ಬೆಂಗಳೂರು: ಹೊಸ ರೇಷನ್ ಕಾರ್ಡ್ (Ration Card) ಪಡೆಯುವ ಆಸೆ ಇಟ್ಟುಕೊಂಡಿರುವವರಿಗೆ ಕೊಟ್ಟ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಸರ್ಕಾರದಿಂದ ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಅನ್ನು ಹಂಚಿಕೆ ಮಾಡಲ್ಲ ಎಂದು ಆಹಾರ ಸಚಿವ ಮುನಿಯಪ್ಪ (KH Muniyappa) ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ವಿಧಾನಸಭೆಯಲ್ಲಿ ಅಶೋಕ್ ಕುಮಾರ್ ರೈ ಮತ್ತು ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರ ನೀಡಿದ ಮುನಿಯಪ್ಪ, ರಾಜ್ಯದಲ್ಲಿ ಕೇಂದ್ರ ನಿಗದಿ ಮಾಡಿದ್ದ ಕಾರ್ಡ್ ನಿಗದಿ ಗುರಿ ಮುಕ್ತಾಯವಾಗಿದೆ. ಹೊಸ ಕಾರ್ಡ್ ಕೊಡಲು ಅವಕಾಶ ಇಲ್ಲ. ಅನರ್ಹರ ಕಾರ್ಡ್ ರದ್ದು ಮಾಡೋವರೆಗೂ ಹೊಸ ಕಾರ್ಡ್‌ಗಳು ಕೊಡಲ್ಲ ಎಂದರು. ಹೀಗಾಗಿ ಸದ್ಯಕ್ಕೆ ಹೊಸ ಅರ್ಜಿ ಹಾಕಿರುವ ಜನರು ಬಿಪಿಎಲ್ ಕಾರ್ಡ್‌ಗಾಗಿ ಕಾಯಲೇಬೇಕು. ಇದನ್ನೂ ಓದಿ: ತುಮಕೂರು ಮಹಾನಗರ ಪಾಲಿಕೆಗೆ 3 ಕೋಟಿ ರೂ. ಪಂಗನಾಮ
ರೇಷನ್ ಕಾರ್ಡ್ ಬಗ್ಗೆ ಸರ್ಕಾರ ಹೇಳಿದ್ದೇನು?
ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಕೊಡಲು ಸರ್ಕಾರದಲ್ಲಿ ಅವಕಾಶವಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಅನ್ವಯ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಗುರಿ ನಿಗದಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ನಿಯಮ ಮೀರಿ 4,50,59,460 ಫಲಾನುಭವಿಗಳಿಗೆ ಪಡಿತರ ಕೊಡಲಾಗುತ್ತಿದೆ. ಕಾಯ್ದೆ ಪ್ರಕಾರ ನಿಗದಿ ಮಾಡಿರುವ ಫಲಾನುಭವಿಗಳಿಗೆ ಪಡಿತರ ಈಗಾಗಲೇ ಕೊಡಲಾಗುತ್ತಿದೆ. ಹೊಸ ರೇಷನ್ ಕಾರ್ಡ್ ಕೊಡಬೇಕಾದರೆ ಅನರ್ಹ ಕಾರ್ಡ್ ರದ್ದು ಮಾಡಿ ಅದೇ ಪ್ರಮಾಣದಲ್ಲಿ ಹೊಸ ಕಾರ್ಡ್ ಕೊಡಬೇಕಾಗುತ್ತದೆ. ಅನರ್ಹ ಕಾರ್ಡ್ ರದ್ದು ಮಾಡೋವರೆಗೂ ಹೊಸ ಕಾರ್ಡ್ ಕೊಡಲು ಸಾಧ್ಯವಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಇದನ್ನೂ ಓದಿ: ಇಂದು ರಾಜ್ಯ ಬಜೆಟ್ ಮಂಡನೆ – ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್ ಪ್ರತಿಭಟನೆ
ಈಗಾಗಲೇ ಹೊಸ ಕಾರ್ಡ್‌ಗಾಗಿ ಮಾರ್ಚ್ 2023 ಅಂತ್ಯಕ್ಕೆ 2,95,986 ಅರ್ಜಿಗಳು ಬಂದಿವೆ. ಹೊಸ ಅರ್ಜಿಗಳಿಗೆ ಅನುಮತಿ ಕೊಡಲು ಅನರ್ಹ ಕಾರ್ಡ್ ರದ್ದು ಮಾಡಿ ಕೊಡಬೇಕು. ಅನರ್ಹ ಕಾರ್ಡ್ ರದ್ದು ಮಾಡೋವರೆಗೂ ಹೊಸ ಕಾರ್ಡ್ ಕೊಡಲ್ಲ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ತಿರುಪತಿ ಅನ್ನ ಪ್ರಸಾದಕ್ಕೆ ಮಸಾಲೆ ವಡೆ ಸೇರ್ಪಡೆ- ತಿಮ್ಮಪ್ಪನ ಭಕ್ತರಿಗೆ ದ.ಭಾರತದ ಖಾದ್ಯ