ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ (Lok Sabha Election Result) ಮೇಲೆ ಸಚಿವರ ತಲೆದಂಡದ ವಿಚಾರ ಚರ್ಚೆ ಆಗಿಲ್ಲ, ಸೂಚನೆಯೂ ಇಲ್ಲಾ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಚಿವರ ಕ್ಷೇತ್ರದ ಲೀಡ್ ವಿಚಾರದಲ್ಲಿ ಕೆಲವು ಕಡೆ ಲೀಡ್ ಕಡಿಮೆ ಆಗಿದೆ ಹೌದು. ಕೆಲವರು ಅವರೇ ಉತ್ತರ ಕೊಡುತ್ತಾರೆ. ಲಕ್ಷ್ಮಣ್ ಸವದಿ ಕ್ಷೇತ್ರದಲ್ಲಿ ಅವರ ಚುನಾವಣೆಯಲ್ಲಿ 76,000 ಲೀಡ್ ಆಗಿದೆ. ಈ ಬಾರಿ 8,000 ಮೈನಸ್ ಆಗಿದೆ. ಯಾಕೆ ಅಂತ ಅವರೇ ಹೇಳಬೇಕು. ಸಹಜವಾಗಿಯೇ ಒಳ ಏಟು ಅನ್ನೋ ಥರಾನೆ ಚರ್ಚೆ ಆಗುತ್ತೆ ಅಲ್ವಾ. ಕುಡಚಿ ಶಾಸಕರು 2 ದಿನ ಮೊಬೈಲ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದರು. ಚುನಾವಣೆ ದಿನ ಶಾಸಕರು ತಿರುಗಾಡಬೇಕು, ಅದು ಇಲ್ಲ. ಯಾರು ಯಾವ ಕಡೆ ಮಾಡಿದರು ಅದು ಎಲ್ಲರಿಗೂ ಗೊತ್ತು. ನಮಗಿರುವ ಮಾಹಿತಿ ನಾವು ಮಾತನಾಡಿದ್ದೇವೆ ಎಂದರು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ – ಮೂವರು ಬ್ಯಾಂಕ್ ಸಿಬ್ಬಂದಿಗೆ ಎಸ್‌ಐಟಿ ನೋಟಿಸ್
Advertisement
Advertisement
ಲಕ್ಷ್ಮಣ್ ಸವದಿಯವರಿಗೆ ರಾಜಕೀಯವಾಗಿ ಗಟ್ಟಿಯಾಗುವ ಅವಕಾಶ ಇತ್ತು. ಈಗ ಅದು ಅಲ್ಲಿಗೆ ನಿಂತಿದೆ. ಯಾಕೆ ಹೀಗಾಯಿತು ಎಂದು ಅವರೇ ಹೇಳಬೇಕು. ಅವರೇ ಸ್ಪಷ್ಟೀಕರಣ ಕೊಟ್ಟರೆ ಗೊತ್ತಾಗುತ್ತದೆ. ನಾವು ಲೀಡ್ ಕಡಿಮೆ ಆಗಿದೆ ಅಷ್ಟೆ ಹೇಳೋದು. ಸಚಿವರ ಕ್ಷೇತ್ರದ ಲೀಡ್ ಕಡಿಮೆ ಬಗ್ಗೆ ರಾಹುಲ್ ಗಾಂಧಿ ಕೇಳಿದ್ದು ಸ್ವಾಭಾವಿಕ. ರಿಪೋರ್ಟ್ ಕಾರ್ಡ್ ಅನ್ನೋಕೆ ನಾವು ಸರ್ಕಾರಿ ನೌಕರರಲ್ಲ. ಎಲ್ಲಾ ಚುನಾವಣೆಯಲ್ಲು ಎಲ್ಲಾ ಅಧ್ಯಕ್ಷರು ಸಿಎಂಗೆ ವರದಿ ಕೊಡುತ್ತಾರೆ. ಸಚಿವರ ತಲೆದಂಡದ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ. ಸೂಚನೆಯೂ ಇಲ್ಲಾ ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸಿಎಂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಎನ್.ರವಿಕುಮಾರ್ ಆಗ್ರಹ
Advertisement
Advertisement
ಎಂಎಲ್‌ಎ ಚುನಾವಣೆ ನೋಡೋ ದೃಷ್ಟಿ ಬೇರೆ ಲೋಕಸಭೆ ನೋಡೋ ದೃಷ್ಟಿ ಬೇರೆ. ಮೊನ್ನೆ ಕೆಲವರು ನಮಗೆ ಮತ ಹಾಕಿಲ್ಲ. ಎಂಎಲ್‌ಎ ಚುನಾವಣೆ ಬಂದರೆ ನಮಗೆ ಹಾಕುತ್ತಾರೆ. ಗ್ಯಾರಂಟಿ ನಮ್ಮ ಕೈ ಹಿಡಿದಿದೆ. ಸಾಕಷ್ಟು ಬಿಜೆಪಿ ಯವರು 1 ಲಕ್ಷದ ಒಳಗೆ ಸೋತಿದ್ದಾರೆ. 7 ಸ್ಥಾನ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಹಳೆ ಮೈಸೂರಿಗಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚು ಗ್ಯಾರಂಟಿ ವರ್ಕ್ ಆಗಿದೆ. ಗ್ಯಾರಂಟಿ ನಿಲ್ಲಿಸಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಹೋದ ಬಾರಿ 1 ಸ್ಥಾನ ಗೆದ್ದಿದ್ದೆವು. ಈ ಬಾರಿ 9 ಗೆದ್ದಿದ್ದೇವೆ, ಸಮಾಧಾನ ಇದೆ. 7 ಸ್ಥಾನ ಕಡಿಮೆ ಅಂತರದಲ್ಲಿ ಸೋತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಆಸೆ: ಜಿ.ಪರಮೇಶ್ವರ್