ್ಯಾಯ ಸಿಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಿಡಿಕಾರಿದರು.
ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ (Rahul Gandhi) ಸುದ್ದಿಗೋಷ್ಠಿ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆ ವೇಳೆ ಮೂರನೇ ಎಲೆಕ್ಷನ್ ಆಗುವ ಹೊತ್ತಿಗೆ ಬಿಜೆಪಿಯವರ ಪಾಪ್ಯುಲಾರಿಟಿ ಕಡಿಮೆ ಆಯಿತು. ಹೀಗಾಗಿ ಗೆಲ್ಲೋಕೆ ದೇಶದ ಎಲ್ಲಾ ಭಾಗದಲ್ಲಿ ಮತ ತೆಗೆಯೋ ಕೆಲಸ ಮಾಡಿದರು. ಮಹದೇವಪುರ, ಆಳಂದ ಸೇರಿ ಹಲವು ಕಡೆ ಹೀಗೆ ಮಾಡಿದ್ದಾರೆ. ಬಿಜೆಪಿ ಅವರು ಅಧಿಕಾರ ಇರುವ ಕಡೆ ವಿಪಕ್ಷಗಳ ಕ್ಷೇತ್ರದ ಕಡೆ ಜಾಸ್ತಿ ಮಾಡಿದ್ದಾರೆ. ಇಂತಹ ಮತ ಅಕ್ರಮ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಎಲೆಕ್ಷನ್ ಕಮಿಷನ್ ಕೇಂದ್ರದ ಕೈಗೊಂಬೆಯಾಗಿದೆ. ನಮಗೆ ಕಮಿಷನ್‌ನಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಸುಪ್ರೀಂಕೋರ್ಟ್‌ಗೆ ಹೋಗಬೇಕು ಅಷ್ಟೆ ಎಂದು ತಿಳಿಸಿದರು.ಇದನ್ನೂ ಓದಿ: ಕೇಂದ್ರ ಚುನಾವಣಾ ಆಯೋಗದಿಂದ ಬಿಜೆಪಿ ಏಜೆಂಟ್ ರೀತಿ ವರ್ತನೆ: ಈಶ್ವರ್ ಖಂಡ್ರೆ ಕಿಡಿ
ರಾಜ್ಯದಲ್ಲಿ ಮತ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲೆಕ್ಷನ್ ಕಮಿಷನ್ ಕೇಂದ್ರದ ಕೈಗೊಂಬೆ ಆಗಿದೆ. ಮೋದಿ, ಅಮಿತ್ ಶಾ ಅವರು ಹೇಳಿದ್ದಕ್ಕೆ ಮುದ್ರೆ ಒತ್ತುತ್ತಾರೆ. ಕಾಂಗ್ರೆಸ್ ಪ್ರಬಲ ಇರುವ ಕಡೆ ಅಕ್ರಮ ಮಾಡ್ತಿದ್ದಾರೆ. ಮತ ತೆಗೆಯೋದು ಅಲ್ಲ. ಸೇರಿಸೋ ಕೆಲಸ ಮಾಡ್ತಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 40-50 ಲಕ್ಷ ಮತ ಸೇರ್ಪಡೆ ಮಾಡಿದ್ದಾರೆ. ಇವರು ಮಹಾರಾಷ್ಟ್ರ ಚುನಾವಣೆ ಮೋಸದಿಂದ ಗೆದ್ದಿದ್ದು. ಆಳಂದ, ಗಾಂಧಿನಗರ ಸೇರಿ ಬೇಕಾದಷ್ಟು ಕಡೆ ಈ ಅಕ್ರಮ ಆಗಿದೆ ಎಂದು ಆರೋಪಿಸಿದರು.

