ಮುಂಬೈ: ಬಾಲಿವುಡ್ ನಟಿ, ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಅವರು ತಮ್ಮ 13 ನೇ ವಯಸ್ಸಿನಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಕಹಿ ಘಟನೆಯನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಾನು ನಟಿಯಾಗುವ ಮೊದಲು ಸಾಮಾನ್ಯವಾಗಿ ಎಲ್ಲರಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತುತ್ತಿದ್ದೆ. ಒಂದು ದಿನ ಸಿನಿಮಾ ಥಿಯೇಟರ್‍ನಲ್ಲಿ ವ್ಯಕ್ತಿಯೊಬ್ಬ ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ. ಒಳಗಡೆ ಕತ್ತಲಿದ್ದರಿಂದ ನಾನು ಅವನನ್ನು ಗುರುತಿಸಲಿಲ್ಲ. ಆ ಒಂದು ಸನ್ನಿವೇಶದಿಂದ ನಾನು ತುಂಬಾ ನೊಂದುಕೊಂಡಿದ್ದೆ. ಸಿನಿಮಾ ಥಿಯೇಟರ್‍ನಲ್ಲಿ ನಡೆದ ವಿಷಯವನ್ನು ನನ್ನ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಕೌನ್ಸೆಲರ್ ಬಳಿ ಹೇಳಿಕೊಂಡಿದ್ದೆ. ಆದರೆ ಅವರು ಮೈ ಕೈ ಮುಟ್ಟುವುದೆಲ್ಲಾ ಮಾಮೂಲಿ ಎಂದು ಹೇಳಿದ್ದರು. ಅವರು ಅತ್ಯಾಚಾರವನ್ನು ಮಾತ್ರ ಲೈಂಗಿಕ ಕಿರುಕುಳ ಎಂದು ಭಾವಿಸಿದ್ದರು. ಆದ್ರೆ ಯಾರಾದ್ರೂ ಅಸಭ್ಯವಾಗಿ ನಮ್ಮ ಮೈ ಮುಟ್ಟಿದ್ರೆ ಅದು ಲೈಂಗಿಕ ದೌರ್ಜನ್ಯವೆಂಬುದು ನನಗೆ 13ನೇ ವಯಸ್ಸಿನಲ್ಲೂ ಗೊತ್ತಿತ್ತು ಎಂದು ಅವರ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಸೋನಮ್ ಕಪೂರ್ ಹೇಳಿಕೊಂಡರು.
Advertisement
ನಮ್ಮ ಶಾಲೆಗಳಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡುವುದು ಕಡಿಮೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಕೊರತೆಯಿದೆ. ಶಿಕ್ಷಕರೂ ಕೂಡ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಶಕ್ತರಾಗಿಲ್ಲ. ಇದೂವರೆಗೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಿಲ್ಲ. ಇದರಿಂದ ಹುಡುಗಿಯರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರು ತಮ್ಮನ್ನು ತಾವು ದೂಷಿಸಿಕೊಳ್ತಿದ್ದಾರೆ. ಅದಕ್ಕಿಂತ ಕೆಟ್ಟ ಸ್ತೀತಿ ಬೇರೊಂದಿಲ್ಲ. ನಮ್ಮ ದೇಶದಲ್ಲಿ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ಮಹಿಳೆಗೆ ಸುರಕ್ಷಿತ ಸ್ಥಳ ಅಂತ ಇಲ್ಲ. ನೈಟ್ ಕ್ಲಬ್‍ನಲ್ಲಿ ಅಥವಾ ಜನಜಂಗುಳಿಯಲ್ಲಿ ಯಾರಾದ್ರೂ ಮೈ ಮುಟ್ಟಬಹುದು. ಇದು ಗಂಭೀರವಾದ ವಿಷಯ, ಲೈಂಗಿಕ ದೌರ್ಜನ್ಯ ಎಂದು ತಿಳಿದಿರಬೇಕು ಎಂದು ಸೋನಮ್ ಹೇಳಿದ್ರು.
Advertisement
Advertisement
Advertisement