ಹಾಸನದಲ್ಲಿ ಯಾವುದೇ ಬಂಡಾಯ ಇಲ್ಲ, ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಸ್ವಾಗತ ಮಾಡ್ತೀನಿ: ತೇಜಸ್ವಿಸೂರ್ಯ

Public TV
1 Min Read
Tejasvi Surya

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಬಿಜೆಪಿ ಸೇರ್ಪಡೆಯನ್ನ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಸ್ವಾಗತ ಮಾಡಿದ್ದಾರೆ. ಇದೇ ವೇಳೆ ಹಾಸನದಲ್ಲಿ (Hassan) ಯಾವುದೇ ಬಂಡಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ನಾಯಕತ್ವ ಒಪ್ಪಿ ಹೊಸಬರು, ಹಿಂದೆ ಪಕ್ಷ ಬಿಟ್ಟು ಹೋದವರು ಬರ್ತಿದ್ದಾರೆ. ಒಂದು ಕುಟುಂಬದಲ್ಲಿ ಹೊಸದಾಗಿ ಸದಸ್ಯರು ಸೇರ್ಪಡೆಯಾದಾಗ ಮತ್ತು ಹಳಬರು ವಾಪಸ್ ಬಂದಾಗ ಕುಟುಂಬ ಬಲಿಷ್ಠವಾಗುತ್ತದೆ. ಕಾಂಗ್ರೆಸ್ (Congress) ಬಿಟ್ಟು ಅನೇಕ ಜನ ಬಿಜೆಪಿ ಸೇರ್ಪಡೆ ಆಗ್ತಿದ್ದಾರೆ. ನಿನ್ನೆ ನವೀನ್ ಜಿಂದಾಲ್ ಕೂಡಾ ಬಿಜೆಪಿಗೆ (BJP) ಸೇರ್ಪಡೆಯಾಗಿದ್ದಾರೆ. ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷ ಸೇರ್ಪಡೆಯಿಂದ ಪಕ್ಷವೂ ಬಲವಾಗುತ್ತದೆ. ನಮ್ಮ ಪಕ್ಷಕ್ಕೆ ಯಾರೇ ಬಂದರು ನಾವು ಸ್ವೀಕಾರ ಮಾಡ್ತೀವಿ ಎಂದು ಜನಾರ್ದನ ರೆಡ್ಡಿ ಅವರ ಸೇರ್ಪಡೆಯನ್ನು ಸ್ವಾಗತಿಸಿದರು. ಇದನ್ನೂ ಓದಿ: ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ, ಷರತ್ತುಗಳಿಲ್ಲದೇ ಪಕ್ಷ ಸೇರಿದ್ದೇನೆ: ಜನಾರ್ದನ ರೆಡ್ಡಿ

Janardhan Reddy 3

ಹಾಸನ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾನಸದಲ್ಲಿ ಯಾವುದೇ ಬಂಡಾಯ ಇಲ್ಲ. ಮೈತ್ರಿಯ ನಿರ್ಧಾರವನ್ನ ಹಿರಿಯ ನಾಯಕರು ಮಾಡಿರೋದು. ರಾಜ್ಯಕ್ಕೆ ಉಪಯೋಗವಾಗುವ ದೃಷ್ಟಿಯಿಂದ ಈ ಮೈತ್ರಿ ಆಗಿರೋದು. ಎರಡು ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮೈತ್ರಿ ಒಪ್ಪಿದ್ದಾರೆ ಎಂದರು.

ಮೈತ್ರಿಯಿಂದ ರಾಜ್ಯಕ್ಕೆ ಅನುಕೂಲ ಆಗಲಿದೆ. ಮೋದಿ ನಾಯಕತ್ವ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ನಮಗೆ ಅನುಕೂಲ ಆಗುತ್ತದೆ. 28 ಕ್ಷೇತ್ರ ಗೆಲ್ಲೋಕೆ ಮೈತ್ರಿ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರವನ್ನು ವಿಶ್ವದಲ್ಲೇ ಮಾದರಿ ಕ್ಷೇತ್ರ ಮಾಡುವ ಪ್ರಯತ್ನ ಮಾಡ್ತೀನಿ: ಕೆ.ಸುಧಾಕರ್

Share This Article