ಬೆಂಗಳೂರು: ಚೀನಾದಲ್ಲಿ ಹತ್ತು ದಿನದಲ್ಲಿ ಕೊರೊನಾಗೆ ವಿಶೇಷ ಆಸ್ಪತ್ರೆಯನ್ನೇ ಕಟ್ಟಿದ್ದರು. ಆದರೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಕಳೆದ ಒಂದು ತಿಂಗಳಿನಿಂದ ಕೊರೊನಾಗೆ ಸ್ಪೆಷಲ್ ವಾರ್ಡ್ ಮಾಡುವುದಕ್ಕೆ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ನಮಗೆ ವಾರ್ಡ್ ಮಾಡುವುದಕ್ಕೆ ಕಷ್ಟವಾಗುತ್ತೆ. ಇಲ್ಲಿ ಬರುವ ಬೇರೆ ರೋಗಿಗಳಿಗೆ ತೊಂದರೆ ಆಗಲ್ವೇ, ಕೊರೊನಾಗೆ ಸ್ಪೆಷಲ್ ವಾರ್ಡ್ ಎಂದರೆ ಅದಕ್ಕೆ ಪ್ರೊಸಿಜರ್ ಇರುತ್ತೆ. ವಿಂಡೋ ಬದಲಾಯಿಸಬೇಕು, ಎಸಿ ಹಾಕುವ ಹಾಗಿಲ್ಲ. ಅಲ್ಲದೆ ಆಕ್ಸಿಜನ್ ವ್ಯವಸ್ಥೆ ಆಗಬೇಕು. ಇದೆಲ್ಲ ನಮಗೆ ತುಂಬಾ ಕಷ್ಟವಾಗುತ್ತೆ ಎಂದು ಪ್ರತಿಷ್ಟಿತ ವಿಕ್ಟೋರಿಯಾ ಆಸ್ಪತ್ರೆ ಡೀನ್ ಜಯಂತಿ ಹೇಳಿದ್ದಾರೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೊನಾ?
Advertisement
Advertisement
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಕಷ್ಟ ಇದ್ದರೂ ಆರೋಗ್ಯ ಸಚಿವ ಶ್ರೀರಾಮುಲು ಅವರು ‘ಎಲ್ಲಾ ರೆಡಿ ಇದ್ದೇವೆ. ಕೊರೊನಾ ಬಂದರೆ ಓಡಿಸಿ ಬಿಡೋದೆ’ ಎಂದು ಡೈಲಾಗ್ ಹೇಳಿದ್ದರು. ಆದರೆ ವಾಸ್ತವ ಇಲ್ಲಿ ಭೀಕರವಾಗಿದೆ. ವಿಕ್ಟೋರಿಯಾದಲ್ಲಿ ಕೊರೊನಾ ಪತ್ತೆಗೆ ಲ್ಯಾಬ್ ಇದೆ. ಆದರೆ ಪ್ರತ್ಯೇಕ ವಾರ್ಡ್ ಮಾತ್ರ ಇಲ್ಲ. ಇದನ್ನೂ ಓದಿ: ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?-ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?
Advertisement
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆಂಧ್ರ, ತೆಲಂಗಾಣ, ಕೇರಳ ಗಡಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ಕಲಬುರುಗಿ, ಬೆಳಗಾವಿ, ಚಾಮರಾಜನಗರ, ರಾಯಚೂರು ಭಾಗಗಳಲ್ಲಿ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ.