ಬೆಂಗಳೂರು: ಬಿಹಾರದಲ್ಲಿ ಜಾತಿಗಣತಿ ಸಮೀಕ್ಷಾ ವರದಿ (Caste Survey Report) ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲಿಯೂ ಜಾತಿಗಣತಿ ವಿಚಾರ ಸದ್ದು ಮಾಡಿದೆ.
2015ರಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ನೇಮಕ ಮಾಡಿದ್ದ ಕಾಂತರಾಜು ಸಮಿತಿ ವರದಿಯನ್ನು ಜಾರಿ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ಪಡಸಾಲೆಯಲ್ಲೇ ಕೇಳಿಬಂದಿದೆ. ಜಾತಿಗಣತಿ ಆಗ್ಬೇಕು ಅನ್ನೋದು ರಾಹುಲ್ ಗಾಂಧಿ (Rahul Gandhi) ಅವರ ಆಶಯ. ಹೀಗಾಗಿ ರಾಜ್ಯ ಸರ್ಕಾರ ಸಮೀಕ್ಷಾ ವರದಿ ಬಿಡುಗಡೆ ಮಾಡ್ಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: Maharashtra: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ – 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು
Advertisement
Advertisement
ತಪ್ಪು-ಒಪ್ಪು ಏನೇ ಇರಲಿ, ಎಷ್ಟೇ ಒತ್ತಡಗಳಿರಲಿ, ಜಾತಿ ಗಣತಿ ವಿವರಗಳನ್ನ ಸರ್ಕಾರ ಪ್ರಕಟಿಸಬೇಕು. ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಜಾತಿಗಣತಿ ವರದಿ ಜಾರಿ ಮಾಡಬೇಕು ಎಂದು ಎಂದು ಸತೀಶ್ ಜಾರಕಿಹೊಳಿ, ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ. ಆದ್ರೆ, ಬಿಜೆಪಿ ಮಾತ್ರ ಇದನ್ನು ತೀವ್ರವಾಗಿ ವಿರೋಧಿಸಿದೆ. ಇತ್ತ ಆಯೋಗ ಇನ್ನೂ ವರದಿ ನೀಡಿಲ್ಲ, ಕೊಟ್ಟಾಗ ನೋಡೋಣ ಎಂದು ಸಿಎಂ ಸುಮ್ಮನಾಗಿದ್ದಾರೆ. ನವೆಂಬರ್ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.
Advertisement
Advertisement
ಮೋದಿ ಕಿಡಿ: ವಿಪಕ್ಷಗಳ ಜಾತಿಗಣತಿ ರಾಜಕೀಯದ ವಿರುದ್ಧ ಪ್ರಧಾನಿ ಮೋದಿ (Narendra Modi) ಸಿಡಿದೆದ್ದಿದ್ದಾರೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾತಿಗಣತಿ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಕಾಂಗ್ರೆಸ್ ಬಯಸ್ತಿದೆಯೇ? ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ
ಛತ್ತೀಸ್‌ಘಡದ ಜಗ್ದಾಲ್‌ಪುರ ರ‍್ಯಾಲಿಯಲ್ಲಿ ಮಾತಾಡಿದ ಅವರು, ಜಾತಿಗಣತಿ ಮೂಲಕ ಅಲ್ಪಸಂಖ್ಯಾತರನ್ನು ತೊಲಗಿಸಲು ಕಾಂಗ್ರೆಸ್ಸಿಗರು ಬಯಸ್ತಾರಾ? ಹಾಗಾದ್ರೆ ಅತಿಹೆಚ್ಚು ಜನಸಂಖ್ಯೆಯ ಹಿಂದೂಗಳು ಮುಂದೆ ಬಂದು ಅವರ ಎಲ್ಲಾ ಹಕ್ಕುಗಳನ್ನು ತೆಗೆದುಕೊಳ್ಳಬೇಕೆ? ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಕಾಂಗ್ರೆಸ್ ನಾಯಕರಿಗೆ ಇದ್ಯಾ? ಇಲ್ಲ ಅವರಿಗೆ ಆ ಧೈರ್ಯ ಇಲ್ಲ ಎಂದು ಕೆಣಕಿದ್ದಾರೆ. ಕಾಂಗ್ರೆಸ್ ಹಿಂದೂಗಳನ್ನು ಒಡೆಯಲು ನೋಡ್ತಿದೆ. ಬಡವರನ್ನು ವಿಭಜಿಸಲು ಪ್ರಯತ್ನಿಸ್ತಿದೆ, ದೇಶದ ವಿನಾಶಕ್ಕೆ ಮುಂದಾಗಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
Web Stories