ನವದೆಹಲಿ: ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ನಡೆಯುತ್ತಿರುವಾಗ ಅಭ್ಯರ್ಥಿಯೊಬ್ಬರ ಸಹಾಯಕರು ಅನಧಿಕೃತವಾಗಿ ಅಧಿಕೃತ ವ್ಯಕ್ತಿಯ ಮೊಬೈಲ್ ಬಳಸಿದ್ದನ್ನು ಚುನಾವಣಾ ಆಯೋಗ (Election Commission) ಇಂದು ಒಪ್ಪಿಕೊಂಡಿದೆ.
ಮುಂಬೈ ವಾಯುವ್ಯ ಕ್ಷೇತ್ರದಿಂದ ಶಿವಸೇನೆಯ ರವೀಂದ್ರ ವೈಕರ್ ಗೆದ್ದಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಚುನಾವಣಾ ಆಯೋಗ, ಚುನಾವಣಾಧಿಕಾರಿ ಈಗಾಗಲೇ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ ಎಂದಿದೆ. ಇದನ್ನೂ ಓದಿ: ಗುಜರಾತ್ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ
ವಿದ್ಯುನ್ಮಾನ ಮತಯಂತ್ರ (EVM) ಅನ್‌ಲಾಕ್ ಮಾಡಲು ಮೊಬೈಲ್ ಫೋನ್ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆರೋಪಿಸಲಾಗಿತ್ತು.
ಇವಿಎಂ ಬಗ್ಗೆ ತಪ್ಪು ಮಾಹಿತಿ ಹರಡಿದ ಮತ್ತು ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಅನುಮಾನಗಳನ್ನು ಸೃಷ್ಟಿಸಿದ್ದಕ್ಕಾಗಿ ಪತ್ರಿಕೆಯೊಂದಕ್ಕೆ ಚುನಾವಣಾಧಿಕಾರಿ ನೋಟಿಸ್ ನೀಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಹೆಚ್ಚಿದ ತಾಪ – ಎಸಿಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳ `ನಿದ್ರಾ’ ಪ್ರತಿಭಟನೆ!
ಇವಿಎಂ ಅನ್‌ಲಾಕ್ ಮಾಡಲು ಮೊಬೈಲ್ ಫೋನ್‌ನಲ್ಲಿ ಯಾವುದೇ ಒಟಿಪಿ ಇಲ್ಲ. ಏಕೆಂದರೆ ಅದು ಪ್ರೋಗ್ರಾಮೆಬಲ್ ಆಗಿಲ್ಲ. ಅದು ವೈರ್‌ಲೆಸ್ ಸಂವಹನ ಸಾಮರ್ಥ್ಯವನ್ನು ಹೊಂದಿಲ್ಲ. ಇದು ಪತ್ರಿಕೆಯೊಂದರ ಸುಳ್ಳು ಸುದ್ದಿ. ಇದನ್ನು ಕೆಲವು ನಾಯಕರು ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಬಳಸುತ್ತಿದ್ದಾರೆ ಎಂದು ಆಯೋಗ ಸ್ಪಷ್ಟಪಡಿಸಿದೆ.