ವಿಜಯಪುರ: ಬ್ರಾಹ್ಮಣರಿಗೂ ಪ್ರತೇಕ ಧರ್ಮ ಕೊಟ್ರೆ ತಪ್ಪೇನಿಲ್ಲ. ಆದ್ರೆ ಅವರು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಅಂತಾ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬ್ರಾಹ್ಮಣರು ಸರ್ಕಾರಕ್ಕೆ ದಾಖಲಾತಿ ಸಲ್ಲಿಸಿ ತಾವು ಹಿಂದೂಗಳಿಗಿಂತ ಭಿನ್ನ ಅಂತ ಸಾಬೀತುಪಡಿಸಲಿ. ಒಂದು ವೇಳೆ ಸಾಬೀತುಪಡಿಸಿದ್ರೆ ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಕೊಡೋದ್ರಲ್ಲಿ ತಪ್ಪೇನಿಲ್ಲ. ನಾವು ಲಿಂಗಾಯತರು ಪ್ರತ್ಯೇಕ ಅಂತಾ ಸಾಬೀತು ಮಾಡಿದ್ದೇವೆ. ಕೇಂದ್ರ ಸರ್ಕಾರ ಶೇ.99ರಷ್ಟು ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ಸೂಚಿಸುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ಆರ್‍ಎಸ್‍ಎಸ್ ಹಾಗು ಇತರೆ ಒತ್ತಡಗಳಿಂದ ಲಿಂಗಾಯತ ಪ್ರತೇಕ ಧರ್ಮಕ್ಕೆ ಒಪ್ಪಿಗೆ ನೀಡದೇ ಹೋದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತವೆ. ಜೈನರು ಸಹ ಸುಪ್ರೀಂ ಕೋರ್ಟ್ ಗೆ ತೆರಳಿ ತಮ್ಮದು ಪ್ರತ್ಯೇಕ ಧರ್ಮ ಅಂತಾ ತೆಗೆದುಕೊಂಡಿದ್ದಾರೆ ಅಂತಾ ಎಂ.ಬಿ.ಪಾಟೀಲ್ ಅಂದ್ರು.
Advertisement
ನನ್ನ ಫೋನ್ ಹಾಗು ಪತ್ನಿ, ಮಗ ಸೇರಿದಂತೆ ನನ್ನ ಜೊತೆಯಲ್ಲಿ ಗುರುತಿಸಿಕೊಂಡಿರುವ 12 ಜನರ ಫೋನ್ ಟ್ಯಾಪ್ ಆಗಿದೆ. ಮಂಗಳವಾರ ಹಾಗೂ ಇವತ್ತು ಬೆಳಗ್ಗೆ ನನಗೆ ಇದರ ಮಾಹಿತಿ ಸಿಕ್ಕಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ನನ್ನ ಮೇಲೆ ದೊಡ್ಡ ಐಟಿ ರೇಡ್ ಆಗಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ ಎಂದು ಎಂ ಬಿ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದರು.
Advertisement
ನಾಳೆ ಅಥವಾ ಹತ್ತು ದಿನಗಳ ಒಳಗೆ ನನ್ಮೇಲೆ ಐಟಿ ಆಗುವ ಸುಳಿವು ಸಿಕ್ಕಿದೆ ಎಂದಿದ್ದಾರೆ. ಇನ್ನು ಬಹಳ ವಿಶ್ವಾಸರ್ಹ ಅಧಿಕಾರಿಗಳ ಮೂಲಕ ಮಾಹಿತಿ ಸಿಕ್ಕಿದ್ದು, ನನ್ಮೇಲೆ ಐಟಿ ರೇಡ್ ಮಾಡಲು ತಯಾರಿ ಮಾಡ್ತಿದ್ದಾರೆ. ಐಟಿಯನ್ನು ಹೀಗೆ ದುರುಪಯೋಗ ಮಾಡಿಕೊಂಡ್ರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದರು.