ಬೆಳಗಾವಿ: ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ನನ್ನ ನಡುವೆ ಏನೂ ಇಲ್ಲ. 136 ಶಾಸಕರು ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಕಾಂಗ್ರೆಸ್ (Congress) ಕಾರ್ಯಕರ್ತರನ್ನು ಭೇಟಿಯಾಗಲು ಬಂದಿದ್ದೇನೆ. ಜಲಸಂಪನ್ಮೂಲ ಇಲಾಖೆ ಕೆಲ ಯೋಜನೆ ಬಗ್ಗೆ ಸಭೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ITದಾಳಿ ಜಟಾಪಟಿ; ಕಲೆಕ್ಷನ್ ಟಾಸ್ಕ್ ಸ್ಲೇಟ್ ಹಿಡಿದ ಸಚಿವರ ಪೋಸ್ಟರ್ ಹಾಕಿ ಬಿಜೆಪಿ ಟಾಂಗ್
Advertisement
Advertisement
ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಬೆಂಗಳೂರಿನಲ್ಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಇದು ಪೂರ್ವ ನಿಯೋಜಿತ ಕಾರ್ಯಕ್ರಮ ಅಲ್ಲ. ಮಂಗಳವಾರ ರಾತ್ರಿ ಬೆಳಗಾವಿಗೆ ಬರಲು ನಿರ್ಧಾರ ಮಾಡಿದೆ. ನಾನು ಬರುವುದರ ಬಗ್ಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಗ್ರಾಪಂ ಸದಸ್ಯ
Advertisement
Advertisement
ಸತೀಶ್ ಜಾರಕಿಹೊಳಿ ಮುನಿಸು ವಿಚಾರದ ಕುರಿತು ಮಾತನಾಡಿದ ಅವರು, ನನ್ನ ಮತ್ತು ಅವರ ನಡುವೆ ಏನೂ ಇಲ್ಲ. 136 ಶಾಸಕರು ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇತ್ತೀಚಿಗೆ ಸತೀಶ್ ಜಾರಕಿಹೊಳಿ ನನ್ನನ್ನು ಭೇಟಿ ಮಾಡಿದ್ದರು. ಶಾಸಕರ ಜೊತೆಗೆ ಪ್ರವಾಸ ಹೋಗುವ ಕುರಿತು ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ನನ್ನನ್ನು ಭೇಟಿಯಾದಾಗಲೂ ಪ್ರವಾಸದ ಕುರಿತು ಮಾತನಾಡಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಮನೆಯೊಂದು ನೂರಾರು ಬಾಗಿಲು: ಮುನಿಸ್ವಾಮಿ ವ್ಯಂಗ್ಯ
Web Stories