ಇದೇ ಮೊದಲ ಬಾರಿಗೆ ಸಂಕ್ರಾಂತಿ (Sankranti) ಹಬ್ಬದ ದಿನದಂದು ಕನ್ನಡದ (Kannada movie) ಯಾವುದೇ ಚಿತ್ರ ಬಿಡುಗಡೆ ಆಗುತ್ತಿಲ್ಲ. ಅಂದುಕೊಂಡಂತೆ ಆಗಿದ್ದರೆ, ಕನ್ನಡದ ರಂಗ ಸಮುದ್ರ ಸಿನಿಮಾ ರಿಲೀಸ್ ಆಗಬೇಕಿತ್ತು. ಪರಭಾಷೆಯ ಸಿನಿಮಾ ಹಾವಳಿಗೆ ತತ್ತರಿಸಿ ಈ ಸಿನಿಮಾ ಕೂಡ ರಿಲೀಸ್ ಆಗುತ್ತಿಲ್ಲ.
Advertisement
ಸಂಕ್ರಾಂತಿ ಹಬ್ಬದ ದಿನದಂದು ಅಷ್ಟಕ್ಕೂ ಯಾಕೆ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಸಿಕ್ಕ ಉತ್ತರ ಪರಭಾಷೆಯ ಎಂಟು ಅದ್ಧೂರಿ ಚಿತ್ರಗಳು ಬಿಡುಗಡೆ ಆಗುತ್ತಿವೆ. ಜೊತೆಗೆ ಕನ್ನಡದ ಕಾಟೇರ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸುನಾಮಿಗೆ ಅಪ್ಪಚ್ಚಿ ಆಗಬಾರದು ಎನ್ನುವ ಕಾರಣಕ್ಕಾಗಿ ಯಾವುದೇ ಚಿತ್ರವನ್ನು ರಿಲೀಸ್ ಮಾಡದೇ ಹಿಂದಕ್ಕೆ ಸರಿದಿದ್ದಾರೆ ನಿರ್ಮಾಪಕರು.
Advertisement
Advertisement
ಈ ಸಂಕ್ರಾಂತಿ ದಿನದಂದು ಶಿವರಾಜ್ ಕುಮಾರ್ ಮತ್ತು ಧನುಷ್ ಕಾಂಬಿನೇಷನ್ ನ ಕ್ಯಾಪ್ಟನ್ ಮಿಲ್ಲರ್, ಮಹೇಶ್ ಬಾಬು ಅಭಿನಯದ ‘ಗುಂಟೂರು ಖಾರಂ’, ವೆಂಕಟೇಶ್ ಅಭಿನಯದ ‘ಸೈಂಧವ’, ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’, ತೇಜ ಸಜ್ಜಾ ಅಭಿನಯದ ‘ಹನುಮ್ಯಾನ್’, ಶಿವಕಾರ್ತಿಕೇಯನ್ ಅಭಿನಯದ ‘ಆಯಲಾನ್’, ಅರುಣ್ ವಿಜಯ್ ಅಭಿನಯದ ‘ಮಿಷನ್ – ಚಾಪ್ಟರ್ 1’ ಮತ್ತು ಹಿಂದಿಯ ‘ಮೆರ್ರಿ ಕ್ರಿಸ್ಮಸ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವುಗಳು ಬಹುತೇಕ ಸ್ಟಾರ್ ನಟರ ಚಿತ್ರಗಳು ಮತ್ತು ಅದ್ಧೂರಿ ಬಜೆಟ್ ನಲ್ಲಿ ತಯಾರಾಗಿರುವಂಥವು.
Advertisement
ರಿಲೀಸ್ ಆಗಲಿರುವ ಚಿತ್ರಗಳು ಈಗಾಗಲೇ ನಿರೀಕ್ಷೆ ಮೂಡಿಸಿವೆ. ಕೆಲ ಚಿತ್ರಗಳು ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತಿವೆ. ಸಹಜವಾಗಿಯೇ ಥಿಯೇಟರ್ ಸಮಸ್ಯೆ ಹೊಸಬರಿಗೆ ಎದುರಾಗುತ್ತವೆ. ಹೀಗಾಗಿ ಕನ್ನಡದ ಯಾವುದೇ ಚಿತ್ರಗಳನ್ನು ಸಂಕ್ರಾಂತಿಗೆ ಬಿಡುಗಡೆ ಮಾಡದಿರಲು ನಿರ್ಮಾಪಕರು ನಿರ್ಧರಿಸಿದ್ದಾರೆ.