ಕಾರವಾರ: ಗ್ಯಾರಂಟಿ ಯೋಜನೆ ಸರ್ಕಾರ ಹಾಗೂ ಡಿ.ಕೆ.ಶಿವಕುಮಾರ್ ಅವರ ಕನಸ್ಸಿನ ಯೋಜನೆ. ಯಾವ ಗ್ಯಾರಂಟಿಯನ್ನೂ ಸರ್ಕಾರ ಬಂದ್ ಮಾಡುವುದಿಲ್ಲ ಎಂದು ಸಚಿವ ಮಂಕಾಳು ವೈದ್ಯ (Mankal Vaidya) ತಿಳಿಸಿದರು.
ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಜನರಿಗೆ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ. ಸರ್ಕಾರದ ಬಳಿ ಗ್ಯಾರಂಟಿಗೆ ಹಣದ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 17 ಕೆರೆ ತುಂಬಿಸಿದವ್ರನ್ನ ಭಗೀರಥ ಅನ್ನೋದಾದ್ರೆ 107 ಕೆರೆ ತುಂಬಿಸಿದ ನನ್ನನ್ನು ಏನಂತೀರಿ? – ಹೆಚ್‌ಡಿಕೆ
ಗ್ಯಾರಂಟಿಗಾಗಿ ಬಜೆಟ್‌ನಲ್ಲಿ ತಗಲುವುದು ಶೇ.20 ರಷ್ಟು ಹಣ ಮಾತ್ರ. ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತಂದ ಬಳಿಕ ಸರ್ಕಾರ ದಿವಾಳಿ ಆಗಿಲ್ಲ. ಬೇರೆ ರಾಜ್ಯದಲ್ಲಿ ಜಾರಿಗೆ ತರುವಾಗ ಬಜೆಟ್ ನೊಡುವಂತೆ ಖರ್ಗೆಯವರು ಹೇಳಿದ್ದಾರೆ. ಕರ್ನಾಟಕ ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದೆ. ನಮ್ಮ ಸರ್ಕಾರದ 20% ಬಜೆಟ್ ಮಾತ್ರ ಗ್ಯಾರಂಟಿಗೆ ಬಳಸುತ್ತಿದ್ದೇವೆ. ಉಳಿದ ಹಣದಲ್ಲಿ ಎಂದಿನಂತೆ ರಾಜ್ಯದ ಅಭಿವೃದ್ದಿ ಕಾರ್ಯ ಮುಂದುವರೆದಿದೆ ಎಂದರು.