– ಸಿಬಿಐ ತನಿಖೆಗೆ ಹೋದರೆ ನಾವು ಸಹಕರಿಸಲು ಸಿದ್ಧ
ಬೆಂಗಳೂರು: ವಾಲ್ಮೀಕಿ ನಿಗಮ (Valmiki Development Corporation) ಬಹುಕೋಟಿ ಅಕ್ರಮದಲ್ಲಿ ನಾವು ಯಾರ ರಕ್ಷಣೆ ಮಾಡೋದಿಲ್ಲ. ಬಿಜೆಪಿ ಅವಧಿಯಲ್ಲಿ ವಾಲ್ಮೀಕಿ ನಿಗಮದ ರೀತಿ ಅಕ್ರಮ ನಡೆದಿತ್ತು. ಸದ್ಯ ಸಿಬಿಐಗೆ ಕೇಸ್ ಕೊಡುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರನ್ನೂ ರಕ್ಷಣೆ ಮಾಡೋದಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಿ. ಅವರ ರಾಜಕಾರಣ ಅವರು ಮಾಡ್ತಾರೆ. ಬೇಕಾದಷ್ಟು ವಿಚಾರಗಳಿವೆ. ನಾನು ಯಾವುದನ್ನು ಪ್ರಶ್ನೆ ಮಾಡೋದಿಲ್ಲ. ಬಿಜೆಪಿ ಸರ್ಕಾರದಲ್ಲೂ ಈ ರೀತಿ ವಿಚಾರಗಳು ನಡೆದಿವೆ. ಬಸವರಾಜ್ ಬೊಮ್ಮಾಯಿಗೂ ಗೊತ್ತಿದೆ ಎಲ್ಲರಿಗೂ ಗೊತ್ತಿದೆ. ಎಲ್ಲಾ ವಿಚಾರಣೆಗಳನ್ನು ಮಾಡಬೇಕಿದ್ದು, ನಾವು ಮಾಡ್ತೀವಿ ಎಂದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ತನಿಖಾ ತಂಡ
ನಾವು ಯಾರನ್ನೂ ರಕ್ಷಣೆ ಮಾಡಲ್ಲ. ಈಶ್ವರಪ್ಪ ಪ್ರಕರಣದಲ್ಲಿ ಅವರಿಗೆ ನೇರವಾಗಿ ಹೇಳಿದರು. ಇಂಥವರೇ ಎಂದು ಹೇಳಿದರು. ಆದರೆ ಈ ಪ್ರಕರಣದಲ್ಲಿ ಹೇಳಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ ಅಂತ ಹೇಳಿದ್ದಾರೆ. ನಮಗೇನಾದ್ರು ದಾಖಲೆ ಫ್ರೂಫ್ ಇನ್ವಾಲ್ಮೆಂಟ್ ಏನಾದರೂ ಇದ್ರೆ, ನಮ್ಮ ಸರ್ಕಾರ ಏನ್ ಮಾಡಬೇಕೋ ಪಾರದರ್ಶಕವಾಗಿ ತನಿಖೆ ಮಾಡಿಸುತ್ತೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲಿ ಬರೋದಿಲ್ಲ. ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಧಿಕಾರಿಗಳು ಎಲ್ಲೆಲ್ಲಿ ಹೋಗಿ ಏನ್ ಮಾಡಿದ್ದಾರೆ ಅನ್ನೋದನ್ನ ಟ್ರೇಸ್ ಮಾಡ್ತಿದ್ದಾರೆ. ನಮಗೂ ಒಂದರೆಡು ದಿನ ಟೈಂ ಬೇಕು. ಕೆಲವೊಬ್ಬರು ಅರೆಸ್ಟ್ ಆಗಿದ್ದಾರೆ. ಏನ್ ಆಕ್ಷನ್ ತಗೋಬೇಕು ಅಂತಾ ಕೂಡ ಆಗಿದೆ. ಹಿಂದೆಯೆಲ್ಲ ನಾವು ಮಾದರಿಯಾಗಿದ್ದೇವೆ. ಮಿನಿಸ್ಟರ್ ಸಹ ಸಿಎಂ ಜೊತೆ, ನನ್ನ ಜೊತೆ ಮಾತನಾಡಿದ್ದಾರೆ ಎಂದರು. ಇದನ್ನೂ ಓದಿ: ಎಸ್‌ಟಿ ನಿಗಮ ಹಗರಣ – ವಾಲ್ಮೀಕಿ ನಿಗಮ ಎಂಡಿ, ಲೆಕ್ಕಾಧಿಕಾರಿ ಬಂಧನ
ಸಿಎಂ ಮೌಖಿಕ ಆದೇಶ ಮೇರೆಗೆ ಹಣ ವರ್ಗಾವಣೆ ಆಗಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರವಿ ಅಂತಾ ನನ್ನ ಮೇಲೆ ಆರೋಪ ಮಾಡಿದ್ದಾನೆ. ನಾನು ಅವನು ಇಬ್ಬರು ಪಾರ್ಟ್ನರ್ಸ್. ಇಬ್ಬರು ಆಗಿ ಹಂಚಿಕೊಂಡಿದ್ದೀವಿ ಎಂದು ಸಿ.ಟಿ. ರವಿ ವಿರುದ್ದ ವ್ಯಂಗ್ಯವಾಡಿದರು.
ಯೂನಿಯನ್ ಬ್ಯಾಂಕ್‌ನಿಂದ ಸಿಬಿಐ ತನಿಖೆಗೆ ಪತ್ರ ಬರೆದ ಬಗ್ಗೆ ಮಾತನಾಡಿ, ಇರ್ಲಿ ಇರಲಿ ತಪ್ಪಿಲ್ಲ. ಒಂದು ಪ್ರೊಸೀಜರ್ ಇದೆ. ಇಷ್ಟು ಕೋಟಿ ಇದ್ದಾಗ ನಾನು ಕೊಡ್ಲಿ ಅಥವಾ ನೀವು ಕೊಡದೇ ಇದ್ದರೂ ಕೂಡ ಅದು ಸಿಬಿಐಗೆ ಹೋಗುತ್ತೆ. ಅದು ಒಂದು ಪ್ರೋಸಿಜರ್. U also know that. ನಮ್ಗೆ ಗೊತ್ತಿಲ್ಲ ಅಂತಾ ತಿಳಿದುಕೊಳ್ಳಬೇಡಿ. ಒಂದಿಷ್ಟು ಅಮೌಂಟ್ ಆದ್ಮೇಕೆ ಯಾವುದಾದರೂ ಬ್ಯಾಂಕ್‌ನಲ್ಲಿ ಹೀಗೆ ಆದ್ರೆ ಯಾವ ಸರ್ಕಾರವೂ ಕೊಡಬೇಕು ಅಂತಿಲ್ಲ. ಅವರು ತಗೋಬೇಕು ಅಂತೇನು ಇಲ್ಲ. ನ್ಯಾಚುರಲ್ ಆಗಿ ಅದು ಸಿಬಿಐ ತನಿಖೆಗೆ ಹೋಗುತ್ತೆ. ನಾವು ಸಹಕರಿಸಲು ಸಿದ್ಧರಿದ್ದೇವೆ. ಆದರೆ ರಾಜಕೀಯ ಇಲ್ಲದೇ ತನಿಖೆ ಮಾಡ್ಲಿ. ಸದ್ಯಕ್ಕೆ ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ. ನಾವೇ ತನಿಖೆ ಮಾಡ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ