ಬೆಂಗಳೂರು: ಯೋಗೇಶ್ವರ್ (C P Yogeshwar) ಕಾಂಗ್ರೆಸ್ ಸೇರ್ಪಡೆ ಆಗಿರೋದು ಆಶ್ಚರ್ಯ ಏನು ಇಲ್ಲ. ಇದು ನಿರೀಕ್ಷಿತವೇ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯ ಪಡುವಂತಹದ್ದು ಏನು ಇಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋ ಆರೋಪ ಅಲ್ಲ. ಅವರು ಯಾವಾಗ ಬಿಜೆಪಿ ಪರಿಷತ್ ಸ್ಥಾನಕ್ಕೆ ತರಾತುರಿಯಲ್ಲಿ ರಾಜೀನಾಮೆ ಕೊಟ್ರೋ ಆಗಲೇ ರಾಜಕೀಯ ವಿದ್ಯಮಾನಗಳ ಬೆಳವಣಿಗೆ ಬಗ್ಗೆ ಬುದ್ಧಿವಂತರು ಅರ್ಥ ಮಾಡಿಕೊಳ್ಳುತ್ತಾರೆ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವಿಲ್ಲ ಎಂದರು. ಇದನ್ನೂ ಓದಿ: ಲಕ್ಷಾಂತರ ರೂ. ಬೆಲೆ ಬಾಳುವ ತಿಮಿಂಗಿಲ ವಾಂತಿ ಸಾಗಿಸುತ್ತಿದ್ದ ಇಬ್ಬರು ಅಂದರ್
Advertisement
Advertisement
ಚನ್ನಪಟ್ಟಣಕ್ಕೆ (Channapatna) ನನ್ನ ಹೆಸರು 2 ತಿಂಗಳಿಂದ ಚಾಲ್ತಿಯಲ್ಲಿದೆ. ಪಕ್ಷದ ಕಾರ್ಯಕರ್ತರು ನಿಖಿಲ್‌ಗೆ ಟಿಕೆಟ್ ಸಿಕ್ಕರೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು. ನಾನು ಸ್ಪರ್ಧೆ ಮಾಡೋದಕ್ಕೆ ಧೈರ್ಯದ ಪ್ರಶ್ನೆ ಅಲ್ಲ. ಯಾವುದೇ ಸ್ಪರ್ಧೆ ಅಂತಿಮವಾಗಬೇಕಾದರೆ ಎನ್‌ಡಿಎ ಕಡೆಯಿಂದ ಘೋಷಣೆ ಆಗಬೇಕಿದೆ. ಕುಮಾರಸ್ವಾಮಿ ಅವರು ನಿನ್ನೆ ಹೇಳಿದ್ದಾರೆ ತಾಳಿದವನು ಬಾಳಿಯಾನು ಎಂದು ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಷ್ಟು ದಿನ ಅತ್ಯಂತ ತಾಳ್ಮೆಯಿಂದ ನಾವು ಕಾದಿದ್ದೇವೆ. ಈಗಲೂ ಕೂಡಾ ಬಿಜೆಪಿ (BJP) ರಾಜ್ಯದ ನಾಯಕರು ನಮ್ಮ ಪಕ್ಷದ ನಾಯಕರು ಕೂಡಿ ಚರ್ಚೆ ಮಾಡಿ ಯಾರು ಎನ್‌ಡಿಎ ಅಭ್ಯರ್ಥಿ ಆಗಬೇಕು ಎಂದು ತೀರ್ಮಾನ ಮಾಡುತ್ತೇವೆ. ಅಭ್ಯರ್ಥಿ ಯಾರು ಅಂತ ಎನ್‌ಡಿಎ ಘೋಷಣೆ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಕಟ್ಟಡ ಕುಸಿತ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಮಾಲೀಕ ಅರೆಸ್ಟ್
Advertisement
ನಿಖಿಲ್ ನಿಲ್ಲಬೇಕು ಅಂತ ಕಾರ್ಯಕರ್ತರು ಹೇಳಿದರೆ ಅಯ್ಯೋ ರಾಮ ದೇವೇಗೌಡರ ಕುಟುಂಬ ಬಿಟ್ಟರೆ ಇನ್ಯಾರು ಸ್ಪರ್ಧೆ ಮಾಡೋಕೆ ಆಗುವುದಿಲ್ಲವಾ ಎಂದು ಪ್ರಶ್ನೆ ಕೇಳುತ್ತಾರೆ. ಮತ್ತೊಂದು ಕಡೆ ಧೈರ್ಯದ ಪ್ರಶ್ನೆಯೂ ಕೇಳುತ್ತಾರೆ. ಇದಕ್ಕೆ ನಾನು ಏನು ಉತ್ತರ ಕೊಡಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಉತ್ತರ ಪ್ರದೇಶ | ಅಕ್ರಮ ಸಂಬಂಧದ ಶಂಕೆ – ಕತ್ತು ಸೀಳಿ ಪತ್ನಿಯ ಕೊಲೆಗೈದ ಪತಿ
Advertisement
ರಾಮನಗರ ಜೆಡಿಎಸ್ (JDS) ಮುಕ್ತ ಮಾಡಲು ಈ ಆಪರೇಷನ್ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಹಳೆ ಮೈಸೂರು ಭಾಗದಲ್ಲಿ ನೋಡಿದ್ದೇವೆ. 14 ಕ್ಷೇತ್ರಗಳ ಪೈಕಿ 12 ಸ್ಥಾನ ಜನರು ಕೊಟ್ಟರು. 12 ಸೀಟು ಬರಲು ಜೆಡಿಎಸ್ ಮತ್ತು ಕುಮಾರಸ್ವಾಮಿ ಕಾರಣ. ಇದು ಬಿಜೆಪಿ ರಾಷ್ಟ್ರೀಯ ನಾಯಕರ ಗಮನದಲ್ಲೂ ಇದೆ. ಕಾಂಗ್ರೆಸ್‌ನವರಿಗೆ ರಾಜ್ಯದಲ್ಲಿ ಟಾರ್ಗೆಟ್ ಇರೋದು ಕುಮಾರಸ್ವಾಮಿ ಅವರು. ಕಳೆದ ಚುನಾವಣೆ ಫಲಿತಾಂಶ ಬಳಿಕ ಆಗಿರೋ ಕೆಲ ಘಟನೆಗಳು ಎಲ್ಲರಿಗೂ ಗೊತ್ತು. ಕುಮಾರಸ್ವಾಮಿ ಟಾರ್ಗೆಟ್ ಆಗಿದ್ದಾರೆ. ಆದರೆ ಇವೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಚನ್ನಪಟ್ಟಣ ಜನತೆ ನಮಗೆ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ
ಡಾ.ಮಂಜುನಾಥ್ ಪತ್ನಿ ಅನಸೂಯ ಅಭ್ಯರ್ಥಿ ಆಗೋ ಬಗ್ಗೆ ಕಾದು ನೋಡಿ ಎಂದು ಕುತೂಹಲವಿಟ್ಟರು. ಕುಮಾರಸ್ವಾಮಿ ಬಿಜೆಪಿಯಲ್ಲಿ (BJP) ಒಕ್ಕಲಿಗ ನಾಯಕರನ್ನ ಬೆಳೆಯಲು ಬಿಡುತ್ತಿಲ್ಲ ಎಂಬ ಯೋಗೇಶ್ವರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಅವರು ಪತ್ರಿಕೆಗೆ ಸಂದರ್ಶನ ಕೊಟ್ಟಿದ್ದರು. ಅದರಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರನ್ನ ಕುಮಾರಸ್ವಾಮಿ ತುಳಿಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈಗ ಯೋಗೇಶ್ವರ್ ಇಂತಹ ಹೇಳಿಕೆ ಕೊಡಲು, ಕುಮ್ಮಕ್ಕು ಕೊಡಲು ಯಾರು ಅನ್ನೋದು ನಮಗೆ ಮೊದಲೇ ಅರ್ಥ ಆಗಿತ್ತು. ಈಗ ರಾಜ್ಯದ ಜನರಿಗೆ ಅರ್ಥ ಆಗಿದೆ ಎಂದು ಕಾಂಗ್ರೆಸ್ ಮತ್ತು ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ