ರಾಮನಗರ: ಕುಮಾರಸ್ವಾಮಿ (H.D.Kumaraswamy) ವಿರೋಧ ಪಕ್ಷದಲ್ಲಿದ್ದಾರೆ. ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಮ್ಮಲ್ಲಿ ಯಾವ ದಂಧೆಯೂ ಇಲ್ಲ, ಯಾವ ಭ್ರಷ್ಟಾಚಾರವೂ ಇಲ್ಲ. ನಮ್ಮಲ್ಲಿ ಸ್ವಚ್ಚ ಆಡಳಿತ ಇದೆ. ಅವರ ಹೇಳಿಕೆಗೆ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್ ಕುರಿತು (YST Tax) ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಪ ವಿಚಾರ ಕುರಿತು ರಾಮನಗರದಲ್ಲಿ (Ramanagara) ರಾಮಲಿಂಗಾ ರೆಡ್ಡಿ ಮಾತನಾಡಿದರು. ಪೊಲೀಸ್ ಹಾಗೂ ಸಾರಿಗೆ ಇಲಾಖೆಯಲ್ಲಿ ಸಂಬಳ ವಿಳಂಬ ವಿಚಾರ ಕುರಿತು ವಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಕಾರ್ಯವೈಖರಿ ಇದೆ. ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ (KSRTC) ತಿಂಗಳ ಮೊದಲ ದಿನವೇ ಸಂಬಳ ನೀಡಲಾಗುತ್ತದೆ. ಬಿಎಂಟಿಸಿಯಲ್ಲಿ (BMTC) 7ನೇ ದಿನ, ಕಲ್ಯಾಣ ಕರ್ನಾಟಕ ಸಾರಿಗೆಗೆ ಒಂದು ದಿನ ನಿಗಧಿ ಮಾಡಲಾಗಿದೆ. ಎಲ್ಲಾ ಇಲಾಖೆಗಳಲ್ಲೂ ಈ ರೀತಿಯ ಸಂಬಳ ನೀಡುತ್ತಾರೆ ಎಂದರು. ಇದನ್ನೂ ಓದಿ: Gruhajyothi Scheme: 5 ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ – ಸಿದ್ದರಾಮಯ್ಯ
Advertisement
Advertisement
ಆದರೆ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬೊಮ್ಮಾಯಿ (Basavaraj Bommai) ನಮ್ಮ ಸಾರಿಗೆ ಇಲಾಖೆ ಕುರಿತು ಟ್ವೀಟ್ (Tweet) ಮಾಡಿದ್ದರು. ಅರ್ಧ ಸಂಬಳ ಎಂದು ಆರೋಪ ಮಾಡಿದ್ದರು. ಆದರೆ ಪೂರ್ಣ ಮಾಹಿತಿ ಇಲ್ಲದೇ ಈ ರೀತಿಯ ಹೇಳಿಕೆ ನೀಡಬಾರದು. ಅವರು ಹಿಂದೆ ಸಿಎಂ ಆಗಿದ್ದವರು. ಅವರ ಅವಧಿಯಲ್ಲಿ ಯಾವ ರೀತಿಯ ಸಮಸ್ಯೆ ಆಗಿತ್ತು ಎಂದು ಎಲ್ಲರಿಗೂ ಗೊತ್ತು. ಈಗ ನಮಗೆ ನೀತಿ ಹೇಳೋಕೆ ಬರುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಡಿಜಿ-ಐಜಿಪಿಯಾಗಿ ಅಲೋಕ್ ಮೋಹನ್ ನೇಮಕ
Advertisement
Advertisement
ಶಾಸಕರು ಹಾಗೂ ಸಚಿವರ ನಡುವೆ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಸಣ್ಣಪುಟ್ಟ ಅಸಮಾಧಾನ ಇರುತ್ತದೆ. ಇಲ್ಲ ಅಂತ ಏನಿಲ್ಲ. ಆದರೆ ಎಲ್ಲವನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ. ಮೊನ್ನೆ ದೆಹಲಿಯಲ್ಲಿ (Delhi) ವರಿಷ್ಠರ ಜೊತೆ ಸಭೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರು ಹಲವು ಸಲಹೆ ನೀಡಿದ್ದಾರೆ. ಗ್ಯಾರಂಟಿ ಜಾರಿ ಯೋಜನೆಗಳ ಸಮರ್ಪಕ ಜಾರಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರು.. ಒಬ್ರು ಹೆಚ್‍ಡಿಕೆ ಇನ್ನೊಬ್ರು ಬೊಮ್ಮಾಯಿ: ಹೆಚ್.ವಿಶ್ವನಾಥ್ ವ್ಯಂಗ್ಯ
Web Stories