– ಜಿಬಿಎಯಿಂದ ಲಿಸ್ಟ್ ಬಂದ ತಕ್ಷಣ ಖಾತೆಗಳಿಗೆ ಹಣ
ಬೆಂಗಳೂರು: ಒಂಟಿ ಮನೆ ಅಮೃತಮಹೋತ್ಸವ ಯೋಜನೆಯಲ್ಲಿ (Amrit Mahotsav Scheme) ಯಾವುದೇ ಹಗರಣ ಆಗಿಲ್ಲ. 550 ಫಲಾನುಭವಿಗಳ 27.5 ಕೋಟಿ ಹಣದಲ್ಲಿ ಸಿಂಗಲ್ ರೂಪಾಯಿ ಬಳಕೆ ಆಗಿಲ್ಲ ಎಂದು ರಾಜೀವ್ ಗಾಂಧಿ ವಸತಿ ನಿಗಮದ (Rajiv Gandhi Housing Corporation) ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಹೇಳಿದ್ದಾರೆ.
ವಸತಿ ಇಲಾಖೆಯ ಒಂಟಿ ಮನೆ ಯೋಜನೆಯಲ್ಲಿ ಭಾರೀ ಲೋಪದೋಷದ ಬಗ್ಗೆ ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿತ್ತು. 2024-25ನೇ ಸಾಲಿನ ಸಬ್ಸಿಡಿ ಹಣ ಬಿಡುಗಡೆ ಆಗಿದ್ರು ಫಲಾನುಭವಿಗಳ ಅಕೌಂಟ್‌ಗೆ ಹಣ ಹೋಗಿಲ್ಲ ಅಕ್ರಮದ ವಾಸನೆ ಬರ್ತಿದೆ ಅಂತಾ ಸುದ್ದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರದ ಬೆನ್ನಲ್ಲೇ ಪರಶುರಾಮ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೊರೆವ ಚಳಿ, ದಟ್ಟ ಮಂಜು – ರಸ್ತೆ ಕಾಣದೇ ಸರಣಿ ಅಪಘಾತ; ನಾಲ್ವರು ದುರ್ಮರಣ
27.5 ಕೋಟಿ ರೂ. ವಸತಿ ಇಲಾಖೆ ಬಳಿಯೇ ಇದೆ. ಫಲಾನುಭವಿಗಳ ಲಿಸ್ಟ್‌ಗೆ ಹಣ ಹಾಕೋದಕ್ಕೆ ಜಿಬಿಎ (GBA) ಫಲಾನುಭವಿಗಳ ಲಿಸ್ಟ್ ಕಳಿಸಿಲ್ಲ. ಜಿಬಿಎ ಲಿಸ್ಟ್ ಕಳಿಸಿದ್ರೆ ಫಲಾನುಭವಿಗಳ ಅಕೌಂಟ್‌ಗೆ ಹಣ ಹಾಕುತ್ತಿದ್ದೆವು. ಜಿಬಿಎ ವ್ಯಾಪ್ತಿಯ ವಲಯವಾರು ಫಲಾನುಭವಿಗಳ ಲಿಸ್ಟ್ ಕಳಿಸುತ್ತೇವೆ, ಆಗ ಹಣ ಹಾಕಿ ಅಂತಾ ಪತ್ರ ಬರೆದಿದ್ದಾರೆ. ಇನ್ನೂ ಲಿಸ್ಟ್ ಕಳಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಮೂವರಿಗೆ ಗಾಯ
ಫಲಾನುಭವಿಗಳು ಮತ್ತು ವಸತಿ ಇಲಾಖೆ ಜಾಯಿಂಟ್ ಅಕೌಂಟ್ ಇದೆ, ಹಣ ಕ್ರೆಡಿಟ್ ಆಗಿದೆ ಎಂದು ಮೆಸೇಜ್ ಹೋಗಿದೆ. ಆದರೆ ಫಲಾನುಭವಿಗಳ ಅಕೌಂಟ್‌ಗೆ ದುಡ್ಡು ಹೋಗಿಲ್ಲ, ರಾಜೀವ್ ಗಾಂಧಿ ಬಳಿಯೇ ಇದೆ. ನೋಟಿಸ್ ಕಳಿಸಿದ್ದು ನಿಜ. ನಂತರ ಫಲಾನುಭವಿಗಳಿಗೆ ಅಕೌಂಟ್ ನಿಮಗೆ ಬಂದಿಲ್ಲ ಅಂತಾ ಮಾಹಿತಿ ನೀಡಿದ್ದೇವೆ. ಜಿಬಿಎಯಿಂದ ಲಿಸ್ಟ್ ಬಂದ ತಕ್ಷಣ ಅಕೌಂಟ್‌ಗಳಿಗೆ ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕಾರ ನೀಡಿ, ಅಕ್ರಮ ಮತದಾನ ತಡೆಗಟ್ಟಿ: ಸಂಸದ ಸುಧಾಕರ್ ಕರೆ

