– ರಾಜಕಾರಣದಲ್ಲಿ ಬೆಳವಣಿಗೆ ಓವರ್ ನೈಟೇ ಆಗೋದು ಎಂದ ಸಂಸದ
ಬೆಂಗಳೂರು: ಡಿಕೆಶಿ, ಅಮಿತ್ ಶಾ ಇಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದ್ಗುರು ಕಾರ್ಯಕ್ರಮದಲ್ಲಿ ಮೋದಿ ಅವರು ಹಿಂದೆ ಭಾಗವಹಿಸಿದ್ದರು. ಅಮಿತ್ ಶಾ ಅವರು ಭಾಗಿಯಾಗಿದ್ದರು. ನಾವೂ ಸಹ ಸಾಕಷ್ಟು ಸಲ ಭಾಗಿವಹಿಸಿದ್ದೆವು. ಆದರೆ, ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ವ್ಯಾಖ್ಯಾನ ನಡೆಯುತ್ತಿರುವುದು ಅವರ ಪಕ್ಷದ ವಿಚಾರ ಎಂದು ಹೇಳಿದರು.
Advertisement
ಅದು ಆ ಪಕ್ಷದ ಅಪನಂಬಿಕೆ ಮತ್ತು ಗೊಂದಲದ ಸಂಕೇತ. ಅಪನಂಬಿಕೆ ಇದೆ, ಅದಕ್ಕೆ ಅಪಸ್ವರ ಇದೆ. ಡಿಕೆಶಿ ಬಿಜೆಪಿ ಸೇರುವ ಕುರಿತು ಯಾವುದೇ ಚರ್ಚೆ ಇಲ್ಲ. ರಾಜಕಾರಣದಲ್ಲಿ ಬೆಳವಣಿಗೆ ಕ್ಷಿಪ್ರವೇ ಆಗೋದು, ಓವರ್ ನೈಟ್ ಆಗೋದು. ಪ್ರಶ್ನೆ ಅದಲ್ಲ. ಆದರೆ, ನಮ್ಮ ತಿಳಿವಳಿಕೆಯಲ್ಲಿ ಆ ರೀತಿ ಯಾವುದೇ ಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನ ತೇಲಿಬಿಡ್ತೀರಿ. ಎಲ್ಲರೂ ಒಟ್ಟಿಗೆ ಶಕ್ತಿಯಾಗಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಬೇಕು. ಎಲ್ಲರನ್ನೂ ಒಳಗೊಂಡಂತಹ ಸಂಘಟನೆ ಮಾಡುವ ಉದ್ದೇಶ ಇದೆ ಎಂದು ಹೇಳಿದರು.