-ಯಾವನೋ ಬರೆದುಕೊಟ್ಟಿದ್ದನ್ನ ತುತ್ತೂರಿ ಊದಿದ್ದಾರೆ ಎಂದ ಕೇಂದ್ರ ಸಚಿವ
ಮಂಡ್ಯ: ತನಿಖೆ ಮಾಡಲಿ ಮುಡಾ ಹಗರಣಕ್ಕೂ (MUDA Scam) ನನಗೂ ಸಂಬಂಧವೇ ಇಲ್ಲ. ನಾನು ಯಾಕೆ ರಾಜೀನಾಮೆ (Resignation) ಕೊಡಬೇಕು ಎಂದು ಕಾಂಗ್ರೆಸ್ (Congress) ನಾಯಕರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಾಲಿವುಡ್‌ನತ್ತ ರಕ್ಕಮ್ಮ- ಆ್ಯಕ್ಷನ್ ಅವತಾರ ತಾಳಿದ ಜಾಕ್ವೆಲಿನ್
ಜಿಲ್ಲೆಯ ಉರಮಾರಕಸಲಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಷನ್ ವಿಚಾರವಾಗಿ ಕಾಂಗ್ರೆಸ್ ಸಚಿವರು ರಾಜೀನಾಮೆಗೆ ಒತ್ತಾಯ ಮಾಡುತ್ತಿದ್ದಾರೆ. ನನಗೂ ಮುಡಾ ಹಗರಣಕ್ಕೂ ಏನು ಸಂಬಂಧ? ಕನ್ನಡ ಓದೋಕೊ ಬರುತ್ತೋ, ಇಂಗ್ಲಿಷ್ ಓದೋಕೊ ಬರುತ್ತೋ ಕೇಳಿ. ಮೊದಲು ಆ ಪೇಪರ್‌ನಲ್ಲಿ ಏನಿದೆ ಎಂದು ಸರಿಯಾಗಿ ಕುಳಿತು ನೋಡಲು ಹೇಳಿ ಎಂದರು.
ಆ ಪೇಪರ್‌ನಲ್ಲಿ ಏನಿದೆ? ಅವರೇನೂ ಹುಚ್ಚರಾ ರಾಜೀನಾಮೆ ಕೇಳವುದಕ್ಕೆ. ಅವರು ಕೇಳಿದರೂ ಅಂತಾ ನಾನು ರಾಜೀನಾಮೆ ಕೊಡಬೇಕು? ಯಾಕೆ ರಾಜೀನಾಮೆ ಕೊಡಬೇಕು? ಏನು ತಪ್ಪು ಮಾಡಿದ್ದೇನೆ? ದಾಖಲೆಗಳನ್ನು ಅವರು ಸರಿಯಾಗಿ ನೋಡಿದ್ದರಾ? ಯಾವನೋ ಬರೆದುಕೊಟ್ಟಿದ್ದಾನೆ ಅದನ್ನು ಬಂದು ತುತ್ತೂರಿ ಊದಿದ್ದಾರೆ. ತನಿಖೆ ಮಾಡಲಿ ಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ. 2015ರಿಂದ ಬಿಟ್ಟುಕೊಂಡು ಇದ್ದಾರೆ. ನಾಲ್ಕು ವರ್ಷ ಏನು ಮಾಡುತ್ತಿದ್ದರು? ಅದರಲ್ಲಿ ನನ್ನ ಪಾತ್ರ ಏನಿದೆ ಹೇಳಲಿ. ಉತ್ತರ ಕೊಡುವ ವಿಚಾರವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಚಲಿಸುತ್ತಿದ್ದಾಗಲೇ BMTC ಬಸ್ ಚಾಲಕನಿಗೆ ಹೃದಯಾಘಾತ – ಟ್ರಾಫಿಕ್ ಪೊಲೀಸರ ಸಮಯ ಪ್ರಜ್ಞೆಯಿಂದ ಬಚಾವ್!