ಮುಂಬೈ:ಅಜಿತ್ ಪವಾರ್ (Ajit Pawar) ವಿಮಾನ ದುರಂತವನ್ನು ರಾಜಕೀಯಗೊಳಿಸಬೇಬೇಡಿ, ಇದೊಂದು ಅಪಘಾತ ಎಂದು ಶರದ್ ಪವಾರ್ (Sharad Pawar) ಹೇಳಿದ್ದಾರೆ.
ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಅಪಘಾತದ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೇ ಶರದ್ ಪವಾರ್ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಹಾರಾಷ್ಟ್ರ ಒಬ್ಬ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡಿದೆ. ಇದು ಮಹಾರಾಷ್ಟ್ರಕ್ಕೆ ಆಗಿರುವ ದೊಡ್ಡ ನಷ್ಟ. ಈ ಘಟನೆಯ ಹಿಂದೆ ರಾಜಕೀಯವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ಆಕಸ್ಮಿಕ, ಮತ್ತು ಯಾವುದೇ ರಾಜಕೀಯ ಒಳಗೊಂಡಿಲ್ಲ. ಇದರಲ್ಲಿ ರಾಜಕೀಯ ತರಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪವಾರ್ ಎನ್‌ಡಿಎ ತೊರೆಯುತ್ತಿದ್ದರು ಅಷ್ಟರಲ್ಲೇ ದುರಂತ ಆಗಿದೆ; ಉನ್ನತ ಮಟ್ಟದ ತನಿಖೆಗೆ ದೀದಿ ಆಗ್ರಹ
ಕೆಲವು ದುರುದ್ದೇಶಪೂರಿತ ಶಕ್ತಿಗಳು ಈ ಅಪಘಾತವನ್ನು ರಾಜಕೀಯ ಪ್ರೇರಿತವೆಂದು ಬಿಂಬಿಸಲು ಪ್ರಯತ್ನಿಸುತ್ತಿವೆ, ಅದು ನಿಜವಲ್ಲ. ಈ ದುರಂತವನ್ನು ರಾಜಕೀಯಗೊಳಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಪೈಲಟ್ ಮೃತಪಟ್ಟರೂ ಪವಾಡಸದೃಶವಾಗಿ ಪಾರಾಗಿದ್ದ ಪಿಎಂ ಮೊರಾರ್ಜಿ ದೇಸಾಯಿ
ಶರದ್ ಪವಾರ್ ಅವರ ಸೋದರಳಿಯನಾದ ಅಜಿತ್ ಪವಾರ್ ಎನ್‌ಸಿಪಿಯಲ್ಲೇ ರಾಜಕೀಯ ಜೀವನ ನಡೆಸಿದ್ದರು. ಆದರೆ ಮಹಾಯುತಿ ಸರ್ಕಾರ ರಚನೆಯಾದಾಗ ಶರದ್ ಪವಾರ್ ಅವರ ಪಕ್ಷದಿಂದ ಬೇರ್ಪಟ್ಟು ಬಿಜೆಪಿ ಮತ್ತು ಶಿವಸೇನೆ ಜೊತೆ ಸೇರಿ ಡಿಸಿಎಂ ಪಟ್ಟವನ್ನು ಅಲಂಕರಿಸಿದ್ದರು.

