ಉಡುಪಿ: ಸಿಎಂ ಸಿದ್ದರಾಮಯ್ಯ ಹಾಗೂ ಔರಂಗಜೇಬ್‌ಗೂ ಯಾವುದೇ ವ್ಯತ್ಯಾಸ ಇಲ್ಲ. ತೆರಿಗೆ ಲೂಟಿ ಮಾಡುವ ಸಿಎಂಗೆ ಔರಂಗಜೇಬನೇ ಪ್ರೇರಣೆ ಎಂದು ಶಾಸಕ ಹರೀಶ್ ಪೂಂಜಾ ವಾಗ್ದಾಳಿ ನಡೆಸಿದರು.
ರಾಜ ಸರ್ಕಾರದಿಂದ ಕರಾವಳಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಸಿಎಂ ವಿರುದ್ಧ ಹರೀಶ್ ಪೂಂಜಾ ಕಿಡಿಕಾರಿದರು.
ಬಹುಸಂಖ್ಯಾತ ಹಿಂದೂಗಳ ಹಣ ದೋಚಿ ಮುಸಲ್ಮಾನರಿಗೆ ಬೇಕಾಬಿಟ್ಟಿ ಯೋಜನೆ ನೀಡುತ್ತಿದ್ದಾರೆ. ಹಿಂದೂಗಳಿAದ ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತಾರೆ. ಆ ಹಣವನ್ನು ಮುಸಲ್ಮಾನರಿಗೆ ಹಂಚಿಕೆ ಮಾಡುತ್ತಾರೆ. ಔರಂಗಜೇಬ್ ಜಿಝಿಯಾ ಎಂಬ ತೆರಿಗೆ ಮೂಲಕ ಹಣ ಸಂಗ್ರಹ ಮಾಡುತ್ತಿದ್ದ. ನಮ್ಮ ರಾಜ್ಯದಲ್ಲಿ ಔರಂಗಜೇಬನ ಆಡಳಿತ ಇದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ನಮ್ಮ ರಾಜ್ಯದ ಹಿಂದೂಗಳು ಏನು ಅನ್ಯಾಯ ಮಾಡಿದ್ದರು? 2028 ರ ವರೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲ್ಲ. ಸಾಂಬಾಜಿ ರೀತಿಯಲ್ಲೇ ಕಾಂಗ್ರೆಸ್ ಸರ್ಕಾರವನ್ನು ಕೂಡಾ ಹೊಡೆದೋಡಿಸುತ್ತೇವೆ ಎಂದು ಎಚ್ಚರಿಸಿದರು.