ಕಲಬುರಗಿ: ಅನರ್ಹ ಶಾಸಕರನ್ನ ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರದ್ದು ಕಾನೂನಾತ್ಮಕ ವಿಚಾರ ಇಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಅದಕ್ಕಾಗಿ ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಅನರ್ಹ ಎಲ್ಲ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಈಗಲೇ ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಔರಾದ್ಕರ್ ವರದಿಯನ್ನು ಸ್ಟೇಟ್ ಪೇ ಕಮಿಷನ್ ಕೆಲವೊಂದು ಒಪ್ಪಿದೆ. ಕೆಲವೊಂದು ಒಪ್ಪಿಲ್ಲ. ಈ ಹಿಂದೆ ಜೈಲ್ ಮತ್ತು ಫೈರ್ ಇಲಾಖೆಗಳನ್ನು ವರದಿಯಲ್ಲಿ ಕೈ ಕೈಬಿಡಲಾಗಿತ್ತು. ನಾನು ಗೃಹ ಸಚಿವನಾದ ಬಳಿಕ ಅವೆರಡು ಇಲಾಖೆಗಳನ್ನು ಸೇರಿಸಿದ್ದೇನೆ. ಹೀಗಾಗಿ ಯಾವ ರೀತಿ ಸ್ಕೇಲ್‍ಗಳನ್ನ ಕೊಡಬೇಕು ಎಂದು ಗೃಹ ಮತ್ತು ಹಣಕಾಸು ಇಲಾಖೆ ಮಧ್ಯೆ ಸಭೆ ನಡೆದಿದೆ. ಈ ಬಗ್ಗೆ ಶೀಘ್ರವೇ ಅಂತಿಮ ನೋಟಿಫಿಕೆಶನ್ ಹೊರಡಿಸಿ, ಔರಾದ್ಕರ್ ವರದಿಯನ್ನು ಜಾರಿ ಮಾಡೆ ಮಾಡುತ್ತೇವೆ ಎಂದು ಹೇಳಿದರು.
Advertisement
ಇದೇ ವೇಳೆ ಸರ್ಕಾರ ಬಿದ್ದು ಹೋಗುವ ಬಗ್ಗೆ ಕೋಡಿ ಶ್ರೀಗಳ ಭವಿಷ್ಯ ಬಗ್ಗೆ ಪ್ರಶ್ನಿಸಿದಾಗ, ಬೊಮ್ಮಾಯಿ ಅವರು ನಾನೇನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದ್ದಾರೆ.