ಬೆಂಗಳೂರು: ಯಾವುದೇ ಮಠ, ಮಾನ್ಯಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಧಾರ್ಮಿಕ ದತ್ತಿ ಇಲಾಖೆಯ ಪ್ರಕಟಣೆಯನ್ನು ಈ ಕೂಡಲೇ ಹಿಂದೆ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಷತ್ ನಲ್ಲಿ ಮಾತನಾಡಿದ ಅವರು, ಹೈಕೋರ್ಟ್ ವಿಭಾಗಿಯ ಪೀಠದ ಆದೇಶದಂತೆ ಸಮಿತಿ ರಚನೆ ಮಾಡಿ ಸಾರ್ವಜನಿಕರ ಅಭಿಪ್ರಾಯಕ್ಕೆ ಸರ್ಕಾರ ಮುಂದಾಗಿತ್ತು. ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಹೊರತು ಪಡಿಸಿ ಬೇರೆಯವರ ಉಸಾಬರಿ ನಮಗೆ ಯಾಕೆ ಎಂದು ಪ್ರಶ್ನಿಸಿದರು.
ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ಇದು ತುಘಲಕ್ ಸರ್ಕಾರದ ರೀತಿ ನಡೆದುಕೊಳ್ಳುತ್ತಿದೆ. ಹಿಂದೂಗಳನ್ನ ಪದೇ ಪದೇ ಟಾರ್ಗೆಟ್ ಮಾಡುತ್ತಿದೆ. ಈ ಆದೇಶದಿಂದ ಮಠಾಧೀಶರಿಗೆ ಆಘಾತವಾಗಿದ್ದು ಸರ್ಕಾರ ಕೂಡಲೇ ಆದೇಶ ಹಿಂಪಡೆದು ಮಠಾಧೀಶರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸರ್ಕಾರದ ನೌಕರನಾಗಿ ನಾನು ಒಂದು ಕ್ಷಣವೂ ಇರಲಾರೆ: ಉಡುಪಿಯಲ್ಲಿ ಪೇಜಾವರಶ್ರೀ
ಇದು ತುಘಲಕ್ ಪಕ್ಷ ಎಂದ ಈಶ್ವರಪ್ಪ ಟೀಕಿಸಿದಾಗ 2007ರ ಮಾರ್ಚ್ 1 ರಂದು ರಾಮಾ ಜೋಯಿಸ್ ಅಧ್ಯಕ್ಷತೆಯ ಸಮಿತಿ ಇದೆ ರೀತಿ ಆದೇಶ ಮಾಡಿತ್ತು ಎಂದು ಸಿಎಂ ಉತ್ತರಿಸಿದರು. ಇದಕ್ಕೆ ಈಶ್ವರಪ್ಪ ಅಂದು ಸಮಿತಿ ಆದೇಶ ಮಾಡಿತ್ತು, ಇಂದು ಸರ್ಕಾರವೇ ಆದೇಶ ಮಾಡಿದೆ ಎಂದು ತಿರುಗೇಟು ನೀಡಿದರು.
ಈ ವೇಳೆ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಸಭಾತ್ಯಾಗ ಮಾಡಿತು. ಮಠ ಮಾನ್ಯಗಳ ಧ್ವನಿಯಾಗಿ ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಜೆಡಿಎಸ್ ಸಭಾತ್ಯಾಗ ಮಾಡಿತು. ಇದನ್ನೂ ಓದಿ: ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ
https://www.youtube.com/watch?v=wcUoOzXNf6Y