ನವದೆಹಲಿ: ಡೀಸೆಲ್ ವಾಹನಗಳ (Diesel Vehicles) ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸಲಾಗುವುದು ಎಂದು ಹರಿದಾಡುತ್ತಿದ್ದ ಸುದ್ದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಪಷ್ಟನೆ ನೀಡಿದ್ದಾರೆ. ಅಂತಹ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ 63 ನೇ ವಾರ್ಷಿಕ SIAM ಸಮಾವೇಶದಲ್ಲಿ ಮಾತನಾಡಿದ್ದ ಗಡ್ಕರಿ, ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಡೀಸೆಲ್‌ಗೆ ವಿದಾಯ ಹೇಳಿ. ದಯವಿಟ್ಟು ಡೀಸೆಲ್ ವಾಹನಗಳನ್ನು ತಯಾರಿಸುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಅಂತಹ ವಾಹನಗಳ ಮಾರಾಟ ಕಷ್ಟವಾಗುವಷ್ಟು ಹೆಚ್ಚುವರಿ ತೆರಿಗೆ ವಿಧಿಸುತ್ತೇವೆ ಎಂದು ಸಚಿವರು ಎಚ್ಚರಿಸಿದ್ದಾರೆಂದು ವರದಿಯಾಗಿತ್ತು. ಇದನ್ನೂ ಓದಿ: G20 ಶೃಂಗಸಭೆಗೆ ನಿಗದಿಗಿಂತ 300 ಪಟ್ಟು ಅಧಿಕ ಹಣ ಖರ್ಚು- ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ
Advertisement
There is an urgent need to clarify media reports suggesting an additional 10% GST on the sale of diesel vehicles. It is essential to clarify that there is no such proposal currently under active consideration by the government. In line with our commitments to achieve Carbon Net…
— Nitin Gadkari (@nitin_gadkari) September 12, 2023
Advertisement
ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇವೆ. ಬಹುತೇಕ ರಾಷ್ಟ್ರಗಳಲ್ಲಿ ಡೀಸೆಲ್ ವಾಹನಗಳ ಮೇಲೆ ಇಂಥ ತೆರಿಗೆ ವಿಧಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ ಎನ್ನಲಾಗಿತ್ತು.
Advertisement
ಈ ರೀತಿಯ ಸುದ್ದಿ ಹರಿದಾಡುತ್ತಿದ್ದಂತೆ ಸಚಿವ ಗಡ್ಕರಿ ಟ್ವೀಟ್ ಮಾಡಿದ್ದಾರೆ. ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸುವ ಮಾಧ್ಯಮ ವರದಿಗಳ ಬಗ್ಗೆ ಸ್ಪಷ್ಟಪಡಿಸುವ ತುರ್ತು ಅಗತ್ಯವಿದೆ. ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಪರಿಸರಕ್ಕೆ ಡೀಸೆಲ್ ಮಾರಕ. ಹೀಗಾಗಿ ಪರಿಸರ ಸ್ನೇಹಿ ಇಂಧನಗಳತ್ತ ಕೈಗಾರಿಕೆಗಳು ಮುಖ ಮಾಡಬೇಕಾದ ಅಗತ್ಯವಿದೆ. ಪರ್ಯಾಯ ಇಂಧನದ ಬೇಡಿಕೆ ಪೂರೈಸಲು ಆಮದು ಮಾಡುವ ಅಗತ್ಯವಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್
ಸದ್ಯ ವಾಹನಗಳ ಮೇಲೆ 28% ಜಿಎಸ್‌ಟಿ ಇದೆ. ಜತೆಗೆ 1% ನಿಂದ 22% ರಷ್ಟು ಹೆಚ್ಚುವರಿ ಸೆಸ್ ವಿಧಿಸಲಾಗುತ್ತದೆ. ಇದು ವಾಹನಗಳ ಮಾದರಿಯನ್ನು ಅವಲಂಬಿಸಿರುತ್ತದೆ. ಎಸ್‌ಯುವಿಗಳ ಮೇಲೆ ಅತ್ಯಧಿಕ 28% ತೆರಿಗೆ ಮತ್ತು ಪರಿಹಾರದ ಸೆಸ್ ಆಗಿ 22% ಇದೆ ಎಂದು ವರದಿಯಾಗಿದೆ.
ಮಾರುತಿ ಸುಜುಕಿ ಮತ್ತು ಹೋಂಡಾದಂತಹ ಕಾರು ತಯಾರಕ ಕಂಪನಿಗಳು ಡೀಸೆಲ್ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.
Web Stories