ಬೆಂಗಳೂರು: ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಕಾಂಗ್ರೆಸ್‍ನ ಕೆಲವು ಮುಖಂಡರು ಪ್ರಶ್ನಿಸಿದ್ದರು ಹಾಗೂ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಬೆಳವಣಿಗೆಗೆ ಗುರುವಾರ ಜಯಮಾಲಾ ಉತ್ತರ ನೀಡಿದ್ದಾರೆ.
ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ಕಾಂಗ್ರೆಸ್ ಸಚಿವ ಎಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಜಯಮಾಲಾ ಟಾಂಗ್ ನೀಡಿದ್ದಾರೆ. ಇದನ್ನು ಓದಿ: ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಜಯಮಾಲಾ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿದೆ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಪದ ಪ್ರಯೋಗ ನನಗೆ ಸರಿ ಅನಿಸಲಿಲ್ಲ. ಅವರ ಮಾತುಗಳು ರಾಹುಲ್ ಗಾಂಧಿಯವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ ಎಂದಿದ್ದಾರೆ.
Advertisement
ಸಂವಿಧಾನ ಇಲ್ಲದಿದ್ದರೇ ಕೇವಲ ಪುರುಷರು ಮಾತ್ರ ದೇಶವನ್ನು ಆಳುತ್ತಿದ್ದರು. ನಮ್ಮನ್ನ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕುತ್ತಿದ್ದರು. ಕಾಂಗ್ರೆಸ್ಸಿಗೆ ಧ್ವನಿಪೆಟ್ಟಿಯಾಗಿದ್ದು ಹೆಣ್ಣು, ಇಂದಿರಾ ಗಾಂಧಿ ಪಕ್ಷಕ್ಕೆ ಬಲ ತುಂಬಿದ್ದರು. ಅಧಿನಾಯಕಿ ಸೋನಿಯಾ ಗಾಂಧಿ ಪಕ್ಷಕ್ಕೆ ಮರು ಚೇತನ ನೀಡಿದ್ದಾರೆ. ನನಗೆ ವಿಧಾನ ಪರಿಷತ್ ಸಭಾ ನಾಯಕಿಯಾಗಿ ಕೆಲಸ ಮಾಡುವ ಶಕ್ತಿಯಿದೆ. ನಾನು ಏನು ಗೊತ್ತಿಲ್ಲದೇ ರಾಜಕೀಯಕ್ಕೆ ಬಂದಿಲ್ಲ ಎಂದು ಟಾಂಗ್ ನೀಡಿದರು.