ಮಂಡ್ಯ: ಬಿಜೆಪಿಗೆ ಮಂಡ್ಯ (Mandya) ಜಿಲ್ಲೆಯಲ್ಲಿ ನೆಲೆಯೇ ಇಲ್ಲ, ಅವರು ಹೇಗೆ ಜೆಡಿಎಸ್ ಮುಕ್ತ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ (Nalin Kumar Kateel) ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಟಾಂಗ್ ನೀಡಿದ್ದಾರೆ.
Advertisement
ಕಳೆದ ವಾರ ಮಂಡ್ಯದಲ್ಲಿ (Mandya) ನಡೆದ ಬಿಜೆಪಿ ಸಭೆಯಲ್ಲಿ ಮಂಡ್ಯದಲ್ಲಿ ಈಗಾಗಲೇ ಕಾಂಗ್ರೆಸ್ (Congress) ಮುಕ್ತವಾಗಿದೆ, ನಾವು ಜೆಡಿಎಸ್ (JDS) ಮುಕ್ತ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದರು. ಈ ಹೇಳಿಕೆಗೆ ಮಂಡ್ಯದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, ಮೊನ್ನೆ ಕಟೀಲ್ ಸಾಹೇಬ್ರು ಮಾತನಾಡುವ ವೇಳೆ ಬಹುತೇಕ ಎಲ್ಲ ಕುರ್ಚಿಗಳು ಖಾಲಿಯಾಗಿದ್ದವು. ಮಂಡ್ಯದಲ್ಲಿ ಜೆಡಿಎಸ್ ಮುಕ್ತ ಮಾಡುವುದಕ್ಕೆ ಬಿಜೆಪಿಗೆ ಮಂಡ್ಯದಲ್ಲಿ ನೆಲೆಯೇ ಇಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ನಾನು ಇಷ್ಟಪಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್ ಸಿಗದೇ 3 ವರ್ಷದ ಮಗಳ ಮೃತದೇಹವನ್ನು ಬೈಕ್‌ನಲ್ಲೇ ಹೊತ್ತೊಯ್ದ ತಂದೆ
Advertisement
Advertisement
ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಾ ನಾಯಕ ಎಂಬ ಕಟೀಲ್ ಹೇಳಿಕೆಗೆ, ಕುಮಾರಣ್ಣ ಮಂಡ್ಯಕ್ಕೆ ಬಜೆಟ್‍ನಲ್ಲಿ ಎಂಟೂಮುಕ್ಕಾಲು ಸಾವಿರ ಕೋಟಿ ಮೀಸಲಿಟ್ಟಿದ್ದರು. ಆಗ ಬಿಜೆಪಿಯವರು ಲಘುವಾಗಿ ಮಾತನಾಡಿದರು. ಮಂಡ್ಯ, ರಾಮನಗರ, ಹಾಸನಕ್ಕೆ ಸೀಮಿತವಾದ ಬಜೆಟ್ ಅಂದರು. ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಆ ಅನುದಾನ ಏನಾಯಿತು ಅಂತ ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ – ತಿದ್ದುಪಡಿಯು ಸಂವಿಧಾನ ಬದ್ಧವಾಗಿದೆ: ಸುಪ್ರೀಂಕೋರ್ಟ್